ಗುಂಡ್ಲುಪೇಟೆ ತಾಲ್ಲೋಕಿನ ಬಂಡೀಪುರ ವನ್ಯಜೀವಿ ವಲಯದಲ್ಲಿ ಬೆಂಕಿ

ಬೇಸಿಗೆ ಕಾಲದಲ್ಲಿನ ಸವಾಲುಗಳನ್ನ ಎದುರಿಸಲು ಮತ್ತು ಕಾಡನ್ನು ಸಂರಕ್ಷಣೆಗೆ ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ತಿದೆ ಈಗಾಗಲೇ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.ಇನ್ನೇನು ಬೇಸಿಗೆ ಸಮೀಪಿಸುತ್ತಿದೆ ಈ ವೇಳೆಯಲ್ಲಿ ಗಿಡಮರಗಳಿಂದ ಎಲೆಗಳು ಉದುರತೊಡಗುತ್ತವೆ ಕುರುಚಲು ಪ್ರದೇಶ ಒಣಗಲಾರಂಭಿಸುತ್ತದೆ ಸಣ್ಣದೊಂದು ಬೆಂಕಿ ಕಿಡಿ ತಗುಲಿದ್ರು ಸಹ ಭಾರಿ ಅನಾಹುತ ಸಂಭವಿಸುವ ಮುನ್ಸೂಚನೆ ಇರುತ್ತದೆ ಈ ಹಿನ್ನೆಲೆಯಲ್ಲಿ ಬೇಸಿಗೆಗೂ ಮುನ್ನವೇ ಜಾಗೃತವಾಗಿರುವ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಸಕಲ ಸಿದ್ಧತೆ ಮಾಡಿಕೊಳ್ತಿದೆ.ಬಂಡೀಪುರ ಅರಣ್ಯ ಪ್ರದೇಶದಲ್ಲಿ 2018 ರಲ್ಲಿ ಸಂಭವಿಸಿದ ಅಗ್ನಿದುರಂತ ಮತ್ತೊಮ್ಮೆ ಮರುಕಳಿಸದಂತೆ ಸಿಎಫ್ ಡಾ.ರಮೇಶ್ ಕುಮಾರ್ ವಿಶೇಷ ತಂಡಗಳನ್ನು ರಚನೆ ಮಾಡುವ ಮೂಲಕ ಬಂಡೀಪುರದ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಕುರುಚಲು ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯವನ್ನ ತ್ವರಿತವಾಗಿ ನಿರ್ಮಾಣ ಮಾಡುವುದಲ್ಲದೆ ಕೆಲವೇ ದಿನಗಳಲ್ಲಿ ಅಗ್ನಿಶಾಮಕ ಸಿಬ್ಬಂದಿಗಳನ್ನ ತುರ್ತು ಸೇವೆಗೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಯಡಿಯಾಲ, ಗುಂಡ್ಲುಪೇಟೆ, ಬಂಡೀಪುರ ಈ ಮೂರು ವಲಯಗಳ ಸಿಬ್ಬಂದಿಗೆ ಡಿಸೆಂಬರ್ ಅಂತ್ಯದ ವೇಳೆಯಲ್ಲಿ ತರಭೇತಿ ಮತ್ತು ಸೂಚನೆಗಳನ್ನು ನೀಡಲಾಗಿದೆ ಬಂಡೀಪುರ ಹುಲಿಸಂರಕ್ಷಿತಾ ಪ್ರದೇಶದ 2500 ಕಿಮೀ ವ್ಯಾಪ್ತಿಯವರೆಗೂ ಬಹುತೇಕ ಪೂರ್ಣಗೊಂಡಿದೆ ಹಾಗು ವಾಚಿಂಗ್ ಟವರ್ಗಳು ಸಿದ್ಧವಾಗಿವೆ ಇದರ ಜೊತೆಯಲ್ಲೇ ಕಾಡಿನ ಸಂರಕ್ಷಣೆ ಹಿತದೃಷ್ಟಿಯಿಂದ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದು ಅರಣ್ಯ ಸಚಿವರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಒಟ್ಟಾರೆಯಾಗಿ 2018 ರಲ್ಲಿ ಘತಿಸಿದ ಅವಾಂತರ ಮತ್ತೊಮ್ಮೆ ಮರುಕಳಿಸದಂತೆ ಸಿಎಫ್ ಡಾ.ರಮೇಶ್ ಕುಮಾರ್ ಮತ್ತು ತಂಡ ಸಿದ್ಧತೆ ಮಾಡಿಕೊಂಡಿರುವುದು ಸಂತಸಕರ ಸಂಗತಿಯಾಗಿದೆ ವನ್ಯಜೀವಿಗಳ ಸಂರಕ್ಷಣೆಗೆ ಈ ರೀತಿಯಾಗಿ ಮುಂಜಾಗೃತಾ ಕ್ರಮಗಳನ್ನ ಕೈಗೊಂಡಿರುವ ಸಿಎಫ್ ಡಾ.ರಮೇಶ್ ಕುಮಾರ್ ಅವರ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಇಂದು ಬಾದಾಮಿ ಕ್ಷೇತ್ರದ ಬನಶಂಕರಿ ಜಾತ್ರೆಯ ರಥೋತ್ಸವಕ್ಕೆ ಆಗಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ....

Sat Jan 7 , 2023
ಬಾದಾಮಿಯಲ್ಲಿ ಜಾತ್ರೆಯ ಬಗ್ಗೆ ಮಾಜಿ ಸಿಎಂ ಹೇಳಿಕೆ… ಜಾತ್ರೆ ಪ್ರತಿ ವರ್ಷ ನಡೆಯುತ್ತೆ… ಈ ವರ್ಷದ ವಿಶೇಷ ಅಂದ್ರೆ… ಎರಡು ವರ್ಷ ಕೋವಿಡ್ ನಿಂದಾಗಿ ನಡೆದಿರಲಿಲ್ಲ…. ಈ ವರ್ಷ ಕೋವಿಡ್ ಇಲ್ಲ, ಜಾತ್ರೆ ಚನ್ನಾಗಿ ನಡೆಯುತ್ತಿದೆ… ಜಾತ್ರೆಯ ಬಗ್ಗೆ ನಾನು ತಾಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿ ಜೊತೆ ಸಭೆ ಮಾಡಿದ್ದೆ… ಎಲ್ಲ ಸೌಲಭ್ಯಗಳನ್ನು ಮಾಡಿದ್ದಾರೆ… ರಥೋತ್ಸವ ನಡೆಯುತ್ತೆ. ನಾನು ಭಾಗವಹಿಸಲೆಂದು ಬಂದಿದ್ದೇನೆ… ಬನಶಂಕರಿ ತಾಯಿ ರಾಜ್ಯದ ಎಲ್ಲರಿಗೂ ಒಳ್ಳೆಯದು ಮಾಡಲಿ…. […]

Advertisement

Wordpress Social Share Plugin powered by Ultimatelysocial