ಕಳೆದ 24 ಗಂಟೆಯಲ್ಲಿ ಮತ್ತೆ 2,483 ಜನರಲ್ಲಿ ಹೊಸದಾಗಿ ಸೋಂಕು!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 2,483 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಹೆಚ್ಚಳವಾಗಿದ್ದು, 24 ಗಂಟೆಯಲ್ಲಿ 1399 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಆದರೆ ಈ ಹಿಂದನ ಸಾವಿನ ಲೆಕ್ಕವನ್ನೂ ಈಗ ಸೇರಿಸಿರುವ ಕಾರಣ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,23,622 ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 15,636 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 1,970 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 42523311 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ

ನಿನ್ನೆ 1,87,95,76,423 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 22,83,224 ಡೋಸ್ ಲಸಿಕೆ ಹಾಕಲಾಗಿದೆ. ನಿನ್ನೆ 4,49,197 ಜನರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಯೆಟ್​ನಲ್ಲಿದ್ರೆ ಹೈ ಪ್ರೊಟೀನ್ ಬ್ರೇಕ್ ಫಾಸ್ಟ್​​ಗಾಗಿ ಸೋಯಾ ದೋಸೆ

Tue Apr 26 , 2022
ಪ್ರೊಟೀನ್ ದೇಹಕ್ಕೆ ಅತ್ಯಗತ್ಯವಾದ ಅಂಶ. ಅದರಲ್ಲೂ ನೀವು ವರ್ಕ್​ಔಟ್ ಮಾಡುವವರಾಗಿದ್ರೆ ಪ್ರೊಟೀನ್ ಬೇಕೇಬೇಕು. ಇನ್ನೂ ನೀವು ವೀಗನ್ ಆಗಿದ್ರಂತೂ ನಿಮ್ಮ ದೇಹಕ್ಕೆ ಪ್ರೊಟೀನ್ ಪೂರೈಕೆ ಬಗ್ಗೆ ಗಮನ ಹರಿಸಲೇಬೇಕು. ಈ ನಿಟ್ಟಿನಲ್ಲಿ ಸೋಯಾ ಚಂಕ್ಸ್ ಅತ್ಯುತ್ತಮ ಆಯ್ಕೆ. ಸೋಯಾ ಚಂಕ್ಸ್ ಬಳಸಿ ತಯಾರಿಸಬಹುದಾದ ಹೈ ಪ್ರೊಟೀನ್ ಸೋಯಾ ದೋಸೆ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಮೊದಲಿಗೆ ಒಂದು ಕಡಾಯಿಯಲ್ಲಿ ಒಂದು ಕಪ್ ಸೋಯಾ ಚಂಕ್ಸ್, ಒಂದು ಟೊಮ್ಯಾಟೊ, 2 […]

Advertisement

Wordpress Social Share Plugin powered by Ultimatelysocial