ಹೆಚ್ಚು ಹಣ ಕೇಳಿರುವ ಈ 5 ಆಟಗಾರರು ಟೂರ್ನಿಯಿಂದ ಹೊರಬೀಳುವುದು ಖಚಿತ .

ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೌದು, ಈ ಬಾರಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದ್ದು, ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ಏರ್ಪಡಲಿದೆ.ಲಕ್ನೋ ಸೂಪರ್ ಜಯಂಟ್ಸ್ ಮತ್ತು ಅಹ್ಮದಾಬಾದ್ ನೂತನ ತಂಡಗಳಾಗಿ ಸೇರ್ಪಡೆಗೊಂಡಿವೆ.ಹೀಗೆ ಈ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸುವುದು ಕಡ್ಡಾಯವಾಗಿದ್ದು, ಇದಕ್ಕೂ ಮುನ್ನ ಕಳೆದ ವರ್ಷ ಬಿಸಿಸಿಐ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯನ್ನು ಏರ್ಪಡಿಸಿತ್ತು. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ಬಿಸಿಸಿಐ ನಿಯಮದ ಪ್ರಕಾರ ತಮಗೆ ಬೇಕಾದ ಆಟಗಾರರನ್ನು (ಗರಿಷ್ಠ 4) ರಿಟೈನ್ ಮಾಡಿಕೊಂಡಿದ್ದು ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹೀಗೆ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗದೇ ಹೊರಬಿದ್ದಿರುವ ಆಟಗಾರರು ಸೇರಿದಂತೆ ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಗೆ ಒಟ್ಟು 1214 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಒಟ್ಟು 49 ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿಗಳು ಎಂದು ಘೋಷಿಸಿಕೊಂಡಿದ್ದಾರೆ.ಹೀಗೆ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿಗಳು ಎಂದು ಘೋಷಿಸಿಕೊಂಡಿರುವ ಆಟಗಾರರ ಪೈಕಿ ಬಹುತೇಕ ಆಟಗಾರರು ಹರಾಜಾಗದೇ ಹೊರ ಬೀಳಲಿದ್ದಾರೆ ಎನ್ನುವ ಅಭಿಪ್ರಾಯ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುತ್ತಿದ್ದು, ಅದರಲ್ಲಿಯೂ ಈ ಕೆಳಕಂಡ 5 ಆಟಗಾರರಿಗೆ ತಮ್ಮ ಮೂಲ ಬೆಲೆಯೇ ಹಿನ್ನಡೆಯನ್ನು ಉಂಟುಮಾಡಲಿದ್ದು ಹರಾಜಿನಲ್ಲಿ ಬಿಕರಿಯಾಗದೇ ಟೂರ್ನಿಯಿಂದ ಹೊರ ಬೀಳಲಿದ್ದಾರೆ ಎನ್ನಲಾಗುತ್ತಿದೆ.IPLನಲ್ಲಿ ಈ ಬಾರಿ ಮಾರಾಟವಾಗದೆ ಉಳಿಯಬಹುದಾದ ಆಟಗಾರರುಇಂಗ್ಲೆಂಡ್ ತಂಡದ ಆಲ್ ರೌಂಡರ್ ಕ್ರೇಗ್ ಓವರ್‌ಟನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ತನ್ನ ಮೂಲ ಬೆಲೆಯಾಗಿ 2 ಕೋಟಿಯನ್ನು ನಮೂದಿಸಿದ್ದಾರೆ. ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇದುವರೆಗೂ ಒಟ್ಟು 63 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಕ್ರೇಗ್ ಓವರ್‌ಟನ್ 58 ವಿಕೆಟ್ ಪಡೆದಿದ್ದಾರೆ. ಹೀಗೆ ಅತ್ಯುನ್ನತ ಯಶಸ್ಸನ್ನು ಸಾಧಿಸದೇ ಇರುವ ಕ್ರೇಗ್ ಓವರ್‌ಟನ್ 2 ಕೋಟಿ ಮೂಲ ಬೆಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಹರಾಜಿನಲ್ಲಿ ಈತನ ಪಾಲಿಗೆ ಮುಳ್ಳಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನೆಟ್ಫ್ಲಿಕ್ಸ್ನ ಅಪರಾಧ-ಥ್ರಿಲ್ಲರ್ ಸರಣಿಯನ್ನು ನಿರ್ದೇಶಿಸಲು ಫ್ಯಾಮಿಲಿ ಮ್ಯಾನ್ ರಚನೆಕಾರರು ರಾಜ್ ಮತ್ತು ಡಿಕೆ;

Mon Jan 31 , 2022
ಫ್ಯಾಮಿಲಿ ಮ್ಯಾನ್ ರಚನೆಕಾರರಾದ ರಾಜ್ ಮತ್ತು ಡಿಕೆ ನೆಟ್‌ಫ್ಲಿಕ್ಸ್‌ಗಾಗಿ ಕ್ರೈಮ್-ಥ್ರಿಲ್ಲರ್ ಗನ್ಸ್ ಮತ್ತು ಗುಲಾಬ್ಸ್ ಅನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ, ಇದು ಸ್ಟ್ರೀಮಿಂಗ್ ದೈತ್ಯರೊಂದಿಗೆ ಅವರ ಮೊದಲ ನಿರ್ದೇಶನದ ಸಾಹಸವನ್ನು ಗುರುತಿಸುತ್ತದೆ. ಬರಹಗಾರ-ನಿರ್ದೇಶಕ ಜೋಡಿ, ಅವರ ಪೂರ್ಣ ಹೆಸರು ರಾಜ್ ನಿಡಿಮೋರು ಮತ್ತು ಕೃಷ್ಣ ಡಿ.ಕೆ. ರಾಜ್ & ಡಿಕೆ ಎಂದು ಹೆಚ್ಚು ಪ್ರಸಿದ್ಧವಾಗಿದೆ. ಅವರ ಚಿತ್ರಕಥೆಯು ಸ್ತ್ರೀ, ಗೋ ಗೋವಾ ಗಾನ್, ಶೋರ್ ಇನ್ ದಿ ಸಿಟಿ ಮತ್ತು 99 […]

Advertisement

Wordpress Social Share Plugin powered by Ultimatelysocial