7 ಸಾವಿರ ಕೋಟಿ ವೆಚ್ಚ ನಿರಾಧಾರ.

 

 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ೭ ಸಾವಿರ ಕೋಟಿ ವೆಚ್ಚ ಮಾಡಿರುವ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಇದೊಂದು ಹಾಸ್ಯಸ್ಪದ ಮಾತುಗಳೆಂದು ಭಾವಿಸಿದ್ದೇನೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡಿ ಮುಚ್ಚಲು ೭,೧೨೧ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕೆಲ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಂತಹ ಅಂಕಿ-ಅಂಶ ಸತ್ಯಕ್ಕೆ ದೂರವಾಗಿವೆ. ಬಿಬಿಎಂಪಿ ಇಷ್ಟೊಂದು ಮೊತ್ತ ಬರೀ ರಸ್ತೆ ಗುಂಡಿಗೆ ವೆಚ್ಚ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಈ ವರ್ಷ ಹೊರತುಪಡಿಸಿ, ಕಳೆದ ಮೂರು ವರ್ಷಗಳಲ್ಲಿ ೧೧೯.೨೩ ಕೋಟಿ ರೂಪಾಯಿ ಮಾತ್ರ ಖರ್ಚು ಮಾಡಿ, ೩೫ ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಈ ಸಂಬಂಧ ಎಲ್ಲಾ ಮಾಹಿತಿ ಅಧಿಕೃತವಾಗಿದೆ. ಇನ್ನೂ, ಈ ವರ್ಷದೊಳಗೆ ೩೬ ಕೋಟಿ ರೂ. ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಕೆಲವರು ಬಿಬಿಎಂಪಿ ಕಚೇರಿಯಿಂದಲೇ ತಪ್ಪು ನೀಡಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ.ಈ ಸಂಬಂಧ ಪರಿಶೀಲನೆ ನಡೆಸಲಾಗುವುದು.ಆದರೆ, ಯಾವುದೇ ರೀತಿಯ ಖರ್ಚು, ವೆಚ್ಚಗಳ ಮಾಹಿತಿ ಪಡೆಯಲು ಎಐಎಸಿಯಿಂದ ಪಡೆಯಿರಿ ಎಂದು ಸಲಹೆ ನೀಡುತ್ತೇನೆ ಎಂದು ಆಯುಕ್ತರು ತಿಳಿಸಿದರು.ಕೆಲವೊಂದು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳಿಂದ ನಾಗರಿಕರಿಗೆ ತಪ್ಪು ಮಾಹಿತಿ ರವಾನೆ ಆಗುತ್ತದೆ.ಇಂತಹ ಮಾಹಿತಿ ಹಂಚಿಕೊಳ್ಳುವ ಮೊಲದು ಪರಿಶೀಲನೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆ.

Mon Feb 6 , 2023
ಪ್ರತಿಪಕ್ಷಗಳ ಟೀಕೆ ಮತ್ತು ಪ್ರತಿಭಟನೆಗಳ ನಡುವೆಯೇ ಅಸ್ಸಾಂ ಪೊಲೀಸರು ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಒಟ್ಟು ೨,೪೪೧ ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಪಿಡುಗನ್ನು ಕೊನೆಗೊಳಿಸುವ ಕಾರ್ಯಾಚರಣೆಯು ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಚಾಲ್ತಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಸ್ಪಷ್ಟಪಡಿಸಿದ್ದರು. ಆದರೆ, ಇದು ತರಾತುರಿಯಲ್ಲಿ ನಡೆಸಿದ ಪ್ರಚಾರದ ಕಸರತ್ತು ಎಂದು ಪ್ರತಿಪಕ್ಷಗಳು ಟೀಕಿಸಿವೆ. ಬಾಲ್ಯ ವಿವಾಹ ತಡೆ […]

Advertisement

Wordpress Social Share Plugin powered by Ultimatelysocial