22 ವರ್ಷಗಳ ನಂತರ ಪತ್ತೆಯಾಯ್ತು ನಡೆದಾಡುವ ಮೀನು..! ವಿಡಿಯೋ ವೈರಲ್

ಆಸ್ಟ್ರೇಲಿಯಾ : ನಡೆದಾಡುವ ಅಪರೂಪದ ಪಿಂಕ್ ಹ್ಯಾಂಡ್ ಫಿಶ್ 22 ವರ್ಷದ ಬಳಿಕ ಪತ್ತೆಯಾಗಿದೆ. ಟಾಸ್ಮೇನಿಯನ್ ಕರಾವಳಿಯ ಬಳಿ ಆಸ್ಟ್ರೇಲಿಯಾದ ಕಾಮನ್‍ವೆಲ್ತ್ ಸೈಂಟಿಫಿಕ್ ಆಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‍ನ ಸಂಶೋಧಕರ ತಂಡ ಈ ಮೀನು ಪತ್ತೆ ಮಾಡಿದ್ದಾರೆ.

ಈ ಅಪರೂಪದ ಮೀನು 1999ರಲ್ಲಿ ಒಮ್ಮೆ ಕಾಣಿಸಿಕೊಂಡಿತ್ತು. ಇದೀಗ ಕಾಣಿಸಿಕೊಂಡಿರುವ ಬಗ್ಗೆ ಸಂಶೋಧಕರ ತಂಡ ತಿಳಿಸಿದೆ.

ಸಂಶೋಧಕರ ತಂಡ ಟಾಸೈನ್ ಸಮುದ್ರದ ಒಳಗೆ ಕ್ಯಾಮೆರಾವನ್ನು ಇಟ್ಟಿದ್ದರು. 4 ಸಾವಿರ ಮೀಟರ್ ಅಡಿಯವರೆಗೆ ಕ್ಯಾಮೆರಾವನ್ನು ಇಳಿಬಿಟ್ಟಿದ್ದರು. ಒಂದು ವರ್ಷದ ನಂತರ ಕ್ಯಾಮೆರಾವನ್ನು ಹೊರತೆಗೆದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್ ಫಿಶ್ ನೋಡಿ ಸಂತಸಗೊಂಡಿದ್ದಾರೆ. ಗುಲಾಬಿ ಹ್ಯಾಂಡ್ ಫಿಶ್ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆಂಧ್ರಪ್ರದೇಶದಲ್ಲಿ 2 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲು

Sun Dec 26 , 2021
ಆಂಧ್ರಪ್ರದೇಶದಲ್ಲಿ  2 ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು ಒಟ್ಟು 6 ಕ್ಕೆ ತಲುಪಿದೆ  ಕೋವಿಡ್-19 ನ ‌ ಓಮಿಕ್ರಾನ್ ರೂಪಾಂತರದ ಎರಡು ಹೊಸ ಪ್ರಕರಣಗಳೊಂದಿಗೆ ಆಂಧ್ರಪ್ರದೇಶದಲ್ಲಿ ಈಗ ಆರಕ್ಕೆ ತಲುಪಿದೆ ಆಂಧ್ರಪ್ರದೇಶವು covid 19 ನ ಓಮಿಕ್ರಾನ್ ರೂಪಾಂತರದ ಎರಡು ಹೊಸ ಪ್ರಕರಣಗಳನ್ನು ವರದಿ ಮಾಡಿದೆ, ಇದು ರಾಜ್ಯದಲ್ಲಿ ಆರಕ್ಕೆ ತಲುಪಿದೆ. ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾದಿಂದ ಬಂದ 48 ವರ್ಷದ ಪ್ರಯಾಣಿಕರಿಗೆ ಡಿಸೆಂಬರ್ 20 ರಂದು ಕೋವಿಡ್ […]

Advertisement

Wordpress Social Share Plugin powered by Ultimatelysocial