ಎಷ್ಟು ಮೊಟ್ಟೆ ಸೇವಿಸಿದರೆ ಆರೋಗ್ಯ ಎಂಬುದು ಗೊತ್ತೇ?

ತ್ತೀಚಿನ ದಿನಗಳಲ್ಲಿ ಸಣ್ಣ, ಪುಟ್ಟ ಆರೋಗ್ಯ ಸಮಸ್ಯೆಯಿಂದಲೂ ಸಾವು ಸಂಭವಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಮಲಿನಗೊಂಡ ವಾತಾವರಣದ ಜೊತೆಗೆ ನಾವು ಸೇವಿಸುವ ಆಹಾರ ಕೂಡ ಕಾರಣವಾಗುತ್ತಿರುವುದು ಸುಳ್ಳಲ್ಲ.

ಆರೋಗ್ಯಕ್ಕೆಂದು ನಾವು ತಿನ್ನುವ ಆಹಾರದಲ್ಲಿ ಮೊಟ್ಟೆಯೂ ಒಂದು.

ಮೊಟ್ಟೆ ತಿನ್ನುವ ಮೊದಲು ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಂಗತಿಯನ್ನು ತಿಳಿದುಕೊಳ್ಳಬೇಕು.

ಪ್ರತಿಯೊಬ್ಬರ ದೇಹ ರಚನೆಯೂ ಭಿನ್ನ. ನಮ್ಮ ದೇಹ ತನಗೆ ಬೇಕಾದ ಕೆಲವು ಅಂಶವನ್ನು ತಾನೇ ಉತ್ಪತ್ತಿ ಮಾಡಿಕೊಳ್ಳುತ್ತದೆ. ಮತ್ತೆ ಕೆಲವನ್ನು ಆಹಾರದ ಮೂಲಕ ದೇಹಕ್ಕೆ ನೀಡಬೇಕಾಗುತ್ತದೆ.

ಮೊಟ್ಟೆಯಲ್ಲಿ ಹೈ ಕ್ವಾಲಿಟಿ ಪ್ರೋಟೀನ್ ಇರುತ್ತದೆ. ಮೊಟ್ಟೆ ಸೇವನೆ ಮಾಡುವುದರಿಂದ ಶೇಕಡಾ 100ರಷ್ಟು ಪ್ರೋಟೀನ್ ಸಿಗುವುದು. ಒಂದು ಮೊಟ್ಟೆಯಲ್ಲಿ 6.30 ಗ್ರಾಂ ಪ್ರೋಟೀನ್ ಸಿಗುವುದು. ಮೊಟ್ಟೆಯಲ್ಲಿ ಕೋಲೀನ್ ಅಂಶ ಕೂಡ ಇದೆ.

ಈ ಕೋಲೀನ್ ನರದ ಆರೋಗ್ಯ, ಮೆದುಳಿನ ಆರೋಗ್ಯಕ್ಕೆ ಉತ್ತಮ. ಒಂದು ಮೊಟ್ಟೆಯಲ್ಲಿ 147 ಮಿಲಿಗ್ರಾಂ ಕೋಲೀನ್ ಸಿಗುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಟ್ಟೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ದೃಷ್ಟಿಯನ್ನು ಆರೋಗ್ಯವಾಗಿಡಬಲ್ಲ ಆಂಟಿ ಆಕ್ಸಿಡೆಂಟ್ ಇದ್ರಲ್ಲಿದೆ. ಮೊಟ್ಟೆಯಲ್ಲಿ ನ್ಯೂಟೆಲ್ ಇದೆ.

ವಿಟಮಿನ್ ಇ, ವಿಟಮಿನ್ ಡಿ ಕೂಡ ಲಭ್ಯವಿದೆ. ವಿಟಮಿನ್ ಬಿ 12 ಮತ್ತು ಕಬ್ಬಿಣಾಂಶದಿಂದ ಕೂಡಿರುವ ಮೊಟ್ಟೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಉತ್ತಮ. ಹಿಮೋಗ್ಲೋಬಿನ್ ಹೆಚ್ಚಿಸುವ ಕೆಲಸವನ್ನು ಈ ಮೊಟ್ಟೆ ಮಾಡುತ್ತದೆ. ನಮ್ಮ ದೇಹಕ್ಕೆ ಶಕ್ತಿ ನೀಡುವ ಕೊಲೆಸ್ಟ್ರಾಲ್ ಇದೆ.

ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಒಳ್ಳೆಯ ಕೊಲೆಸ್ಟ್ರಾಲ್. ನಾವು ಆಹಾರದ ಮೂಲಕ ಹೆಚ್ಚಿನ ಕೊಲೆಸ್ಟ್ರಾಲ್ ನೀಡಿದಾಗ ದೇಹ ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವುದಿಲ್ಲ. ನಾವು ಕೊಲೆಸ್ಟ್ರಾಲ್ ನೀಡದೆ ಹೋದಾಗ ದೇಹ ಉತ್ಪತ್ತಿ ಮಾಡುತ್ತದೆ.ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಸೇವನೆಯಲ್ಲಿ ಮಿತಿಯಿರಬೇಕು. ಆರೋಗ್ಯವಾಗಿರುವ ವ್ಯಕ್ತಿ ಒಂದು ಮೊಟ್ಟೆಯನ್ನು ಆರಾಮವಾಗಿ ಪ್ರತಿ ದಿನ ತಿನ್ನಬಹುದು. ಒಂದು ಮೊಟ್ಟೆ ತಿಂದಾಗ 212 ಎಂಜಿ ಕೊಲೆಸ್ಟ್ರಾಲ್ ಸಿಗುತ್ತದೆ. ಹೆಚ್ಚಿನ ಮೊಟ್ಟೆ ಸೇವನೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

ಮೊಟ್ಟೆ ಸೇವನೆ ಮಾಡುವುದ್ರಿಂದ ಚರ್ಮ, ಕೂದಲು ಮತ್ತು ಉಗುರಿನ ಆರೋಗ್ಯ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆಗಳು ಬಲ ಪಡೆಯುತ್ತವೆ. ಹೃದಯದ ಆರೋಗ್ಯ ಸುಧಾರಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ರಾಮಗಳಲ್ಲಿ ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತರಬೇಕು,

Wed Jan 11 , 2023
    ಜನರು ಗ್ರಾಮಗಳಲ್ಲಿ ಏನೇ ಸಮಸ್ಯೆಗಳು ಇದ್ದರೂ ನನ್ನ ಗಮನಕ್ಕೆ ತರಬೇಕು. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಗ್ರಾಮಗಳಲ್ಲಿ ಯಾವ ಅನುಗೊಂಡನಹಳ್ಳಿ:ಕ್ಷೇತ್ರದ ಶಾಸಕನಾದ ಅಲ್ಪಾವಧಿಯಲ್ಲಿಯೇ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವ ಹಾಗೂ ನೀರಾವರಿ ಸೌಲಭ್ಯಗಳಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೆನೆ. ಮುಂದಿನ ದಿನಗಳಲ್ಲಿಯೂ ಜನರ ಮಧ್ಯದಲ್ಲಿದ್ದು ಕೆಲಸ ಮಾಡುತ್ತೇನೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು. ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ […]

Advertisement

Wordpress Social Share Plugin powered by Ultimatelysocial