ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ.

ವದೆಹಲಿ: ದೇಶಾದ್ಯಂತ ವಿಪರೀತ ಚಳಿ, ಶೀತಗಾಳಿ ಮುಂದುವರೆದಿರುವಾಗಲೇ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಜನವರಿ 24 ರಿಂದ ವ್ಯಾಪಕ ಮಳೆಯಾಗಲಿದೆ.

ಪರ್ವತ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಜಮ್ಮು-ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ವಿಜ್ಞಾನಿ ಸೇನ್ ರಾಯ್ ಮಾಹಿತಿ ನೀಡಿದ್ದಾರೆ.

ಮಂಡಿ, ಕಾಂಗ್ರಾ, ಚಂಬಾ, ಶಿಮ್ಲಾ, ಕುಲು, ಲಾಹೌಲ್ ಸ್ಪತಿ, ಕಿನ್ನೌರ್ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಹಾಗೂ ಹಿಮಪಾತ ಸಂಭವಿಸಲಿದೆ. ಜನವರಿ 25ರವರೆಗೆ ಬೆಟ್ಟ ಪ್ರದೇಶಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ ಕೆಲ ದಿನಗಳವರೆಗೆ ದೆಹಲಿಯಲ್ಲಿ ಮಂಜು ಕವಿದ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನುಗ್ಗೆಕಾಯಿಯಷ್ಟೇ, ಸೋಪ್ಪಿನಲ್ಲೂ ಆರೋಗ್ಯ ಪ್ರಯೋಜನವಿದೆ.

Mon Jan 23 , 2023
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ತರಕಾರಿಗಳು.. ಪ್ರಕೃತಿಯಿಂದ ಒದಗಿಸಲಾದ ಅದ್ಭುತ ಪೋಷಕಾಂಶಗಳು. ನಾವು ಪ್ರತಿದಿನ ತಿನ್ನುವ ತರಕಾರಿಗಳಿಂದ ನಮ್ಮ ದೇಹವು ಶಕ್ತಿಯನ್ನು ವೃದ್ಧಿಸಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ತರಕಾರಿಗಳು ಸಹ ಬಹಳ ಉಪಯುಕ್ತವಾಗಿವೆ. ವ್ಯಾಪಕವಾಗಿ ಲಭ್ಯವಿರುವ ನುಗ್ಗೆಕಾಯಿಯಿಂದ ಉತ್ತಮ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಾನು ಅದನ್ನು ಸಾಂಬಾರ್ ಬಳಕೆ ಮಾಡಲಾಗುತ್ತದೆ , ಆಯುರ್ವೇದ ಪ್ರಕಾರ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮೂಳೆಗಳನ್ನು ಬಲಪಡಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು. ಪಟ್ಟಿ […]

Advertisement

Wordpress Social Share Plugin powered by Ultimatelysocial