ಒಂದೇ ವೆದಿಕೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಕಾಂಗ್ರೇಸ್ ಪಕ್ಷದ ಜನನಾಯಕರು ಬಾಗಿ.

ಯರಗಟ್ಟಿ ಪಟ್ಟಣದ “ಶಾದಿ ಮಹಲ್ ” ಕಲ್ಯಾಣ ಮಂಟಪದಲ್ಲಿ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ” ಬೆಳಗಾವಿ ಜಿಲ್ಲಾ ಹಾಗೂ ಸವದತ್ತಿ ಯರಗಟ್ಟಿ, ರಾಮದುರ್ಗ ಘಟಕದ ವತಿಯಿಂದ ” ಪತ್ರಿಕಾ ದಿನಾಚರಣೆ ” ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಮೇಲೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಮುನವಳ್ಳಿ ಸೋಮಶೇಖರ ಮಠದ ಪೂಜ್ಯ ಮ.ನಿ.ಪ್ರ.ಸ್ವ.
ಮುರುಘೇಂದ್ರ ಮಹಾಸ್ವಾಮಿಗಳು.
ಯರಗಟ್ಟಿ ರಾಜರಾಜೇಶ್ವರಿ ಆಶ್ರಮದ ಪೂಜ್ಯ ಗಣಪತಿ ಮಹಾರಾಜರು.ಹಾಗೂ ಹಾಜರಿದ್ದ ಗಣ್ಯರಿಂದ ದೀಪ ಬೆಳಗಿಸುವುದರ ಮೂಲಕ
ಕಾರ್ಯಕ್ರಮ ಉದ್ಘಾಟಿಸಿದರು.ಉದ್ಘಾಟಿಸಿ ಮಾತನಾಡಿದ
ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಮುಂಬರುವ ದಿನಗಳಲ್ಲಿ ಪತ್ರಕರ್ತರ ಕುಂದು ಕೊರತೆಗಳನ್ನು ಸರಕಾರದ ಗಮನಕ್ಕೆ ತಂದು ಸೌಲಭ್ಯವನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.
ತದನಂತರ ಮಾತನಾಡಿದ
ಕೆಪಿಸಿಸಿ ಕಾರ್ಯಾಧ್ಯಕ್ಷ, ಸತೀಶ ಜಾರಕಿಹೊಳಿ ಯವರು ತಾಲೂಕಿನಲ್ಲಿ ಸಾಕಷ್ಟು ಪತ್ರಕರ್ತರಿದ್ದು,ಅವರಿಗೆ ಸರಕಾರದಿಂದ ದೊರಕಬೇಕಿದ್ದ ಸೌಲಭ್ಯಗಳನ್ನು
ಕಲ್ಪಿಸುವಂತೆ ಸರಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯಾದ್ಯಂತ ಸಾವಿರಾರು ಪತ್ರಕರ್ತರು ಸೌಲಭ್ಯದಿಂದ ವಂಚಿರಾಗಿದ್ದು, ಇನ್ನು ಮುಂದಾದರೂ ಗ್ರಾಮೀಣ ಭಾಗದ ಪತ್ರಕರ್ತರಿಂದ ಹಿಡಿದು ರಾಜ್ಯ ಮಟ್ಟದ ಪತ್ರಕರ್ತರ ವರೆಗೆ ಸರಕಾರದಿಂದ ಬರುವಂತಹ ಪ್ರತಿಯೊಂದು ಸೌಲಭ್ಯ ಪ್ರತಿಯೊಬ್ಬ ಪತ್ರಕರ್ತರಿಗೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ,ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಪತ್ರಕರ್ತರ ಪರವಾಗಿ ಮನವಿ ಮಾಡಿಕೊಂಡರು.

ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕೆ.ಎಸ್.ಆರ್.ಪಿ. SP ಹಂಜಾ ಹುಸೇನ. ಮುರಗೋಡ ಸಿಪಿಐ ಮೌನೇಶ್ವರ ಮಾಲಿಪಾಟೀಲ ಹಾಗೂ ವೇದಿಕೆ ಗಣ್ಯರಿಗೆ ಹಾಗೂ ಆಯ್ಕೆಯಾದ ತಾಲೂಕಾದ್ಯಕ್ಷರಿಗೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ
ಬೆಳಗಾವಿ ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ.ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾದ ಶ್ರೀಮತಿ ಉಮಾ ಸಾಲಿಗೌಡ್ರ.ಮಾಜಿ ಜಿ.ಪಂ ಸದಸ್ಯ ಶ್ರೀಮಂತ ಅಜಿತಕುಮಾರ ದೇಸಾಯಿ. ಬೆಳಗಾವಿ BDCC ಬ್ಯಾಂಕ ನಿರ್ದೇಶಕರಾದ ಪಂಚನಗೌಡ ದ್ಯಾಮನಗೌಡರ.
ಎನ್ ಸತೀಶ ಕುಮಾರ.
ರೈತ ಸಂಘದ ಮುಖಂಡರು,
ಸೇರಿದಂತೆ ಸವದತ್ತಿ, ಯರಗಟ್ಟಿ, ರಾಮದುರ್ಗ ತಾಲೂಕಿನ ಪತ್ರಕರ್ತರು ಉಪಸ್ತಿರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿರವಾರದಲಿ ಇಂದು ಬೆಡರ ಜಂಗಮ ಜನಾಂಗದ ವಿರುದ್ಧ ಸಾಮೂಹಿಕ ದಲಿತಪರ ಸಂಘಟನೆಗಳು ವಿನೂತನ ಪ್ರತಿಭಟನೆ

Mon Jul 25 , 2022
ರಾಯಚೂರು ಜಿಲ್ಲೆಯ ಸಿರವಾರ ತಾಲುಕಿನ S C ಜನಾಂಗದ 101 ಉಪಾಜಾತಿಗಳಿ೦ದ ಇಂದು ಬೃಹತ್ ಪ್ರತಿಭಟನಾ ರ್ಯಾಲಿ ಮುಖಾಂತರ ಬೇಡ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಕೇಳುತ್ತಿರುವ ವೀರಶೈವ-ಲಿಂಗಾಯತ ಜಂಗಮರ ಹೋರಾಟ ಖಂಡಿಸಿ, ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಸಮಿತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ಸಿರವಾರ ಪಟ್ಟಣದ ದೇವದುರ್ಗ ಕ್ರಾಸ್ ನಿಂದ ತಹಸೀಲ್ದಾರ್ ಕಚೇರಿ ವರೆಗೆ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳ ಸಮ್ಮುಖದಲ್ಲಿ ಬೇಡ ಜಂಗಮರ ಎಸ್ಸಿ ಮೀಸಲಾತಿ […]

Advertisement

Wordpress Social Share Plugin powered by Ultimatelysocial