ಎಳ್ಳು-ಬೆಲ್ಲ ಸೇವನೆ ಮಾಡುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ

ನ್ನೇನು ಸಂಕ್ರಾಂತಿ ಬಂದೇ ಬಿಡ್ತು. ವರ್ಷದ ಮೊದಲ ಹಬ್ಬಕ್ಕೆ ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ಹಬ್ಬದಂದು ಎಳ್ಳು-ಬೆಲ್ಲ ಒಟ್ಟಿಗೆ ಸೇವಿಸುವ ರೂಢಿ ಮೊದಲಿನಿಂದಲೂ ನಡೆದು ಬಂದಿದೆ. ಆದ್ರೆ ವೈಜ್ಞಾನಿಕವಾಗಿ ಇದರ ಪ್ರಯೋಜನ ಏನೆಂದು ನೋಡಿ..

ಡಿಸೆಂಬರ್-ಜನವರಿ ತಿಂಗಳು ಬಂತೆಂದರೆ ವಾತಾವರಣದಲ್ಲಿ ಚಳಿ ಏರುತ್ತಾ ಹೋಗುತ್ತದೆ.

ಅಂತಹ ಸಮಯದಲ್ಲಿ ಚರ್ಮಕ್ಕೆ ಕೊಬ್ಬಿನ ಅಂಶದ ಅಗತ್ಯ ಹೆಚ್ಚು. ಚರ್ಮಕ್ಕೆ ಅಗತ್ಯವಿರುವ ಎಣ್ಣೆ ಹಾಗು ಪೋಷಕಾಂಶ ಒದಗಿಸುವಲ್ಲಿ ಎಳ್ಳು ಸಹಕಾರಿ. ಎಳ್ಳಿನ ಸೇವನೆ ಆರೋಗ್ಯಕ್ಕೆ ಪುಷ್ಟಿಯನ್ನು ನೀಡುತ್ತದೆ.

ಚಳಿಗಾಲದಲ್ಲಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಸ್ವಲ್ಪ ದುರ್ಬಲ. ದೇಹದ ಕೋಶಗಳಿಗೆ ಕೆಲಸ ಮಾಡಲು ಆಲಸ್ಯ ಬರುತ್ತದೆ. ದೇಹದ ಉಷ್ಣಾಂಶವನ್ನು ನಿರ್ವಹಣೆ ಮಾಡುವ ರಕ್ತ ಸಂಪನ್ಮೂಲವನ್ನು ಹೆಚ್ಚಿಸುವ ಆಹಾರ ಸೇವನೆ ಅಗತ್ಯ. ಅದಕ್ಕೆ ಬೆಲ್ಲವು ಸಹಾಯ ಮಾಡುತ್ತದೆ.

ಹಾಗಾಗಿ ಎಳ್ಳು-ಬೆಲ್ಲದ ಸೇವನೆ ಚಳಿಗಾಲದಲ್ಲಿ ಒಳ್ಳೆಯದು. ಎಲ್ಲಾ ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗಿ ರಕ್ತ ಹೀನತೆ ಸಮಸ್ಯೆಯನ್ನು ಹತೋಟಿಯಲ್ಲಿಡುತ್ತದೆ. ಚಳಿಗಾಲದಲ್ಲಿ ಕಾಡೋ ನೆಗಡಿ, ಕಫ, ಸಂದುನೋವು ಸಮಸ್ಯೆ ಹಾಗೂ ಶ್ವಾಸಕೋಶದ ಕಾರ್ಯ ಸರಾಗವಾಗಿ ನಡೆಯಲು ಎಳ್ಳು-ಬೆಲ್ಲ ಸೇವನೆ ಅನುಕೂಲಕಾರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಹಿರಿಯ ನಟಿ

Tue Jan 10 , 2023
ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಜನ್ಮದಿನ ಜನವರಿ 10. ಕನ್ನಡ ರಂಗಭೂಮಿಯಲ್ಲಿ ಅಭಿನಯಿಸಲು ಪ್ರಾರಂಭಿಸಿದ ಗಿರಿಜಾ ಅವರು ಎಪ್ಪತ್ತರ ದಶಕದಲ್ಲಿ ಅವರ ಸಹೋದ್ಯೋಗಿಯಾಗಿದ್ದ ಲೋಕೇಶ್ ಅವರೊಡನೆ ವಿವಾಹವಾದರು. ಮುಂದೆ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಅಪಾರ ಹೆಸರು ಮಾಡಿದರು.ಲೋಕೇಶ್ ಮತ್ತು ಗಿರಿಜಾ ಇಬ್ಬರೂ ಒಟ್ಟಿಗೆ ನಟಿಸಿದ ಪ್ರಥಮ ಚಿತ್ರ ‘ಕಾಕನಕೋಟೆ’ ಎನಿಸುತ್ತದೆ. ಆ ಚಿತ್ರದಲ್ಲಿ ಇವರಿಬ್ಬರೂ ಅದ್ಭುತವಾಗಿ ನಟಿಸಿದ್ದನ್ನು ನೋಡಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಲೋಕೇಶ್ ಅವರು […]

Advertisement

Wordpress Social Share Plugin powered by Ultimatelysocial