71,000 ರೂ. ಬಹುಮಾನ 10 ಅಡಿಯ ದೋಸೆ ತಿಂದರೆ!

ನವದೆಹಲಿ, ಫೆಬ್ರವರಿ 03; ಗರಿ ಗರಿ ದೋಸೆ ಮುರಿಯುವ ದೋಸೆ ವಸ್ವಾಮಿ ಶಕ್ತಿ ಸಾಗರ್ ಹೋಟೆಲ್‌ನಲ್ಲಿ ಸಿಗುವ ಈ ದೋಸೆಯ ಬೆಲೆ 1,500 ರೂ.ಗಳು ಇದುವರೆಗೂ 26 ಜನರು ಸವಾಲು ಸ್ವೀಕರಿಸಿ ದೋಸೆಗೆ ಕೈ ಹಾಕಿ ಸೋತು ಸುಣ್ಣವಾಗಿದ್ದಾರೆ. 40 ನಿಮಿಷಲ್ಲಿ ದೋಸೆ ತಿನ್ನಲಾಗದೇ ಬಿಲ್ ಕೊಟ್ಟು ಮನೆ ದಾರಿ ಹಿಡಿದಿದ್ದಾರೆ.ಹೋಟೆಲ್ ಮಾಲೀಕ ಶೇಖರ್ ಕುಮಾರ್ ಈ ಕುರಿತು ಮಾತನಾಡಿದ್ದಾರೆ, “10 ಅಡಿ ದೋಸೆ ತಿನ್ನುವ ಸ್ಪರ್ಧೆಯನ್ನು ನಮ್ಮ ಹೋಟೆಲ್‌ನಲ್ಲಿ ನಡೆಸಲಾಗುತ್ತಿದೆ. ಒಬ್ಬ ವ್ಯಕ್ತಿ 40 ನಿಮಿಷದಲ್ಲಿ ಸಂಪೂರ್ಣ ದೋಸೆ ತಿಂದರೆ 71 ಸಾವಿರ ರೂ. ನಗದು ಬಹುಮಾನ ನೀಡುತ್ತೇವೆ” ಎಂದು ಹೇಳಿದ್ದಾರೆ.10 ಅಡಿ ಉದ್ದದ ದೋಸೆ ಮಾಡುವುದಕ್ಕೆ ಬೇಕಾದ ಕಾವಲಿ ವ್ಯವಸ್ಥೆಯನ್ನು ಮಾಡಿಕೊಂಡ ಬಳಿಕ ಸ್ವಾಮಿ ಶಕ್ತಿ ಸಾಗರ್ ಹೋಟೆಲ್ ಜನರ ಮುಂದೆ ಈ ಸವಾಲು ಹಾಕಿದೆ. “5, 6, 8 ಅಡಿ ದೋಸೆ ಮಾಮೂಲು ನಾವು ವಿಭಿನ್ನವಾಗಿ ಆಲೋಚಿಸಿ 10 ಅಡಿ ದೋಸೆ ಮಾಡಿದೆವು” ಎನ್ನುತ್ತಾರೆ ಮಾಲೀಕರು.10 ಅಡಿ 4 ಇಂಚು ಅಗಲದ ಕಾವಲಿಯನ್ನು ಸಿದ್ಧಪಡಿಸಲಾಗಿದೆ. ಕಾವಲಿ ಕಾದಿದ್ದರೆ 7 ರಿಂದ 8 ನಿಮಿಷದಲ್ಲಿ 10 ಅಡಿ ದೋಸೆ ಸಿದ್ಧವಾಗುತ್ತದೆ. ಒಂದು ತಿಂಗಳಿನಿಂದ ಈ ಚಾಲೆಂಜ್ ಆರಂಭ ಮಾಡಿದ್ದು 26 ಜನರು ಸವಾಲು ಸ್ವೀಕಾರ ಮಾಡಿದ್ದಾರೆ. ಆದರೆ ಯಾರೂ ಸಹ ಗೆದ್ದಿಲ್ಲ.ದೋಸೆ ಚಾಲೆಂಜ್ ಬಗ್ಗೆ ತಿಳಿಯಲು ದೆಹಲಿಯ ವಿವಿಧ ಪ್ರದೇಶಗಳಿಂದ ಕರೆಗಳು ಬರುತ್ತಿವೆ. ಆದರೆ ಸವಾಲು ಸ್ವೀಕಾರ ಮಾಡಿ ಬಂದವರು ದೋಸೆ ಮುರಿಯುವುದರಲ್ಲಿ ಸೋತು ಹೋಗಿದ್ದಾರೆ.ಸುರೇಂದ್ರ ಗುಪ್ತ ಎನ್ನುವವರು ಸ್ವಾಮಿ ಶಕ್ತಿ ಸಾಗರ್ ಹೋಟೆಲ್‌ಗೆ ಸುಮಾರು 10 ವರ್ಷದಿಂದ ಬರುತ್ತಿದ್ದಾರೆ. ದೋಸೆ ಚಾಲೆಂಜ್ ಬಗ್ಗೆ ತಿಳಿದ ಅವರು ಸವಾಲು ಸ್ವೀಕಾರ ಮಾಡಿದರು. ಆದರೆ ಪೂರ್ಣ ದೋಸೆ ತಿನ್ನಲಾಗಲಿಲ್ಲ. ಇನ್ನೊಮ್ಮೆ ಸವಾಲು ಸ್ವೀಕಾರ ಮಾಡುವ ಹುಮ್ಮಸ್ಸು ಅವರಲ್ಲಿದೆ.ಪೂನಂ ಗುಪ್ತ ಸಹ 1,500 ರೂ. ಕೊಟ್ಟು 10 ಅಡಿ ದೋಸೆ ತಿನ್ನುವ ಚಾಲೆಂಜ್ ಸ್ವೀಕಾರ ಮಾಡಿದ್ದರು. ಆದರೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಕುಟುಂಬ ಸದಸ್ಯರೆಲ್ಲರೂ ಸೇರಿ ತಿಂದು ಮುಗಿಸಿ ಸೋಲೊಪ್ಪಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ: ಗಾಲ್ವಾನ್‌ ಘರ್ಷಣೆಯಲ್ಲಿ ಸತ್ತವರಿಗಿಂತ ನದಿಯಲ್ಲಿ ಕೊಚ್ಚಿಹೋದ ಚೀನಾ ಸೈನಿಕರೇ ಅಧಿಕ

Thu Feb 3 , 2022
ನವದೆಹಲಿ: ಗಾಲ್ವಾನ್‌ ಕಣಿವೆಯಲ್ಲಿ ಭಾರತದೊಂದಿಗೆ 2020ರಲ್ಲಿ ನಡೆದ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತಲೂ ಅಧಿಕವಾಗಿರುವ ಸಾಧ್ಯತೆಗಳಿವೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ಬುಧವಾರ ವರದಿ ಮಾಡಿದೆ.ಘರ್ಷಣೆಯಲ್ಲಿ ಮೃತಪಟ್ಟವರಿಗಿಂತಲೂ, ಗಾಲ್ವಾನ್‌ ನದಿಯನ್ನು ದಾಟುವ ಧಾವಂತದಲ್ಲಿ ಕೊಚ್ಚಿಹೋದವರ ಸಂಖ್ಯೆಯೇ ಅಧಿಕವಾಗಿದೆ. ಚೀನಾ ಈ ವಿಚಾರವನ್ನು ಹೊರ ಜಗತ್ತಿಗೆ ಬಹಿರಂಗಪಡಿಸಿಲ್ಲ ಎಂದು ‘ದಿ ಕ್ಲಾಕ್ಸನ್‌’ ವರದಿ ಮಾಡಿದೆ.ಸಂಶೋಧಕರು ಮತ್ತು ಚೀನಾದ ಬ್ಲಾಗರ್‌ಗಳ ಸಂಶೋಧನೆಗಳನ್ನು ಉಲ್ಲೇಖಿಸಿ ‘ಕ್ಲಾಕ್ಸನ್‌’ ವರದಿ ಮಾಡಿದೆ. ಮಾಹಿತಿ ಒದಗಿಸಿರುವವರು […]

Advertisement

Wordpress Social Share Plugin powered by Ultimatelysocial