ನೂತನ ತೆರಿಗೆ ಕೋಟಿ ಮಂದಿಗೆ ಲಾಭ.

ಹೊಸ ತೆರಿಗೆ ಪದ್ಧತಿಯಡಿಯಲ್ಲಿ ರಿಯಾಯಿತಿ ಮಟ್ಟವನ್ನು ೭ ಲಕ್ಷಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಸುಮಾರು ೫-೭ ಲಕ್ಷ ಆದಾಯದ ವ್ಯಾಪ್ತಿಯಲ್ಲಿರುವ ಸುಮಾರು ಒಂದು ಕೋಟಿ ಜನರಿಗೆ ಲಾಭವಾಗಲಿದೆ ಎಂದು ಹಣಕಾಸು ಸಚಿವಾಲಯದ ತಿಳಿಸಿವೆ.
ಹಲವರು ಸಾರ್ವಜನಿಕ ಭವಿಷ್ಯ ನಿಧಿ ಅಥವಾ ೫-ವರ್ಷದ ನಿಶ್ಚಿತ ಠೇವಣಿಗಳಂತಹ ನಿರ್ದಿಷ್ಟ ಉಳಿತಾಯ ಸಾಧನಗಳಲ್ಲಿ ಹೂಡಿಕೆಗೆ ಲಭ್ಯವಿರುವ ಪ್ರಯೋಜನ ಬಳಸಲು ಸಾಧ್ಯವಾಗುತ್ತಿಲ್ಲ, ಅವರ ತೆರಿಗೆ ಹೊಣೆಗಾರಿಕೆ ಹೆಚ್ಚಿಸುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ವ್ಯಕ್ತಿಗಳು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ, ಉಳಿತಾಯದ ಕಾರಣದಿಂದಾಗಿ ಅವರು ಕ್ಲೈಮ್ ಮಾಡಲು ಸಾಧ್ಯವಾಗುವ ಕಡಿತಗಳ ಮೊತ್ತ ಲೆಕ್ಕಿಸದೆ.ಹೊಸ ತೆರಿಗೆ ಪದ್ದತಿಯಿಂದ ೧ ಕೋಟಿ ಜನರಿಗೆ ಲಾಭವಾಗಲಿದೆ ಎಂದು ಹೇಳಿದೆ.
ಹೊಸ ತೆರಿಗೆ ಪದ್ದತಿಯಡಿ ಆದಾಯ ತೆರಿಗೆ ವಿನಾಯಿತಿ ಮಿತಿ ೨.೫ ಲಕ್ಷದಿಂದ ೩ ಲಕ್ಷಕ್ಕೆ ಹೆಚ್ಚಿಸಿರುವುದು ತೆರಿಗೆದಾರರ ಪರಿವರ್ತನೆಗೆ ಸಹಕಾರಿಯಾಗಲಿದೆ,ಎಲ್ಲಾ ಆದಾಯ ಹಂತಗಳಲ್ಲಿ ಒಟ್ಟು ತೆರಿಗೆ ಹೊರಹೋಗುವಿಕೆಯು ಕಡಿಮೆಯಾಲಿದೆ ಎಂದು ತಿಳಿಸಿದೆ.
ದೇಶದಲ್ಲಿ ಆರು ಕೋಟಿಗೂ ಹೆಚ್ಚು ತೆರಿಗೆದಾರರಿದ್ದಾರೆ ಮತ್ತು ಈಗ ೩ ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಯಾವುದೇ ಹೊಣೆಗಾರಿಕೆಂ ಹೊಂದಿರದಿದ್ದರೂ ಸಹ, ರಿಟನ್ರ್ಸ್ ಸಲ್ಲಿಸಬೇಕಾಗುತ್ತದೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ,
ಮಾರ್ಚ್ ೨೦೨೨ ರ ಅಂತ್ಯದವರೆಗೆ, ವ್ಯಕ್ತಿಗಳು ಸುಮಾರು ೬.೪ ಕೋಟಿ ರಿಟರ್ನ್‌ಗಳನ್ನು ಸಲ್ಲಿಸಿದ್ದಾರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ೮೦ಅ ಅಡಿಯಲ್ಲಿ ಹೂಡಿಕೆಗಳು ಮತ್ತು ಹೂಡಿಕೆಗಳ ಮೇಲಿನ ಕಡಿತಗಳ ಖಾತೆಯಲ್ಲಿ ರೂ ೮೪,೦೦೦ ಕೋಟಿಗೂ ಹೆಚ್ಚು ಆದಾಯ ಮರು ಪಾವತಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದಾನಿ ಷೇರು ಶೆ.೧೦ ರಷ್ಟು ಕುಸಿತ.

Mon Feb 6 , 2023
ಹಿಂಡೆನ್‌ಬರ್ಗ್ ವರದಿಯ ಬೆನ್ನಲ್ಲೇ ಸತತ ೮ನೇ ದಿನವೂ ಉದ್ಯಮಿ ಗೌತಮ್ ಅದಾನಿ ಸಮೂಹದ ಷೇರುಗಳು ಶೇ.೧೦ ರಷ್ಟು ಕುಸಿತ ಕಂಡಿವೆ ಈ ಮೂಲಕ ಅದಾನಿ ಸಮೂಹಕ್ಕೆ ಮತ್ತೆ ೫೦ ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದ್ದು ದಿನದಿಂದ ದಿನಕ್ಕೆ ಅದಾನಿ ಸಾಮ್ರಾಜ್ಯ ಪಾತಾಳಕ್ಕೆ ಕುಸಿಯುತ್ತಿದೆ.ಎಂಟನೇ ದಿನದ ವಹಿವಾಟಿನಲ್ಲಿ ಬಿಲಿಯನೇರ್ ಗೌತಮ್ ಅದಾನಿ ಅವರ ಸಾಮ್ರಾಜ್ಯಕ್ಕೆ ಸೇರಿದ ಷೇರುಗಳು ತಡೆರಹಿತ ಕುಸಿತದಲ್ಲಿ ಶೇ. ೧೦ ವರೆಗೆ ಕುಸಿದಿವೆ ಅದಾನಿ ಟ್ರಾನ್ಸ್‌ಮಿಷನ್ ಪ್ಯಾಕ್‌ನಲ್ಲಿ […]

Advertisement

Wordpress Social Share Plugin powered by Ultimatelysocial