25 ಎಸೆತಗಳಲ್ಲಿ 56 ರನ್.

ಪಿಎಲ್ ಆರಂಭವಾಗುವ ಮುನ್ನವೇ ಆರ್​ಸಿಬಿ ಅಭಿಮಾನಿಗಳಿಗೆ ಸಖತ್ ಖುಷಿಯಾಗುವಂತಹ ಸುದ್ದಿಗಳು ಸಿಗ್ತಾ ಇವೆ. ಆರ್​ಸಿಬಿ ಆಟಗಾರ ವಿರಾಟ್ ಕೊಹ್ಲಿ ಸತತವಾಗಿ ಶತಕಗಳನ್ನು ಬಾರಿಸುತ್ತಿದ್ದರೆ, ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದು ಮಿಂಚುತ್ತಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ 20 ಟೂರ್ನಿಯಲ್ಲಿ ಕೂಡ ಆರ್​ಸಿಬಿ ಆಟಗಾರನ ಅಬ್ಬರ ಜೋರಾಗಿದೆ.

ಮಿನಿ ಹರಾಜಿನಲ್ಲಿ ಆರ್​ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಎಸ್‌ಎ20 ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ.

IND Vs NZ 2nd ODI: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಿದ ರಾಯ್ಪುರ ಕ್ರೀಡಾಂಗಣ

ಜನವರಿ 20, ಶುಕ್ರವಾರ ನಡೆದ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಪರವಾಗಿ ಆಡುವ ವಿಲ್ ಜ್ಯಾಕ್ಸ್ 25 ಎಸೆತಗಳಲ್ಲಿ 56 ರನ್ ಗಳಿಸಿ ಮತ್ತೊಮ್ಮೆ ಅಬ್ಬರಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ 4 ಭರ್ಜರಿ ಸಿಕ್ಸರ್ ಸೇರಿದ್ದವು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡರ್ಬನ್ ಸೂಪರ್ ಜೈಂಟ್ಸ್18.1 ಓವರ್ ಗಳಲ್ಲಿ 80 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ಸುಲಭ ಸವಾಲನ್ನು ಬೆನ್ನತ್ತಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿಲ್‌ ಜ್ಯಾಕ್ಸ್ ಸ್ಫೋಟಕ ಅರ್ಧಶತಕದ ನೆರವಿನಿಂದ ಕೇವಲ 7.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಉತ್ತಮ ಫಾರ್ಮ್‌ನಲ್ಲಿರುವ ವಿಲ್ ಜ್ಯಾಕ್ಸ್

ಎಸ್‌ಎ 20 ಟೂರ್ನಿಯಲ್ಲಿ ವಿಲ್‌ ಜ್ಯಾಕ್ಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದುವರೆಗೂ 5 ಪಂದ್ಯಗಳನ್ನಾಡಿರುವ ಅವರು, 40.80 ಸರಾಸರಿ ಮತ್ತು 196.15 ಸ್ಟ್ರೈಕ್‌ರೇಟ್‌ನಲ್ಲಿ 204 ರನ್ ಗಳಿಸಿದ್ದಾರೆ. ಟೂರ್ನಿಯ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ. ಇದುವರೆಗೂ ಎಸ್‌ಎ20 ಟೂರ್ನಿಯಲ್ಲಿ 20 ಬೌಂಡರಿ, 14 ಭರ್ಜರಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಕೂಡ ಅವರು ಸುದ್ದಿಯಲ್ಲಿದ್ದಾರೆ. ಜೋಬರ್ಗ್‌ ಸೂಪರ್ ಕಿಂಗ್ಸ್ ವಿರುದ್ದ ನಡೆದ ಕಳೆದ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದರು. ವಿಲ್ ಜ್ಯಾಕ್ಸ್ ಹಿಡಿದ ಕ್ಯಾಚ್‌ಅನ್ನು ಸದ್ಯಕ್ಕೆ ಎಲ್ಲರೂ ‘ಕ್ಯಾಚ್‌ ಆಫ್ ದಿ ಟೂರ್ನಮೆಂಟ್’ ಎಂದು ಹೇಳುತ್ತಿದ್ದಾರೆ.

ಐಪಿಎಲ್‌ನಲ್ಲಿ ನೋಡಲು ಅಭಿಮಾನಿಗಳ ಕಾತರ

ಆರ್​ಸಿಬಿ ತಂಡಕ್ಕೆ ಸೇರ್ಪಡೆಯಾಗಿರುವ ವಿಲ್ ಜ್ಯಾಕ್ಸ್‌ರ ಆಟವನ್ನು ಕಣ್ತುಂಬಿಕೊಳ್ಳಲು ಆರ್​ಸಿಬಿ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. 3.2 ಕೋಟಿ ರುಪಾಯಿ ನೀಡಿ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಆರ್​ಸಿಬಿಯ ಬಹುತೇಕ ಆಟಗಾರರು ವಿವಿಧ ಪಂದ್ಯಗಳಲ್ಲಿ, ಲೀಗ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಆರ್​ಸಿಬಿ ಪಾಳಯದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಮೋದಿಗೆ ಮಾತ್ರ ಉಕ್ರೇನ್-ರಷ್ಯಾ ಯುದ್ಧ ತಡೆಯುವ ಸಾಮರ್ಥ್ಯ ಇದೆ.

Sat Jan 21 , 2023
ರಷ್ಯಾ ಮತ್ತು ಉಕ್ರೇನ್ ನಡುವೆ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧವು ವಿಶ್ವದ ಹಲವು ದೇಶಗಳನ್ನು ಬಾಧಿಸುತ್ತಿದೆ. ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಇದು ಭಾರತದ ಪ್ರಧಾನಿಯಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯವರು ಯುದ್ಧವನ್ನು ಅಂತ್ಯಗೊಳಿಸುವ ಸಾಮರ್ಥ್ಯ ಇದೆ ಎಂದು ಫ್ರೆಂಚ್ ಪತ್ರಕರ್ತೆ ಲಾರಾ ಹೈಮ್ ಹೇಳಿದ್ದಾರೆ. ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಲಾರಾ ಹೈಮ್, ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಗಳಲ್ಲಿ […]

Advertisement

Wordpress Social Share Plugin powered by Ultimatelysocial