ಪ್ರಸ್ತುತ ಭಾರತದಲ್ಲಿ ಹಳೆಯ ತೆರಿಗೆ ಪದ್ಧತಿ ಹಾಗೂ ಹೊಸ ತೆರಿಗೆ ಪದ್ಧತಿಯಿದೆ.

ಪ್ರಸ್ತುತ ಭಾರತದಲ್ಲಿ ಹಳೆಯ ತೆರಿಗೆ ಪದ್ಧತಿ ಹಾಗೂ ಹೊಸ ತೆರಿಗೆ ಪದ್ಧತಿಯಿದೆ. ಎರಡರಲ್ಲೂ ಕೂಡಾ ತನ್ನದೇ ಆದ ಪ್ರಯೋಜನ, ಸಮಸ್ಯೆ ಇದೆ. ಆದರೆ ನಾವು ಆಯ್ಕೆ ಮಾಡುವಾಗ ನಮ್ಮ ಆದಾಯಕ್ಕೆ ಯಾವುದು ಉತ್ತಮ ಎಂದು ನೋಡಿಕೊಂಡು ಆಯ್ಕೆ ಮಾಡಿಕೊಳ್ಳಬೇಕು. 2023ರಲ್ಲಿ ಯಾವ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಳ್ಳುವುದು ಉತ್ತಮವೆಂದನಿಸುತ್ತದೆ?

ಏಪ್ರಿಲ್ 1, 2020ರಲ್ಲಿ ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು ಹಿಂದೂ ಅವಿಭಜಿತ ಕುಟುಂಬಗಳಿಗಾಗಿ (HUF) ಜಾರಿ ಮಾಡಿದೆ. ಆದ್ದರಿಂದಾಗಿ ಆದಾಯ ತೆರಿಗೆ ಕಾಯ್ದೆ 1961ಕ್ಕೆ ಸೆಕ್ಷನ್ 115 BAC ಅನ್ನು ಸೇರ್ಪಡೆ ಮಾಡಲಾಗಿದೆ. ಈ ಹೊಸ ತೆರಿಗೆ ಪದ್ಧತಿ ಬಗ್ಗೆ ಎಲ್ಲ ವಿವರಗಳನ್ನು ಈ ಸೆಕ್ಷನ್‌ನಲ್ಲಿ ನೀಡಲಾಗಿದೆ. 2023-24ರಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗಾಗಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಜಾರಿ ಮಾಡಲಾಗಿದೆ. ಇದು ಪೂರ್ವ ನಿಯೋಜಿತ ತೆರಿಗೆ ಪದ್ಧತಿಯಾಗಿದೆ. ತೆರಿಗೆ ಪಾವತಿದಾರರು ತಮಗೆ ಬೇಕಾದ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್ ಮಂಡನೆ ವೇಳೆ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗಕ್ಕೆ ದೊಡ್ಡ ರಿಲೀಫ್ ಅನ್ನು ನೀಡಿದೆ. ಆದಾಯ ತೆರಿಗೆ ಪಾವತಿ ಆದಾಯ ಮಿತಿಯನ್ನು ಏರಿಕೆ ಮಾಡಿದೆ. ಈ ಹಿಂದೆ ಆದಾಯ ತೆರಿಗೆ ಪಾವತಿ ಮಿತಿ 2.5 ಲಕ್ಷ ರೂಪಾಯಿ ಆಗಿದ್ದು, ಅದನ್ನು 3 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇನ್ನು 5 ಲಕ್ಷ ರೂಪಾಯಿಯವರೆಗೆ ಆದಾಯ ಇರುವವರು ಸೆಕ್ಷನ್ 87A ಅಡಿಯಲ್ಲಿ ವಿನಾಯಿತಿ ಪಡೆದು ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿರಲಿಲ್ಲ. ಆ ಮಿತಿಯನ್ನು 7 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಆದರೆ 2023ರಲ್ಲಿ ನಾವು ಯಾವ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವುದು ಉತ್ತಮ?, ಇಲ್ಲಿದೆ ವಿವರ ಮುಂದೆ ಓದಿ…

ಹೊಸ ತೆರಿಗೆ ಪದ್ಧತಿ 2023-24

ವಾರ್ಷಿಕ ಆದಾಯ- ತೆರಿಗೆ ದರ

0-3 ಲಕ್ಷ ರೂಪಾಯಿ: NIL
3-6 ಲಕ್ಷ ರೂಪಾಯಿ: ಶೇಕಡ 5
6-9 ಲಕ್ಷ ರೂಪಾಯಿ: ಶೇಕಡ 10
9-12 ಲಕ್ಷ ರೂಪಾಯಿ: ಶೇಕಡ 15
12-15 ಲಕ್ಷ ರೂಪಾಯಿ: ಶೇಕಡ 20
15 ಲಕ್ಷ ರೂಪಾಯಿಗೂ ಅಧಿಕ: ಶೇಕಡ 30

ಹಳೆ ತೆರಿಗೆ ಪದ್ಧತಿ

ಈ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ನಾವು ಕೆಲವು ತೆರಿಗೆ ವಿನಾಯಿತಿ, ತೆರಿಗೆ ಕಡಿತಗಳನ್ನು ಪಡೆಯಲು ಸಾಧ್ಯವಾಗುತ್ತದೆ. ತೆರಿಗೆದಾರರಿಗೆ ತೆರಿಗೆ ಪಾವತಿ ವಿಧಾನವನ್ನು ಸರಳಗೊಳಿಸುವ ನಡುವೆ ತೆರಿಗೆ ವಿನಾಯಿತಿ, ಕಡಿತವನ್ನು ಮರೆಯಲಾಗುತ್ತಿದೆ. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಯಾವೆಲ್ಲ ತೆರಿಗೆ ವಿನಾಯಿತಿ, ಕಡಿತ ಇಲ್ಲ ಎಂಬುವುದು ಇಲ್ಲಿದೆ ನೋಡಿ.

* ರಜೆಯಲ್ಲಿನ ಪ್ರಯಾಣ ಭತ್ಯೆ (LTA)
* ಗೃಹ ಬಾಡಿಗೆ ಭತ್ಯೆ (HRA)
* ಮಕ್ಕಳ ಶಿಕ್ಷಣ ಭತ್ಯೆ
* ವೇತನದಲ್ಲಿ ಸ್ಟಾಡರ್ಡ್ ಡಿಡಾಕ್ಷನ್
* ವೃತ್ತಿಪರ ತೆರಿಗೆಯಲ್ಲಿ ಕಡಿತ
* ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ

ಚಾಪ್ಟರ್ VI-A ಅಡಿಯಲ್ಲಿ ಕೆಲವು ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಸೆಕ್ಷನ್ 80C ಅಡಿಯಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಗೃಹ ಸಾಲದ ಮೇಲೆ ರಿಫಂಡ್, ಮಕ್ಕಳ ಶಾಲೆಯ ಶುಲ್ಕ, ವಿಮಾ ಪ್ರೀಮಿಯಂ ಮೊದಲಾದವುಗಳುನ್ನು ಪಡೆಯಲು ಸಾಧ್ಯವಾಗುತ್ತದೆ. ಹೊಸ ತೆರಿಗೆ ಪದ್ಧತಿ ಹಾಗೂ ಹಳೆಯ ತೆರಿಗೆ ಪದ್ಧತಿಯನ್ನು ನಾವು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹಳೆ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವುದು ಉತ್ತಮ. ಯಾಕೆಂದರೆ ಹಳೆ ತೆರಿಗೆ ಪದ್ಧತಿಯಲ್ಲಿ ಹಲವಾರು ತೆರಿಗೆ ವಿನಾಯಿತಿ, ತೆರಿಗೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾವುದೇ ಸಮುದಾಯವು ಶಿಕ್ಷಣದಲ್ಲಿ ಹಿಂದುಳಿದರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ

Thu Feb 2 , 2023
ಯಾವುದೇ ಸಮುದಾಯವು ಶಿಕ್ಷಣದಲ್ಲಿ ಹಿಂದುಳಿದರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಸಮಾಜ ಸೇವಕ ಆರ್ ಟಿ ಒ ಅಧಿಕಾರಿ ಮಲ್ಲಿಕಾರ್ಜುನ್ ಅವರು ಅಭಿಪ್ರಾಯಪಟ್ಟರುಅವರು ತಾಲ್ಲೂಕಿನ ಕಸಬಾ ಹೋಬಳಿ ಕಾಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಗ್ರಾಮ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಸಂಘಗಳನ್ನು ಸ್ಥಾಪಿಸುವ ಉದ್ದೇಶವೇನೆಂದರೆ ಸಮುದಾಯಕ್ಕೆ ದಕ್ಕೆ ಉಂಟಾದಾಗ ಸಂಘಗಳು ಅದರ ವಿರುದ್ಧ ಹೋರಾಡಿ ನ್ಯಾಯ ಕೊಡಿಸುವ ಮೂಲಕ ತಮ್ಮ ಸಂಘಕ್ಕೆ ಉತ್ತಮ ಹೆಸರು ಬರುತ್ತದೆ.ಸಮುದಾಯದಲ್ಲಿ […]

Advertisement

Wordpress Social Share Plugin powered by Ultimatelysocial