ಯುವ ಬ್ಯಾಟರ್ ಪ್ರತಿಕ್ರಿಯೆ ಹೀಗಿದೆ.

 

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಸದ್ಯ ತಂಡದಲ್ಲಿ ಅತ್ಯುತ್ತಮ ಫಾರ್ಮ್‌ನೊಂದಿಗೆ ರನ್ ಗಳಿಸುವ ಆಟಗಾರನಾಗಿದ್ದಾರೆ. ಅಲ್ಲದೇ ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆಯ (208) ದ್ವಿಶತಕ ಬಾರಿಸಿದ್ದಾರೆ.

ಇದೀಗ ಶುಭ್ಮನ್ ಗಿಲ್ ಬ್ಯಾಟಿಂಗ್‌ಗೆ ಮಾಜಿ ಕ್ರಿಕೆಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದು, ಅವರ ಅಭಿಮಾನಿಗಳ ಪಟ್ಟಿಯಲ್ಲಿ ಮಾಜಿ ಶ್ರೇಷ್ಠ ಬ್ಯಾಟರ್ ಸುನಿಲ್ ಗವಾಸ್ಕರ್ ಕೂಡ ಇದ್ದಾರೆ. ಶುಭ್ಮನ್ ಗಿಲ್ ಇತ್ತೀಚೆಗೆ ಏಕದಿನ ಮಾದರಿಯಲ್ಲಿ ದ್ವಿಶತಕ ಗಳಿಸಿದ ಭಾರತದ ಐದನೇ ಬ್ಯಾಟರ್ ಎನಿಸಿಕೊಂಡರು.

ಆಪ್ತ ಸ್ನೇಹಿತನಿಂದಲೇ ಭಾರೀ ಮೊತ್ತದ ವಂಚನೆಗೊಳಗಾದ ಭಾರತ ತಂಡದ ವೇಗಿ ಉಮೇಶ್ ಯಾದವ್

ಪ್ರಸ್ತುತ 23 ವರ್ಷ ವಯಸ್ಸಿನ ಶುಭ್ಮನ್ ಗಿಲ್ 20 ಏಕದಿನ ಪಂದ್ಯಗಳನ್ನು ಆಡಿದ ನಂತರ 71.38 ಸರಾಸರಿಯನ್ನು ಹೊಂದಿದ್ದಾರೆ. ಅವರು 50 ಓವರ್‌ಗಳ ಸ್ವರೂಪದಲ್ಲಿ ಮೂರು ಬಾರಿ ಮೂರಂಕಿ ಮೊತ್ತ ದಾಟಿದ್ದಾರೆ.

ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಶುಭ್ಮನ್ ಗಿಲ್ ಅಜೇಯ 40 ರನ್ ಗಳಿಸಿ ನ್ಯೂಜಿಲೆಂಡ್ ನೀಡಿದ್ದ 109 ರನ್‌ಗಳ ಗುರಿಯನ್ನು ಭಾರತ ಸುಲಭವಾಗಿ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಮೂತ್‌ಮ್ಯಾನ್ ಗಿಲ್ ಎಂದು ಕರೆದ ಸುನಿಲ್ ಗವಾಸ್ಕರ್ಎರಡನೇ ಏಕದಿನ ಪಂದ್ಯದ ನಂತರ ಶುಭ್ಮನ್ ಗಿಲ್ ಅವರು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರೊಂದಿಗೆ ಮಾತುಕತೆ ನಡೆಸಿದರು. ಸುನಿಲ್ ಗವಾಸ್ಕರ್ ಅವರು “ನಾನು ನಿಮಗೆ ‘ಸ್ಮೂತ್‌ಮ್ಯಾನ್ ಗಿಲ್’ ಎಂಬ ಹೊಸ ಅಡ್ಡಹೆಸರನ್ನು ನೀಡಿದ್ದೇನೆ, ನಿಮಗೆ ಪರವಾಗಿಲ್ಲ ಎಂದು ನಾನು ಭಾವಿಸುತ್ತೇನೆ,” ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಶುಭ್ಮನ್ ಗಿಲ್ ‘ನನಗೇನೂ ಅಭ್ಯಂತರವಿಲ್ಲ ಸರ್’ ಎಂದು ನಗುತ್ತಲೇ ಉತ್ತರಿಸಿದರು.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 106 ರನ್ ಗಳಿಸಿದಾಗ, ಶುಭ್ಮನ್ ಗಿಲ್ ಕೇವಲ 19 ಏಕದಿನ ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದರು.

ವೇಗವಾಗಿ 1000 ರನ್ ಕಲೆಹಾಕಿದ ಬ್ಯಾಟ್ಸ್‌ಮನ್

ಇದು ಭಾರತದ ಮಟ್ಟಿಗೆ ಕನಿಷ್ಠ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 1000 ರನ್ ಕಲೆಹಾಕಿದ ಬ್ಯಾಟ್ಸ್‌ಮನ್ ಎನಿಸಿದರು. ಇದೇ ವೇಳೆ 24 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಗಳಿಸಿದ್ದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಮೀರಿಸಿದರು.

ಶುಭ್ಮನ್ ಗಿಲ್ ಈಗ ಪಾಕಿಸ್ತಾನದ ಇಮಾಮ್-ಉಲ್-ಹಕ್ ಜೊತೆಗೆ ಅತಿ ವೇಗವಾಗಿ 1000 ರನ್ ಗಳಿಸಿದ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಫಖರ್ ಜಮಾನ್ 18 ಏಕದಿನ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 1000 ರನ್ ಪೂರೈಸಿದ ಆಟಗಾರನಾಗಿ ಮೊದಲ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 19 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ ಶುಭ್ಮನ್ ಗಿಲ್ ಅವರು 21 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದ ವಿವ್ ರಿಚರ್ಡ್ಸ್, ಬಾಬರ್ ಅಜಂ, ಕೆವಿನ್ ಪೀಟರ್ಸನ್, ಜೊನಾಥನ್ ಟ್ರಾಟ್, ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರಂತಹ ಆಟಗಾರರನ್ನು ಹಿಂದಿಕ್ಕಿದ್ದಾರೆ.

ಶುಭ್ಮನ್ ಗಿಲ್ ಅವರನ್ನು ಶ್ಲಾಗಿಸಿದ ಸಲ್ಮಾನ್ ಬಟ್

ಕಳೆದ ವರ್ಷದಿಂದ ಭಾರತ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶುಭ್ಮನ್ ಗಿಲ್ ಅವರನ್ನು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

“ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವುದನ್ನು ನಾನು ನೋಡಿದಾಗಿನಿಂದ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರ ಸ್ಟ್ರೋಕ್‌ಗಳಲ್ಲಿನ ಅವರ ಸೊಬಗು ಮತ್ತು ಶೈಲಿ ನಿಜವಾಗಿಯೂ ಶ್ಲಾಘನೀಯ,” ಎಂದಿದ್ದಾರೆ.

ಶ್ರೇಷ್ಠವಾದುದನ್ನು ಸಾಧಿಸುವ ಹಾದಿಯಲ್ಲಿರುತ್ತಾರೆ

“ನನಗೆ ಇದ್ದ ಒಂದೇ ಒಂದು ಚಿಂತೆಯೆಂದರೆ ಅವನು ಯಾಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು. ಆದರೆ ಅವರು ನ್ಯೂಜಿಲೆಂಡ್ ವಿರುದ್ಧ ವಿಭಿನ್ನ ರೀತಿಯ ಕ್ರಿಕೆಟ್ ಆಡಿದ್ದಾರೆ. ತುಂಬಾ ಕಡಿಮೆ ಜನರು ಚಿಕ್ಕ ವಯಸ್ಸಿನಲ್ಲಿ ತಮ್ಮ ಶೈಲಿಯ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಹೊಂದಿದ್ದಾರೆ. ಗಿಲ್ ಅದೇ ರೀತಿಯ ಒಬ್ಬ ಆಟಗಾರನೆಂದು ನಾನು ಭಾವಿಸುತ್ತೇನೆ”.

“ಶುಭ್ಮನ್ ಗಿಲ್ ತಮ್ಮ ವೃತ್ತಿಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ, ಅವರು ಹೀಗೆಯೇ ಆಟವಾಡುವುದನ್ನು ಮುಂದುವರೆಸಿದರೆ ಮತ್ತು ಕಠಿಣ ಪರಿಶ್ರಮದಿಂದ ಅವರು ಶ್ರೇಷ್ಠವಾದುದನ್ನು ಸಾಧಿಸುವ ಹಾದಿಯಲ್ಲಿರುತ್ತಾರೆ,” ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖ್ಯಾತ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಒಡೆದಿರುವ ಘಟನೆ.

Sun Jan 22 , 2023
ಬಳ್ಳಾರಿ: ಖ್ಯಾತ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಒಡೆದಿರುವ ಘಟನೆ ನಿನ್ನೆ(ಜ.21) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಿಗದಿಯಾಗಿತ್ತು. ವೇದಿಕೆ ಮೇಲೆ ಹಾಡುಗಳನ್ನು ಹೇಳಿ ಮರಳುವಾಗ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಮಂಗ್ಲಿ ನೋಡಲು ಮುಗಿಬಿದ್ದಿದ್ದಾರೆ. ಅಲ್ಲದೆ ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್​ ಟೆಂಟ್​ಗೆ ಯುವಕರ ಗುಂಪು ನುಗ್ಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಭದ್ರತೆಯ ದೃಷ್ಟಿಯಿಂದ ಲಘು […]

Advertisement

Wordpress Social Share Plugin powered by Ultimatelysocial