ಕೋವಿಡ್ ಬಳಿಕ ಭಾರತ ಆರ್ಥಿಕತೆ ಚೇತರಿಕೆ.

ಸಾಂಕ್ರಾಮಿಕ ರೋಗದ ನಂತರ ಭಾರತದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ ಎಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷ ಮತ್ತು ಟ್ರಸ್ಟಿ ಬಿಲ್ ಗೇಟ್ಸ್ ಹೇಳಿದ್ದಾರೆ.ವೇಗವಾದ ರೋಗನಿರ್ಣಯ ಮತ್ತು ಲಸಿಕೆ ಉತ್ಪಾದನೆಯ ಹೊರತಾಗಿ, ಹೊಸ ಸೋಂಕು ಪತ್ತೆ ಪತ್ತೆಹಚ್ಚಲು ಹೊಸ ಹೊಸ ಕ್ರಮ ಕೈಗೊಂಡು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಶ್ರಮಿಸಿದೆ ಎಂದು ಅವರು ಹೇಳಿದ್ದಾರೆ.ಸಾಂಕ್ರಾಮಿಕ ರೋಗದ ನಂತರ ಭಾರತ ಪ್ರವಾಸದಲ್ಲಿರುವ ಬಿಲ್ ಗೇಟ್ಸ್ ಅಕೋವಿಡ್ ಮಾಡಿದ ದುರಂತದ ಪಾಠಗಳ ಬಗ್ಗೆ ಮಾತನಾಡುವಾಗ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.“ಪ್ರಪಂಚ ದ ಬೇರೆ ಬೇರೆ ದೇಶಗಳು ಕೋವಿಡ್ ಸೋಂಕು ತಡೆಯಲು ನಾನಾ ಕಸರತ್ತು ನಡೆಸಿದವು. ದುಃಖಕರವೆಂದರೆ, ಮುಂದಿನ ಸಾಂಕ್ರಾಮಿಕ ಹೆಚ್ಚು ಮಾರಣಾಂತಿಕವಾದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ೨೦ ದಶಲಕ್ಷಕ್ಕೂ ಹೆಚ್ಚು ಜನರನ್ನು ಸಾವನ್ಮಪ್ಪಿದ್ದಾರೆ. ಇದರಲ್ಲಿ ಬಹುತೇಕರು ವಯಸ್ಸಾದ ಜನರು ಎಂದು ಅವರು ಹೇಳಿದ್ದಾರೆ.ಭಾರತ ಸೇರಿದಂತೆ ಹಲವು ದೇಶಗಳು ಹಲವು ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮೂಲಸೌಕರ್ಯ ಒದಗಿಸಿದ ಹಿನ್ನೆಲೆಯಲ್ಲಿ ಸಾವುನೋವು ಕಡಿಮೆಯಾಗಿದೆ ಎಂದಿದ್ದಾರೆ.ಡಿಜಿಟಲ್ ಪಾವತಿಗೆ ಸಂತಸ ಭಾರತದ ಜಿ -೨೦ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದು ಖುಷಿಯ ಸಂಗತಿ.ತನ್ನ ಡಿಜಿಟಲ್ ಪಾವತಿ ಯಶಸ್ಸನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ ಇದರಿಂದ ಇತರ ದೇಶಗಳು ಅವುಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.ಗೇಟ್ಸ್ ಪ್ರತಿಷ್ಠಾನ ಸಾರ್ವಜನಿಕ ಆರೋಗ್ಯ ಕಾಪಾಡಲು ಹಲವು ಕ್ರಮಗಳನ್ನು ಕೈಗೊಂಡಿದೆ.ಜಗತ್ತಿನಾದ್ಯಂತ ಕಷ್ಟಕಾಲದಲ್ಲಿ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಬಿಕ್ಕಟ್ಟುಗಳ ಮಧ್ಯೆ ಕೆಲವು ದೊಡ್ಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತ ಭವಿಷ್ಯದ ಭರವಸೆಯನ್ನು ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಭಾರತದಲ್ಲಿ ಹಲವು ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಮತ್ರು ಸಾವಿನ ಸಂಖ್ಯೆ ಹೆಚ್ಚಾಗುವುದು ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ನಿರ್ದೇಶಕರಿಂದ ಉತ್ತಮ ಅವಕಾಶ ಆದಿತಿ.

Thu Mar 2 , 2023
  ಬಾಲಿವುಡ್ ಚಿತ್ರಗಳಿಗೆ ಹೋಲಿಸಿದರೆ ದಕ್ಷಿಣದ ನಿರ್ದೇಶಕರು ತನ್ನನ್ನು ಉತ್ತಮವಾಗಿ ಚಿತ್ರಗಳಲ್ಲಿ ಬಳಸಿಕೊಳ್ಳುತ್ತಾರೆ ಎಂದು ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಹೇಳಿದ್ದಾರೆ. ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಉತ್ತಮ ಪಾತ್ರಗಳು ಮೂಡಿ ಬರುತ್ತಿವೆ. ಹಿಂದಿ ಚಿತ್ರಗಳಲ್ಲಿ ಬರುತ್ತಿವೆ. ಆದರೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರಗಳು ಸಿಗುತ್ತವೆ ಎಂದಿದ್ಧಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅದಿತಿ ರಾವ್ ಹೈದರಿ, ಹಿಂದಿ ನಿರ್ದೇಶಕರಿಂದ ಅತ್ಯಾಕರ್ಷಕ ಪಾತ್ರ […]

Advertisement

Wordpress Social Share Plugin powered by Ultimatelysocial