ಇಂಗ್ಲೆಂಡ್ ವಿರುದ್ಧ 4 ವಿಕೆಟ್​ಗಳ ಗೆಲುವು ̤

ಶನಿವಾರ ರಾತ್ರಿ ನಡೆದ ಅಂತಿಮ ಫೈನಲ್ ಕಾದಾಟದಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ಭಾರತ ಅಂಡರ್ – 19 ತಂಡ ದಾಖಲೆಯ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಐಸಿಸಿ ಅಂಡರ್ – 19 ವಿಶ್ವಕಪ್​ನಲ್ಲಿ ಭಾರತದ ಪಾರುಪತ್ಯ ಮುಂದುವರೆದಿದೆ.ಶನಿವಾರ ರಾತ್ರಿ ನಡೆದ ಅಂತಿಮ ಫೈನಲ್ ಕಾದಾಟದಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ಭಾರತ ಅಂಡರ್ – 19 ತಂಡ ದಾಖಲೆಯ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ನೆಲ ಕಚ್ಚಿ ನಿಂತು ತಂಡಕ್ಕೆ ಆಸರೆಯಾದ ಜೇಮ್ಸ್ ರೋ 12 ಬೌಂಡರಿ ಸಹಿತ 95 ರನ್ ಗಳಿಸಿ ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು. ಉಳಿದಂತೆ ಜಾರ್ಜ್ ಥಾಮಸ್ 27 ಮತ್ತು ಜೇಮ್ಸ್ ಸೇಲ್ಸ್ 34 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟರ್‌ಗಳು ಪರಿಣಾಮಕಾರಿಯಾಗಲಿಲ್ಲ. 44.5 ಓವರ್​ನಲ್ಲಿ 189 ರನ್​ಗೆ ಆಂಗ್ಲರು ಆಲೌಟ್ ಆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುವಾಹಟಿಯ ರೈಲ್ವೆ ನಿಲ್ದಾಣದಿಂದ ರೈಲ್ವೇ ರಕ್ಷಣಾ ಪಡೆ ಅಪರೂಪದ ಜಾತಿಯ 235 ಆಮೆಗಳನ್ನು ಪತ್ತೆ ಮಾಡಿದೆ

Sun Feb 6 , 2022
ಗುವಾಹಟಿ (ಅಸ್ಸಾಂ) [ಭಾರತ], ಫೆಬ್ರವರಿ 6 (ANI): ಗುವಾಹಟಿಯ ಕಾಮಾಖ್ಯ ರೈಲು ನಿಲ್ದಾಣದಿಂದ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಶನಿವಾರದಂದು ಅಪರೂಪದ ಜಾತಿಯ 235 ಆಮೆಗಳನ್ನು ವಶಪಡಿಸಿಕೊಂಡಿದೆ. ಭಾರತೀಯ ಫ್ಲಾಪ್ ಶೆಲ್ ಆಮೆಗಳನ್ನು 10 ಚೀಲಗಳಲ್ಲಿ ಮರೆಮಾಡಲಾಗಿದೆ. RPF ಸಿಬ್ಬಂದಿಗಳು 19305 ರ ಅಪ್ (ಇಂದೋರ್-KYQ) ರೈಲಿನಿಂದ ಕಾಮಾಖ್ಯ ರೈಲು ನಿಲ್ದಾಣಕ್ಕೆ ಆಗಮಿಸಿದಾಗ ಈ ಹಕ್ಕು ಪಡೆಯದ ಚೀಲಗಳನ್ನು ವಶಪಡಿಸಿಕೊಂಡರು ಮತ್ತು ಆಮೆಗಳನ್ನು ಗುವಾಹಟಿ ಅರಣ್ಯ ಶ್ರೇಣಿಗೆ ರಕ್ಷಣೆ ಮತ್ತು […]

Advertisement

Wordpress Social Share Plugin powered by Ultimatelysocial