ಆರಂಭಿಕರಾಗಿ ವೇಗವಾಗಿ 7500 ರನ್‌ ಗಡಿದಾಟಿದ 5 ಆಟಗಾರರು ಇವರು:

 

 

 

 

 

ಕದಿನ ಮಾದರಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಬ್ಯಾಟಿಂಗ್ ನಡೆಸುವುದು ಸುಲಭದ ಸವಾಲಲ್ಲ. ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಆಡುತ್ತಾ ತಂಡಕ್ಕೆ ಆರಂಭಿಕ ಯಶಸ್ಸು ಒದಗಿಸುವ ಮಹತ್ತರ ಜವಾಬ್ಧಾರಿಯಿದು. ಆ ದಿನ ಪಿಚ್ ಯಾವ ರೀತಿಯಾಗಿ ವರ್ತಿಸುತ್ತದೆ ಎಂಬುದರ ಅರಿವು ಇಲ್ಲದಿದ್ದರೂ ಅದನ್ನು ಅರ್ಥೈಸಿಕೊಂಡು ಆಡುವ ಹೊಣೆ ಆರಂಭಿಕರದಾಗಿರುತ್ತದೆ. ಈ ಜವಾಬ್ಧಾರಿಯಲ್ಲಿ ಸುದೀರ್ಘ ಕಾಲ ಮುಂದುವರಿಯುವುದು ನಿಜಕ್ಕೂ ದೊಡ್ಡ ಸವಾಲು. ಅದರಲ್ಲೂ ಆರಂಭಿಕರಾಗಿ ಕಣಕ್ಕಿಳಿಯುತ್ತಲೇ 7500ಕ್ಕೂ ಅಧಿಕ ರನ್‌ಗಳಿಸುವುದೆಂದರೆ ಅದು ಶ್ರೇಷ್ಠ ಸಾಧನೆ ಎಂಬುದಕ್ಕೆ ಅನುಮಾನವೇ ಇಲ್ಲ. ಹಾಗಿದ್ದರೂ ಕೆಲವು ಶ್ರೇಷ್ಠ ಆಟಗಾರರು ಆರಂಭಿಕರಾಗಿ ಅದ್ಭುತ ಯಶಸ್ಸು ಸಾಧಿಸಿದ್ದು ಸುದೀರ್ಘ ಕಾಲ ಆರಂಬಿಕರಾಗಿ ಮುಂದುವರಿದು ತಂಡಕ್ಕೆ ನೆರವಾಗಿದ್ದಾರೆ. ಏಕದಿನ ಮಾದರಿಯಲ್ಲಿ ಆರಂಭಿಕರಾಗಿಯೇ ಕಣಕ್ಕಿಳಿದು 7500ಕ್ಕೂ ಅಧಿಕ ರನ್‌ಗಳಿಸಿದ ಆಟಗಾರರು ಇದ್ದಾರೆ. ಇಂದಿನ ಈ ವರದಿಯಲ್ಲಿ ಆರಂಬಿಕರಾಗಿ ಕಣಕ್ಕಿಳಿದು 200ಕ್ಕೂ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 7500ಕ್ಕೂ ಅಧಿಕ ರನ್‌ಗಳಿಸಿದ ಐವರು ಆಟಗಾರರ ಬಗ್ಗೆ ಮಾಹಿತಿಯನ್ನು ನೋಡೋಣ. ಹೆಮ್ಮೆಯ ಸಂಗತಿಯೆಂದರೆ ಐವರು ಆಟಗಾರರ ಈ ಪಟ್ಟಿಯಲ್ಲಿ ಮೂರು ಸ್ಥಾನಗಳು ಭಾರತೀಯರದ್ದೇ ಆಗಿದೆ.bರೋಹಿತ್ ಶರ್ಮಾ, 149 ಇನ್ನಿಂಗ್ಸ್ಟೀ ಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಆರಂಭಿಕರಾಗಿ ಅತ್ಯಂತ ವೇಗವಾಗಿ 7500 ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಕೇವಲ 149 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು 150ಕ್ಕೂ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಿಮಿನಲ್ಸ್‌ಗಳನ್ನು ಹೆಣ್ಣುಮಕ್ಕಳ ಸೌಂಧರ್ಯಕ್ಕೆ ಹೋಲಿಸಿದ ಡಿಕೆ ಶಿವಕುಮಾರ್

Wed Jan 11 , 2023
ಸೆಂಟ್ರೊ ರವಿ, ಸೈಕಲ್ ರವಿ ಬಿಜೆಪಿ ಸರ್ಕಾರದ ಮುತ್ತು ರತ್ನಗಳಿದ್ದಂತೆ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯ ಮಹಿಳೆಯರು ಕುಂಕುಮ ಹಚ್ಚಿದಾಗ ಒಂಥರ, ಮೂಗುತಿ ಹಾಕಿದಾಗ ಹೇಗೆ ಕಣ್ತಾರೋ? ಅದೇ ರೀತಿ ಈವರೆಲ್ಲ ಈ ಸರ್ಕಾರದ ಮುತ್ತು ರತ್ನಗಳಿದ್ದಂತೆ ಕ್ರಿಮಿನಲ್ಸ್‌ಗಳನ್ನು ಹೆಣ್ಣುಮಕ್ಕಳ ಸೌಂಧರ್ಯಕ್ಕೆ ಹೋಲಿಸಿದ ಡಿಕೆ ಶಿವಕುಮಾರ್ ಸೈಕಲ್ ರವಿ, ಸೆಂಟ್ರೊ ರವಿ ಮುತ್ತು ರತ್ನಗಳಿದ್ದಂತೆ, ಈ ಸರ್ಕಾರಕ್ಕೆ ಶೋಭೆ ತರುತ್ತಿದ್ದಾರೆ ಬಿಜೆಪಿ ನಾಯಕರು ಎಂದೆಂದೂ ನೆನಪು ಇಟ್ಟುಕೊಳ್ಳುವಂಥವರು […]

Advertisement

Wordpress Social Share Plugin powered by Ultimatelysocial