ಬೇಸಿಗೆಯಲ್ಲಿ ಕಾಡುವ ಲೂಸ್‌ ಮೋಶನ್‌ಗೆ ರಾಮಬಾಣ ಕೊತ್ತಂಬರಿ ಸೊಪ್ಪು

ಭಾರತದ ಹಲವು ನಗರಗಳಲ್ಲಿ ತಾಪಮಾನ 49 ಡಿಗ್ರಿ ದಾಟಿದೆ. ಸುಡು ಬಿಸಿಲಲ್ಲಿ ಜನ ಕಂಗಾಲಾಗಿದ್ದಾರೆ. ಬಿಸಿ ಗಾಳಿ, ವಿಪರೀತ ಸೆಖೆಯಿಂದಾಗಿ ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆ ಹೆಚ್ಚು. ಬಹುತೇಕ ಎಲ್ಲರೂ ಬೇಸಿಗೆಯಲ್ಲಿ ವಾಂತಿ ಬೇಧಿಯಿಂದ ಬಳಲುತ್ತಾರೆ. ಇದಕ್ಕೆ ಸರಳವಾದ ಮನೆಮದ್ದಿದೆ.

ಬೇಸಿಗೆಯಲ್ಲಿ ನಾವು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೊಟ್ಟೆಯನ್ನು ತಂಪಾಗಿಡುವಂತಹ ತಿನಿಸುಗಳನ್ನೇ ಸೇವಿಸಬೇಕು. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಬೇಧಿ ಸಮಸ್ಯೆಯಿಂದ ಪಾರಾಗಬಹುದು.

ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್‌ಗಳ ಆಗರ ಇದು. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಆಮ್ಲಗಳು ಶಾಖದ ಹೊಡೆತ ಮತ್ತು ಅತಿಸಾರದ ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ. ಬೇಧಿ ಹೆಚ್ಚಾಗಿದ್ದರೆ ಒಣ ಕೊತ್ತಂಬರಿ ಬೀಜದ ಕಷಾಯ ಮಾಡಿಕೊಂಡು ಕುಡಿಯಿರಿ. ಇದು ಔಷಧದಂತೆ ಕೆಲಸ ಮಾಡುತ್ತದೆ, ದೇಹದಲ್ಲಿರುವ ವಿಷದ ಅಂಶವನ್ನು ಹೊರಹಾಕುತ್ತದೆ.

ಕೊತ್ತಂಬರಿ ಸೊಪ್ಪಿನ ಚಹಾ ಕೂಡ ಪರಿಣಾಮಕಾರಿ. ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುದಿಸಿ. ಅದನ್ನು ಸೋಸಿಕೊಂಡು ಕುಡಿಯಿರಿ. ಪ್ರತಿದಿನ ನೀವು ಮಾಡುವ ಮೇಲೋಗರಗಳಲ್ಲೂ ಕೊತ್ತಂಬರಿ ಸೊಪ್ಪನ್ನು ಬಳಸಿ. ಕೊತ್ತಂಬರಿ ಸೊಪ್ಪು ದೇಹವನ್ನು ತಂಪಾಗಿಡುತ್ತದೆ. ಇದನ್ನು ಮೊಸರಿನ ಜೊತೆ ಕೂಡ ಸೇವನೆ ಮಾಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಚ್ಚಿಬೀಳಿಸುವಂತಿದೆ ʼಮಾಲಿನ್ಯʼದಿಂದ ಭಾರತದಲ್ಲಿ ಸತ್ತವರ ಸಂಖ್ಯೆ

Thu May 19 , 2022
ಭಾರತದಲ್ಲಿ ಮಾಲಿನ್ಯ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಲೇ ಇದೆ. ಗಾಬರಿ ತರುವ ಆಶ್ಚರ್ಯಕರ ಸಂಗತಿ ಎಂದರೆ 2019 ರಲ್ಲಿ ಭಾರತದಲ್ಲಿ ಮಾಲಿನ್ಯದಿಂದಾಗಿ 23.5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಜಾಗತಿಕವಾಗಿ ಎಲ್ಲಾ ದೇಶಗಳಲ್ಲಿ ಅತಿ ಹೆಚ್ಚು ಎಂದು ʼದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ʼ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ವರದಿಯಲ್ಲಿ ಉಲ್ಲೇಖವಾಗಿದೆ. ಪಿಎಂ2.5 ಮಾಲಿನ್ಯಕಾರಕವು ಹೆಚ್ಚಿನ ವಾಯುಮಾಲಿನ್ಯ ಸಾವುಗಳಿಗೆ ಕಾರಣವಾಗಿದ್ದು, ಇದರಿಂದಾಗಿಯೇ 16.7 ಲಕ್ಷ ಸಾವುಗಳು ಸಂಭವಿಸಿವೆ ಎಂದು […]

Advertisement

Wordpress Social Share Plugin powered by Ultimatelysocial