ಯಾವುದೇ ಸಮುದಾಯವು ಶಿಕ್ಷಣದಲ್ಲಿ ಹಿಂದುಳಿದರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ

ಯಾವುದೇ ಸಮುದಾಯವು ಶಿಕ್ಷಣದಲ್ಲಿ ಹಿಂದುಳಿದರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಸಮಾಜ ಸೇವಕ ಆರ್ ಟಿ ಒ ಅಧಿಕಾರಿ ಮಲ್ಲಿಕಾರ್ಜುನ್ ಅವರು ಅಭಿಪ್ರಾಯಪಟ್ಟರುಅವರು ತಾಲ್ಲೂಕಿನ ಕಸಬಾ ಹೋಬಳಿ ಕಾಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಗ್ರಾಮ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಸಂಘಗಳನ್ನು ಸ್ಥಾಪಿಸುವ ಉದ್ದೇಶವೇನೆಂದರೆ ಸಮುದಾಯಕ್ಕೆ ದಕ್ಕೆ ಉಂಟಾದಾಗ ಸಂಘಗಳು ಅದರ ವಿರುದ್ಧ ಹೋರಾಡಿ ನ್ಯಾಯ ಕೊಡಿಸುವ ಮೂಲಕ ತಮ್ಮ ಸಂಘಕ್ಕೆ ಉತ್ತಮ ಹೆಸರು ಬರುತ್ತದೆ.ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಬೇಕು.ಸಮುದಾಯದಲ್ಲಿ ಸಂಘಟನೆಯನ್ನು ಬಲಪಡಿಸಬೇಕು.ನಂತರ ಹೋರಾಟ ನಡೆಸಿ ಸಮುದಾಯಕ್ಕೆ ಸಂಘವು ಶಕ್ತಿಯಾಗಿ ನಿಲ್ಲಬೇಕು.ಸಹಾಕರ ತತ್ವದ ಅಡಿಯಲ್ಲಿ ಸಂಘಗಳು ಸ್ಥಾಪನೆಯಾಗಬೇಕು.ಸಂಘಗಳು ಉದ್ಭವಿಸುವುದರಿಂದ ಘರ್ಷಣೆಗೆ ಅವಕಾಶವನ್ನು ನೀಡಬಾರದು.ಯಾವುದೇ ಗ್ರಾಮದಲ್ಲಿ ಹಲವಾರು ಸಮುದಾಯಗಳು ಇರುತ್ತವೆ.ಆದ್ದರಿಂದ ಎಲ್ಲಾ ಸಮುದಾಯಗಳು ಸಹಬಾಳ್ವೆಯಿಂದ ಸೌಹಾರ್ದಯುತವಾಗಿ ಹಳ್ಳಿಗಳಲ್ಲಿ ಜೀವನ ನಡೆಸುವಂತೆ ಸಂಘಗಳು ಸಹಕರಿಸಬೇಕು. ಆಗ ಮಾತ್ರ ಸಂಘಕ್ಕೆ ಎಲ್ಲಾ ಜನರಿಂದ ಮೆಚ್ಚುಗೆ ಪಡೆಯಬಹುದು. ಸಂಘದ ಪದಾಧಿಕಾರಿಗಳು ಎಲ್ಲಾ ಸಮುದಾಯವನ್ನು ಗೌರವಿಸುತ್ತಾ ಗ್ರಾಮದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಅದನ್ನು ಸೌಹಾರ್ದಯುತವಾಗಿ‌ ಚರ್ಚಿಸಿ ಬಗೆಹರಿಸಲು ಸಂಘಗಳು ನ್ಯಾಯಯುತವಾಗಿ ನಡೆದುಕೊಳ್ಳಬೇಕೆಂದು ನೂತನವಾಗಿ ರಚಿಸಲಾದ ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಪ್ರದೇಶ ಯುವ ಕುರುಬರ ಸಂಘದ ಸಹ ಕಾರ್ಯದರ್ಶಿ ಯತೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಹೊಸೂರು ನಿಂಗೇಗೌಡ,ತಾಲ್ಲೂಕು ಕಾರ್ಯಾಧ್ಯಕ್ಷ ಚೌಡೇನಹಳ್ಳಿ ರವಿ,ಟೌನ್ ಘಟಕದ ಅಧ್ಯಕ್ಷ ಸತೀಶ್,ಕಾಮನಹಳ್ಳಿ ಘಟಕದ ನೂತನ ಅಧ್ಯಕ್ಷರಾದ ಗಿರೀಗೌಡ,ಉಪಾಧ್ಯಕ್ಷರಾದ ಸತೀಶ್, ದೇವೇಗೌಡ, ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಅಶೋಕ್, ಗ್ರಾ.ಪಂ.ಸದಸ್ಯ ಯಜಮಾನ ಮಂಜುನಾಥ್, ಮಾಜಿ‌ ಸದಸ್ಯ ಅಶೋಕ್, ಸೊಸೈಟಿ ಮಾಜಿ‌ ಅಧ್ಯಕ್ಷ ವರದರಾಜು,ಬಾಣೇಗೌಡ, ಸಂಘಟನಾ ಕಾರ್ಯದರ್ಶಿ ಬೀರೇಶ್,ಉಪಾಧ್ಯಕ್ಷ ರಾಮನಹಳ್ಳಿ ಕುಮಾರ್,ದಿಲೀಪ್, ಯೋಗೇಶ್, ಜವರೇಗೌಡ,ಶಿವರಾಜು ಸೇರಿದಂತೆ ಇತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್ಲಾ ಹಣ್ಣುಗಳು ಪೋಷಕಾಂಶಗಳಿಂದ ತುಂಬಿರುತ್ತವೆ.

Thu Feb 2 , 2023
ಎಲ್ಲಾ ಹಣ್ಣುಗಳು ಪೋಷಕಾಂಶಗಳಿಂದ ತುಂಬಿರುತ್ತವೆ. ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವೊಂದು ಕಾಯಿಲೆಗಳಲ್ಲಿ ಕೆಲವೊಂದು ಹಣ್ಣುಗಳನ್ನು ಸೇವಿಸುವುದು ಸಹಕಾರಿಯಾಗಿರುತ್ತದೆ. ಆದರೆ ಮತ್ತೊಂದೆಡೆ ಕೆಲವೊಂದು ಕಾಯಿಲೆಗಳಲ್ಲಿ ಕೆಲವು ಹಣ್ಣುಗಳ ಸೇವನೆ ಹಾನಿಕಾರಕವಾಗಿ ಕೂಡಾ ಪರಿಣಮಿಸುತ್ತದೆ. ಈ ಪೈಕಿ ಕಪ್ಪು ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಕಪ್ಪು ದ್ರಾಕ್ಷಿಗಳು : ದ್ರಾಕ್ಷಿಗಳು ರುಚಿಯಲ್ಲಿಹುಳಿಯಾಗಿರಬಹುದು. ಆದರೆ ಅವು ಆರೋಗ್ಯಕ್ಕೆ […]

Advertisement

Wordpress Social Share Plugin powered by Ultimatelysocial