ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜನ ಸಂಪರ್ಕ ಕಾರ್ಯಲಯ ಉದ್ಘಾಟನೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಾರ್ಡ ನಂಬರ್ 22 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜನ ಸಂಪರ್ಕ ಕೇಂದ್ರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಶ್ರೀ ಸಿದ್ದೇಶ್ವರ ಸ್ವಾಮಿಜಿ ಮತ್ತು ಜಗತ್ಮಾನಂದ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ

ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಅಶೋಕ ಮ ಪಟ್ಟಣ.

ಜನ ಸಂಪರ್ಕ ಕೇಂದ್ರ ಇದು ಸಾರ್ವಜನಿಕರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಆಧಾರ ಕಾರ್ಡ್, ರೇಷನ್ ಕಾರ್ಡ್, ಓಟರ್ ID ಮತ್ತು ಹಲವಾರು ಸರಕಾರಿ ಸಂಭಂದಪಟ್ಟ ಕೆಲಸಗಳಿಗೆ
ಈ ಕೇಂದ್ರಕ್ಕೆ ಬಂದು ನಿಮ್ಮ ಸಮಸ್ಯೆ ಹೇಳಿ
ಮತ್ತು ಭಾಗ್ಯ ನಗರ ಮತ್ತು ಶ್ರೀಪತಿ ನಗರಗಳಲ್ಲಿ ಬಹಳ ಸಮಸ್ಯೆ ಇದೆ ಈಗತಾನೆ ಮಾತನಾಡಿದ ಎಲ್ಲಾ ಮುಖಂಡರಿಂದ ಕೆಳಪಟ್ಟೆ ಇಲ್ಲಿ ಇದ್ದಂತಾ ಜನರಿಗೆ ಮನೆಗಳಿಗೆ ಪಟ್ಟಣದಲ್ಲಿ ಕುಡಿಲಿಕ್ಕೆ 24×7ಶುದ್ಧ ನೀರು ಮತ್ತು ಯಾರಿಗೆ ಮನೆಯಿಲ್ಲಾ ಅವರಿಗೆ ವದಗಿಸುವ ವ್ಯವಸ್ಥೆ ಮಾಡುವೆ.

ಈಗ ಇದಂತಾ ಸರ್ಕಾರ 40%ಸರ್ಕಾರ ಈ ಸರಕಾರ ಶ್ರೀಮಂತ ಸರ್ಕಾರ ಬಡವರ ಸರಕಾರ ವಲ್ಲಾ ನಮ್ಮ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಅದಕ್ಕೆ ನೀವು ಮುಂದಿನ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಯ್ಕೆ ಮಾಡಿ ಬಡವರ ಪರವಾಗಿ ಕೆಲಸ ಮಾಡುತ್ತೆವೆ. ಎಂದು ನುಡಿದರು

ಈ ಸಂಧರ್ಭದಲ್ಲಿ ಕೆಪಿಸಿಸಿ ಸದಸ್ಯ ಸುರೇಶ ಪತ್ತೆಪುರ, ಇಮಾಮ ಕಲಾದಗಿ, ಕಾಂಗ್ರೆಸ್ ತಾಲೂಕಾ ಅಧ್ಯಕ್ಷ G B ರಂಗನಗೌಡ, ಕಾಂಗ್ರೆಸ್ ನಗರ ಅಧ್ಯಕ್ಷ ಶೇಖರ್ ಸಿದ್ದಲಿಂಗಪ್ಪನವರ, ಬೆಳಗಾವಿ ಜಿಲ್ಲಾ ಗ್ರಾಮೀಣ ಅಲ್ಪಸಂಖ್ಯಾತ ಅಧ್ಯಕ್ಷ ಜಹುರ ಹಾಜಿ,ಹಜರತ ಪೈಲವಾನ ಮತ್ತು ಕಾಂಗ್ರೆಸಿನ ಎಲ್ಲಾ ಪುರಸಭೆ ಸದಸ್ಯರು ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕ ವರದಿ.

ಸುನ್ನಾಳ ಸರ್ಕಾರಿ ಪ್ರೌಢಶಾಲೆ ಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ರಾಷ್ಟ್ರೀಯ ಪಕ್ಷಿಗಳ ದಿನಾಚರಣೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಸುನ್ನಾಳದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ರಾಷ್ಟ್ರೀಯ ಪಕ್ಷಿಗಳ ದಿನಾಚರಣೆ ಅಂಗವಾಗಿ ಗಣಿತ ಮಾದರಿಗಳ ಪ್ರದರ್ಶನ ಹಾಗೂ ರಾಮದುರ್ಗದ ಅರಣ್ಯ ಇಲಾಖೆಯ ಅಧಿಕಾರಿಗಳು ಪಕ್ಷಿಗಳ ಬಗ್ಗೆ ತಾವು ಮಾಡಿದ ಸಂಶೋಧನೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಹಾಗೂ ವಿಜ್ಞಾನ ಶಿಕ್ಷಕರಾದ ಶ್ರೀ ಎಸ್ ಎ ಬಾಣಕಾರ ಇವರು ಕಡ್ಡಿ ಪಟ್ಟಣ ಹಾಗೂ ದಾರದ ಮ್ಯಾಜಿಕ್ ಹಾಗೂ ಮರಕುಟಿಗ ಹಕ್ಕಿ ಮತ್ತು ಏರುವ ಹಲ್ಲಿ ಮ್ಯಾಜಿಕ್ ಮಾಡಿ ತೋರಿಸಿದರು.

ಈ ಕಾರ್ಯಕ್ರಮದಲ್ಲಿ ರಾಮದುರ್ಗದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಆನಂದ ಹಣಸಿ ಹಾಗೂ ಹೊಸಮನಿ ಮತ್ತು ಹಿರೇಮಠ ಸರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಂ ಎಚ್ ಭಜಂತ್ರಿ, ಶಿಕ್ಷಕ ವೃಂದ ಸೇರಿದಂತೆ ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಥಗ್ಸ್ ಆಫ್ ರಾಮಗಡ ಈ ವಾರ ಬಿಡುಗಡೆ.

Sun Jan 8 , 2023
  ಥಗ್ಸ್ ಆಫ್ ರಾಮಗಡ ಈ ವಾರ ಬಿಡುಗಡೆಯಾದ ಚಿತ್ರಗಳಲ್ಲಿ ವಿಭಿನ್ನ ಕಥಹಂದರ ಹೊಂದಿರುವ ಚಿತ್ರ. ಹಣಕ್ಕಾಗಿ ರೋಡ್ ರಾಬ್ರಿ, ಬ್ಯಾಂಕ್ ರಾಬರಿ ಗಳಂತಹ ದೊಡ್ಡ ಮಟ್ಟದ ಕಳ್ಳತನಗಳಿಗೆ ಸ್ಕೆಚ್ ಹಾಕಿ ಮಿಸ್ ಆಗದೆ ಕ್ಷಣಾರ್ಧದಲ್ಲಿ ಮಾಯವಾಗುವ ಗ್ಯಾಂಗ್ ಸ್ಟಾರ್ ಕತೆ.ಸೌತೆಕಾಯಿಗೆ ಮಳೆ ಚುಚ್ಚಿ ಉದ್ಯಮಿಯ ಕಾರ್ ಪಂಕ್ಚರ್ ಮಾಡಿ, ಆ ಕಾರಿಂದ ಹಣ ಎಗರಿಸುವ ಮೂಲಕ ಸಿನಿಮಾ ಕಥೆ ಶುರುವಾಗುತ್ತದೆ. ದರೋಡೆ ಮಾಡಿದ ಕಾರಲ್ಲಿ ಉದ್ಯಮಿ ಬರುತ್ತಾನೆ ಎಂದು […]

Advertisement

Wordpress Social Share Plugin powered by Ultimatelysocial