ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ರೂಪ : ಬಿಎಡ್ ಇನ್ನೂ 5 ವರ್ಷ!

ಬೆಂಗಳೂರು : ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಸರ್ಜರಿ ಮಾಡಿ ಹೊಸ ಸ್ವರೂಪ ಪ್ರಕಟಿಸಿದ್ದು, ಎಂಸಿಎ ಕೋರ್ಸ್ ಎರಡು ವರ್ಷ ಎಂದು ಸ್ಪಷ್ಟಪಡಿಸಲಾಗಿದ್ದು, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ನಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ 5 ವರ್ಷ ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ.ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್​ನ ಎಸ್.ಎಲ್.ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ ನೀಡಲಾಗಿದ್ದು, ಇದರ ಜೊತೆಯಲ್ಲೇ ಹಲವು ಕೋರ್ಸ್ ಗಳ ಅವಧಿಯಲ್ಲೂ ಮಾರ್ಪಾಟಾಗಿದೆ. ಎಂಸಿಎ ಕೋರ್ಸ್ ಅವಧಿ 2 ವರ್ಷ, ಬಿಎಡ್ ವ್ಯಾಸಂಗದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ 5 ವರ್ಷಗಳ ಅವಧಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.ಇನ್ನು ರಾಜ್ಯದಲ್ಲಿ ಒಟ್ಟು 54 ಖಾಸಗಿ ಅನುದಾನಿತ ಬಿ.ಇಡಿ ಕಾಲೇಜಗಳಲ್ಲಿ236 ಹಾಗೂ ಆರು ಸರ್ಕಾರಿ ಬಿ.ಇಡಿ ಕಾಲೇಜುಗಳಲ್ಲಿ 33 ಬೋಧಕರ ಹುದ್ದೆಗಳು ಖಾಲಿ ಇದ್ದು, ಕ್ರಮೇಣ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

15-15 ದಿನ ಗಂಡನನ್ನು ಹಂಚಿಕೊಂಡ ಪತ್ನಿಯರು! ಗುಟ್ಟು ರಟ್ಟಾಗುತ್ತಿದ್ದಂತೆ ಪೊಲೀಸ್​ ಮಧ್ಯಸ್ತಿಕೆ

Tue Mar 29 , 2022
ಬಿಹಾರ: ಮನೆ, ಜಮೀನು, ಆರಭರಣ, ಪಾತ್ರೆ, ಜಾನುವಾರು… ಇವುಗಳನ್ನು ಕುಟುಂಸ್ಥರು ಭಾಗ ಮಾಡಿಕೊಳ್ಳುವುದು ಸಹಜ. ಇನ್ನೂ ಮುಂದುವರಿದು ಮನೆಯಲ್ಲಿನ ಹಿರಿಯರ ಜವಾಬ್ದಾರಿಯನ್ನ ತಲಾ ಮೂರ್ನಾಲ್ಕು ತಿಂಗಳು ಇಲ್ಲವೇ ಒಂದೊಂದು ವರ್ಷ ಎಂದು ಮಕ್ಕಳು ವಹಿಸಿಕೊಳ್ಳೋದನ್ನೂ ನೋಡಿದ್ದೇವೆ. ಆದರಿಲ್ಲಿ ಇಬ್ಬರು ಪತ್ನಿಯರು ಗಂಡನನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಅದೂ ತಿಂಗಳಲ್ಲಿ 15 ದಿನ ಒಬ್ಬಾಕೆ ಜತೆ, ಇನ್ನುಳಿದ 15 ದಿನ ಮೊತ್ತೊಬ್ಬಾಕೆ ಜತೆ ಗಂಡ ಇರಬೇಕು! ಇಂತಹ ವಿಚಿತ್ರ ಘಟನೆ ಬಿಹಾರದಲ್ಲಿ ಪೂರ್ಣಿಯಾ ಎಂಬಲ್ಲಿ […]

Advertisement

Wordpress Social Share Plugin powered by Ultimatelysocial