ಸಚಿನ್ ಪುತ್ರಿ ಸಾರಾ ಜೊತೆ ಶುಭಮನ್ ಗಿಲ್ ಎಂಗೇಜ್ಮೆಂಟ್‌.

 

ಇತ್ತೀಚೆಗೆ ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡಿದ ವಿಚಾರವಾಗಿ ಶುಭಮನ್ ಗಿಲ್ ಸುದ್ದಿಯಲ್ಲಿದ್ದರು. ಅವರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಸ್ನೇಹ ಹೊಂದಿದ್ದರು ಎಂಬ ವದಂತಿಗಳು ಸಹ ಇವೆ.

ಇದೀಗ ಟ್ವೀಟ್‌ ಒಂದು ಸಾಕಷ್ಟು ವೈರಲ್ ಆಗಿದೆ. ವಾಸ್ತವವಾಗಿ, ನಿನ್ನೆಯ ಪಂದ್ಯದಲ್ಲಿ ಶುಭಮನ್ ಗಿಲ್ ಡಬಲ್‌ ಸೆಂಚ್ಯುರಿ ಬಾರಿಸಿದರು, ಅಲ್ಲದೇ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಸಹ ಮುರಿದರು. ಈ ವೇಳೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಸಾರಾ ಸಾರಾ ಎಂದು ಜಪಿಸುತ್ತಿದ್ದರು. ದೊಡ್ಡದಾಗಿ ಕೂಗಿದರು, ಇದನ್ನು ಕೇಳಿದ ಗಿಲ್‌ ಜನರತ್ತ ಕೈ ಬೀಸಿದರು.

ಕೆಲವು ತಿಂಗಳ ಹಿಂದೆ, ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದರು. ಇಬ್ಬರೂ ಎರಡು ಬಾರಿ ಭಾರತ ಮತ್ತು ವಿದೇಶಗಳಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಡಿನ್ನರ್‌ ಪಾರ್ಟಿ ವೇಳೆ ಕಾಣಿಸಿಕೊಂಡಿದ್ದಾರೆ. ಇಂದು ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 208 ರನ್ ಬಾರಿಸಿದರು. 50 ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಭಾರತದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ದಾಖಲೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮೀಮ್‌ಗಳು ಹರಿದಾಡುತ್ತಿವೆ. ಆದರೆ ಈ ಒಂದು ಟ್ವೀಟ್ ಎಲ್ಲರ ಗಮನ ಸೆಳೆದಿದೆ. ಈ ಟ್ವೀಟ್‌ ನೋಡಿದ ಎಲ್ಲರೂ ಅರೆಕ್ಷಣ ಅಚ್ಚರಿಗೊಂಡಿದ್ದಾರೆ. ಟ್ವಿಟರ್‌ನಲ್ಲಿ ಶುಭಮನ್ ಗಿಲ್ ಜೊತೆ ತಮ್ಮ ಪುತ್ರಿಯ ನಿಶ್ಚಿತಾರ್ಥ ಮಾಡುವುದಾಗಿ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ ಎಂಬ ಟ್ವೀಟ್‌ ಎಲ್ಲೆಡೆ ವೈರಲ್‌ ಆಗುತ್ತಿದೆ. ಇದಕ್ಕೆ ಕೆಲವು ನೆಟಿಜನ್‌ಗಳು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದ್ದು, ಕೆಲವು ಅಭಿಮಾನಿಗಳು ಸಂಪೂರ್ಣವಾಗಿ ಆಶ್ಚರ್ಯಗೊಂಡಿದ್ದಾರೆ. ಆದರೆ ಈ ಟ್ವೀಟ್‌ ಯಾವುದೇ ಅಧಿಕೃತ ಹೇಳಿಕೆಯಾಗಿಲ್ಲ. ಅಲ್ಲದೇ ಶುಭಮನ್‌ ಗಿಲ್‌ ಆಗಲಿ ಸಚಿನ್‌ ತೆಂಡೂಲ್ಕರ್‌ ಆಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದೊಂದು ವದಂತಿಯಾಗಿದೆ ಎಂದು ಹೇಳಲಾಗುತ್ತಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಪಿಎಲ್ ಕುಟುಂಬಗಳಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ.

Thu Jan 19 , 2023
ಚಿಕ್ಕಮಗಳೂರು: ಬಿಪಿಎಲ್ ಕುಟುಂಬಗಳಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲಾಗುವುದು. ಪ್ರತಿ ತಿಂಗಳು ಹಣಕಾಸಿನ ನೆರವು ನೀಡಲು ‘ಗೃಹಿಣಿ ಶಕ್ತಿ’ ಹೆಸರಲ್ಲಿ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಚಿಕ್ಕಮಗಳೂರು ಉತ್ಸವ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಬೀರೂರು ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಮತ್ತು ಆರೋಗ್ಯ ಸುಧಾರಣೆ ಸೇರಿದಂತೆ ಅವರ ಉತ್ತಮ ಬದುಕಿಗೆ ಸರ್ಕಾರ […]

Advertisement

Wordpress Social Share Plugin powered by Ultimatelysocial