ಕಿವೀಸ್ ಪಡೆಗೆ ಸೋಲುಣಿಸಿದ ಪಾಕಿಸ್ತಾನ.

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಕೂಡ ಡ್ರಾ ಕಂಡ ಬಳಿಕ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಶುಭಾರಂಭ ಮಾಡಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲಿಗೆ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಿದ್ದ ಪಾಕಿಸ್ತಾನ ಬಳಿಕ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ಪಾಕಿಸ್ತಾನ ತಂಡ ಎದುರಾಳಿ ವಿರುದ್ಧ ಉತ್ತಮ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ 9 ವಕೆಟ್ ಕಳೆದುಕೊಂಡು ನಿಗದಿತ 50 ಓವರ್‌ಗಳಲ್ಲಿ 255 ರನ್‌ಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ನಸೀಮ್ ಶಾ 5 ವಿಕೆಟ್‌ಗಳ ಗೊಂಚಲು ಪಡೆಯಲು ಯಶಸ್ವಿಯಾಗಿದ್ದು ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದಾರೆ.ನ್ಯೂಜಿಲೆಂಡ್ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಬಿಕ ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡಿತಾದರೂ ಬಳಿಕ ಉತ್ತಮ ಜೊತೆಯಾಟ ಪಡೆಯಿತು. ಆರಂಬಿಕ ಆಟಗಾರ ಫಕರ್ ಜಮಾನ್ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅರ್ಧ ಶತಕದ ಸಾಧನೆ ಮಾಡಿದ್ದಾರೆ. ಫಕರ್ ಜಮಾನ್ 56 ರನ್‌ಗಳಿಸಿ ಔಟಾದರೆ ಬಾಬರ್ ಅಜಂ 66 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ರಿಜ್ವಾನ್ 77 ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳದೆ ಉಳಿದುಕೊಂಡರು. ಅಂತಿಮವಾಗಿ 48.1 ಓವರ್‌ಗಳಲ್ಲಿ ಗುರಿ ತಲುಪಿದ ಪಾಕಿಸ್ತಾನ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟ್ರಾಫಿಕನಲ್ಲಿ ಸಿಲುಕಿ ಕಷ್ಟಪಡುತ್ತಿದ್ದರು ತಿರುಗಿ ನೋಡದ ಪಟ್ಟಣ ಪಂಚಾಯಿತಿ ಅಧಿಕಾರಿಗಳು .

Tue Jan 10 , 2023
ವಾಹನ ಸಂಚಾಲಕರಿಗೆ ತೊಂದರೆಯಾಗುತ್ತದೆ ಅಂತ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಗಮನಕ್ಕೆ ಇಲ್ವಾ..?ವಾಹನ ಚಾಲಕರೇ ಟ್ರಾಫಿಕ್ ಕ್ಲೀಯರ್ ಮಾಡಿಕೊಳ್ಳುವಂತ ಪರಿಸ್ಥಿತಿ ಉಂಟಾಗಿದೆ.ಯಡ್ರಾಮಿ ಪಟ್ಟಣದ ಅಧಿಕಾರಿಗಳು ಏನ್ ಮಾಡ್ತಾ ಇದ್ದಾರೆ ಅವರಿಗೆ ಇದು ಕಾಣಲ್ವಾ ಹಾಗಾದ್ರೆ ಅಧಿಕಾರಿಗಳು ಕಂಡ್ರು ಕಾಣದಂತೆ ವರ್ತಿಸುತ್ತಿದ್ದಾರ ಎಂಬ ಪ್ರಶ್ನೆ ಕಾಡುತ್ತಿದೆಯಡ್ರಾಮಿ ಪಟ್ಟಣದಲ್ಲಿ ಸೋಮವಾರಕೊಮ್ಮೆ ಮಾರ್ಕೆಟ್ ನಡಿಯುತ್ತದೆ ಆ ಸಂದರ್ಭದಲ್ಲಿ ಏನಾದರೂ ಸೀರಿಯಸ್ ಪೇಸೆಂಟ್ ಸಿಳುಕಿದರೆ ದೇವರೇ ಗತಿ ಅಂತ ಕೂಡಾನು ಹೇಳ ಬಹುದಾಗಿದೆ.ಯಡ್ರಾಮಿ ಪಟ್ಟಣವು ತಾಲೂಕ ಅಂತ […]

Advertisement

Wordpress Social Share Plugin powered by Ultimatelysocial