ತೆಲಂಗಾಣ: ಸಿಆರ್​​ಪಿಎಫ್ ಎಸ್​ಐಯನ್ನು ಗುಂಡು ಹಾರಿಸಿ ಕೊಂದು, ಅದೇ ಗನ್​ನಿಂದ ಶೂಟ್ ಮಾಡಿಕೊಂಡ ಹೆಡ್​ಕಾನ್ಸ್ಟೇಬಲ್

ತೆಲಂಗಾಣ: ಸಿಆರ್​​ಪಿಎಫ್ ಎಸ್​ಐಯನ್ನು ಗುಂಡು ಹಾರಿಸಿ ಕೊಂದು, ಅದೇ ಗನ್​ನಿಂದ ಶೂಟ್ ಮಾಡಿಕೊಂಡ ಹೆಡ್​ಕಾನ್ಸ್ಟೇಬಲ್
CRPF | Mulugu District: ಸಿಆರ್​ಪಿಎಫ್ ಹೆಡ್​ ಕಾನ್ಸ್ಟೇಬಲ್ ಒಬ್ಬ ಎಸ್​ಐ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ ತನ್ನ ಮೇಲೆ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ತೆಲಂಗಾಣ: ಹೈದರಾಬಾದ್​ನಿಂದ ಸುಮಾರು 285 ಕಿಮೀ ದೂರದಲ್ಲಿರುವ ಮುಲುಗು (Mulugu) ಜಿಲ್ಲೆಯ ವೆಂಕಟಾಪುರಂ ಗ್ರಾಮದಲ್ಲಿ ಸಿಆರ್‌ಪಿಎಫ್‌ನಲ್ಲಿ (CRPF) ಕೆಲಸ ಮಾಡುತ್ತಿದ್ದ ಒಬ್ಬ ಯೋಧ ತನ್ನ ಸಹದ್ಯೋಗಿ ಮೇಲೆ ಗುಂಡು ಹಾರಿಸಿದ್ದಾನೆ.

ಅಲ್ಲದೇ ಅದೇ ಗನ್​ನಿಂದ ತನ್ನ ಮೇಲೂ ಗುಂಡು ಹಾರಿಸಿಕೊಂಡಿದ್ದಾನೆ. ವೆಂಕಟಾಪುರಂ ಮಂಡಲ ಕೇಂದ್ರದ 39 ಬೆಟಾಲಿಯನ್​ನಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗ್ರಾಮ್ ಸಿಂಗ್ ಪಿಟಿಐಗೆ ಮಾಹಿತಿ ನೀಡಿದ್ದು, ಸ್ಟೀಫನ್ ಎಂಬ ಹೆಡ್​​ಕಾನ್ಸ್ಟೇಬಲ್ ಮತ್ತು ಎಸ್​​ಐ ಉಮೇಶ್ ಚಂದ್ರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸ್ಟೀಫನ್​ ತನ್ನ ಗನ್​ನಿಂದ ಉಮೇಶ್ ಚಂದ್ರ ಮೇಲೆ ಫೈರ್ ಮಾಡಿದ್ದಾನೆ. ನಂತರ ಅದೇ ಗನ್​ನಿಂದ ಗುಂಡು ಹಾರಿಸಿಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದಿದ್ದಾರೆ.

ಘಟನೆಯಲ್ಲಿ ಎಸ್​​ಐ ಉಮೇಶ್ ಚಂದ್ರ ಸಾವನ್ನಪ್ಪಿದ್ದು, ಹೆಡ್ ಕಾನ್ಸ್ಟೇಬಲ್ ಸ್ಟೀಫನ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

22 ವರ್ಷಗಳ ನಂತರ ಪತ್ತೆಯಾಯ್ತು ನಡೆದಾಡುವ ಮೀನು..! ವಿಡಿಯೋ ವೈರಲ್

Sun Dec 26 , 2021
ಆಸ್ಟ್ರೇಲಿಯಾ : ನಡೆದಾಡುವ ಅಪರೂಪದ ಪಿಂಕ್ ಹ್ಯಾಂಡ್ ಫಿಶ್ 22 ವರ್ಷದ ಬಳಿಕ ಪತ್ತೆಯಾಗಿದೆ. ಟಾಸ್ಮೇನಿಯನ್ ಕರಾವಳಿಯ ಬಳಿ ಆಸ್ಟ್ರೇಲಿಯಾದ ಕಾಮನ್‍ವೆಲ್ತ್ ಸೈಂಟಿಫಿಕ್ ಆಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‍ನ ಸಂಶೋಧಕರ ತಂಡ ಈ ಮೀನು ಪತ್ತೆ ಮಾಡಿದ್ದಾರೆ. ಈ ಅಪರೂಪದ ಮೀನು 1999ರಲ್ಲಿ ಒಮ್ಮೆ ಕಾಣಿಸಿಕೊಂಡಿತ್ತು. ಇದೀಗ ಕಾಣಿಸಿಕೊಂಡಿರುವ ಬಗ್ಗೆ ಸಂಶೋಧಕರ ತಂಡ ತಿಳಿಸಿದೆ. ಸಂಶೋಧಕರ ತಂಡ ಟಾಸೈನ್ ಸಮುದ್ರದ ಒಳಗೆ ಕ್ಯಾಮೆರಾವನ್ನು ಇಟ್ಟಿದ್ದರು. 4 ಸಾವಿರ ಮೀಟರ್ ಅಡಿಯವರೆಗೆ ಕ್ಯಾಮೆರಾವನ್ನು ಇಳಿಬಿಟ್ಟಿದ್ದರು. […]

Advertisement

Wordpress Social Share Plugin powered by Ultimatelysocial