ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ, ಅವರು ಪಕ್ಷದಲ್ಲಿಯೇ ಉಳಿಯಲಿದ್ದಾರೆ ̤

ಬೆಂಗಳೂರು:ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ, ಅವರು ಪಕ್ಷದಲ್ಲಿಯೇ ಉಳಿಯಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರವಾಗಿ ಮಾಜಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅವರು ಸೋಮವಾರ ಇಬ್ರಾಹಿಂ ಅವರ ನಿವಾಸಕ್ಕೆ ತೆರಳಿ ಮನವೊಲಿಸುವ ಕಾರ್ಯ ಮಾಡಿದ್ದಾರೆ.ಹಲವು ತಾಸಿನ ಸಭೆಯ ಬಳಿಕ ಇಬ್ರಾಹಿಂ ಮನಸ್ಸು ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಸುಮಾರು ಹೊತ್ತು ಚರ್ಚೆ ನಡೆಸಿ ಕಾಂಗ್ರೆಸ್ ಹಾಗೂ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಇಬ್ರಾಹಿಂ ಅವರ ಮನವೊಲಿಸುವ ಕೆಲಸ ಮಾಡಲಾಗಿದೆ. ಫೆಬ್ರವರಿ 10ರವರೆಗೆ ಅವರು ಸಮಯಾವಕಾಶ ಕೋರಿದ್ದಾರೆ ಎಂದು ಎಚ್.ಸಿ ಮಹಾದೇವಪ್ಪ ಹೇಳಿದ್ದಾರೆ.ಪಕ್ಷ ತೊರೆದು ಜೆಡಿಎಸ್ ಸೇರುವ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ನನ್ನ ದಾರಿ ಕಂಡುಕೊಂಡಿದ್ದೇನೆ ಮತ್ತು ಫೆಬ್ರವರಿ 13 ರಂದು ಹುಬ್ಬಳ್ಳಿಯಿಂದ ನನ್ನ ಹಿತೈಷಿಗಳ ಸಭೆಯೊಂದಿಗೆ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತಿದ್ದೇನೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BOLLYWOOD:ಶ್ರದ್ಧಾ ಕಪೂರ್ ಅವರು ತಮ್ಮ 'ಲತಾ ಆಜಿಯೊಂದಿಗೆ ಬಾಲ್ಯದ ಫೋಟೋವನ್ನು ;

Tue Feb 8 , 2022
ಮಂಗಳವಾರ ಬೆಳಗ್ಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಮಧುರ ರಾಣಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಸಿದ್ಧ ಗಾಯಕಿ ಫೆಬ್ರವರಿ 6 ರಂದು ತನ್ನ ಅನಾರೋಗ್ಯದ ನಂತರ ತನ್ನ ಸ್ವರ್ಗೀಯ ನಿವಾಸಕ್ಕೆ ನಮ್ಮನ್ನು ತೊರೆದರು. ಜನವರಿಯಲ್ಲಿ ಆಕೆಗೆ ಕೊರೊನಾ ಪಾಸಿಟಿವ್ ಪರೀಕ್ಷೆ ನಡೆದಿತ್ತು. ನಟಿ ತನ್ನ ಬಾಲ್ಯದಲ್ಲಿ ಕಾಣದ ಫೋಟೋವನ್ನು ಹಂಚಿಕೊಂಡಿದ್ದಾರೆ ‘ಲತಾ ಆಜಿ’ ಮತ್ತು ತನ್ನೊಂದಿಗೆ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡ ಗೌರವವನ್ನು ನಾನು ಶಾಶ್ವತವಾಗಿ […]

Advertisement

Wordpress Social Share Plugin powered by Ultimatelysocial