ಲಕ್ಷ್ಮಿಗೆ ಸಹಕಾರ ಬ್ಯಾಂಕ್‍ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದು ಯಾರು ಡಿಕೆಶಿಯವರೇ..?

ಬೆಂಗಳೂರು,ಮೇ27- ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ?

ಎಂದು ಬಿಜೆಪಿ ಪ್ರಶ್ನಿಸಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಬೆಳಗಾವಿಯ ಲಕ್ಷ್ಮಿಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್‍ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದು ಯಾರು? ಐಟಿ, ಇಡಿ, ಸಿಬಿಐ ದಾಳಿ ಮಾಡಿದಾಗಲೆಲ್ಲ ಬಿಜೆಪಿ ಮೇಲೆ ಬೊಟ್ಟುಮಾಡುವ ಡಿಕೆಶಿ ಅವರೇ, ಕೆಪಿಸಿಸಿ ಕಚೇರಿಯಲ್ಲೇ ಕಳಿತು ನಿಮ್ಮದೇ ಪಕ್ಷದ ಉಗ್ರಪ್ಪ ಹಾಗೂ ಸಲೀಮ್ ಅವರು ಪಿಸುಮಾತುಗಳನ್ನಾಡಿದ್ದು ಮರೆತಿರಾ? ನ್ಯಾಯಯುತ ಸಂಪಾದನೆ ಮಾಡಿದ್ದರೆ ನಿಮ್ಮ ಮೇಲೆ ಸ್ವಪಕ್ಷೀಯ ನಾಯಕರಿಂದ ಅಪವಾದ ಕೇಳಿ ಬರುತ್ತಿತ್ತೇ? ಎಂದು ವ್ಯಂಗ್ಯವಾಡಿದೆ.

ಕೇಂದ್ರೀಯ ತನಿಖಾ ಸಂಸ್ಥೆಗಳ ತನಿಖೆಯ ಪ್ರತಿ ಹಂತವನ್ನೂ ಬಿಜೆಪಿ ಮೇಲೆ ಹೊರಿಸುವುದೇಕೆ? ನೀವು ಅಕ್ರಮ ಹಣ ಸಂಪಾದಿಸಿದ್ದು ಬಿಜೆಪಿಯನ್ನು ಕೇಳಿಯೇ? ನೀವು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮಾಡಿರುವುದು ಬಿಜೆಪಿ ಒಪ್ಪಿಗೆಯಿಂದಲೇ? ಎಂದು ಪ್ರಶ್ನಿಸಿದೆ.

ಮಾನ್ಯ ಡಿಕೆಶಿ ಅವರೇ, ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಂದ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದು ನೀವೇ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು. ಇಷ್ಟೆಲ್ಲಾ ಇರುವಾಗ ನೀವು ಸತ್ಯವ್ರತನ ಸೋಗು ಹಾಕಿದರೆ ರಾಜ್ಯದ ಜನ ನಂಬುತ್ತಾರೆಯೇ?

ಮಾನ್ಯ ಡಿಕೆಶಿ ಅವರೇ, ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಂದ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದು ನೀವೇ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು. ಇಷ್ಟೆಲ್ಲಾ ಇರುವಾಗ ನೀವು ಸತ್ಯವ್ರತನ ಸೋಗು ಹಾಕಿದರೆ ರಾಜ್ಯದ ಜನ ನಂಬುತ್ತಾರೆಯೇ? ಎಂದು ಬಿಜೆಪಿ ಟೀಕಿಸಿದೆ.

ಕೆಪಿಸಿಸಿ ರಾಜ್ಯ ಅಧ್ಯಕ್ಷರು ಈಗ ಭ್ರಷ್ಟಾಧ್ಯಕ್ಷ ಎಂದೇ ಕುಖ್ಯಾತರಾಗಿದ್ದಾರೆ. ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ತಿಹಾರ್ ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪಕ್ಷದ ಕಚೇರಿಗೆ ಭೇಟಿ ನೀಡುವುದಕ್ಕಿಂತ ಹೆಚ್ಚಾಗಿ ಕೋರ್ಟಿಗೆ ಅಲೆದಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಮತ್ತು ಅವರ ಹಿರಿಮೆ!ನ317 ಬ್ಯಾಂಕ್ ಖಾತೆಗಳು, 200 ಕೋಟಿ ಅಕ್ರಮ ವರ್ಗಾವಣೆ, 800 ಕೋಟಿ ಬೇನಾಮಿ ಆಸ್ತಿ ಇಂತಹ ವ್ಯಕ್ತಿ ತಾಳೆ ಮರದಡಿಯಲ್ಲಿ ಹಾಲು ಕುಡಿಯಲು ಸಾಧ್ಯವೇ?

ಕೆಪಿಸಿಸಿಯ ಬೇನಾಮಿಅಧ್ಯಕ್ಷೆ ಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಡಿ.ಕೆ.ಶಿವಕುಮಾರ್ ಅವರು ಸಚಿವನಾಗಿದ್ದ ಅವಧಿಯಲ್ಲಿ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ? ಬೆಳಗಾವಿಯ ಲಕ್ಷ್ಮಿಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್‍ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದು ಯಾರು? ಭ್ರಷ್ಟಾಧ್ಯಕ್ಷ ಎಂದು ಬಿಜೆಪಿ ಟೀಕಿಸಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಇವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಪಕ್ಷವೇ ಒಂದು ರೀತಿ, ಜಾಮೀನಿನ ಮೇಲೆ ಹೊರಗಿದೆ. ಭ್ರಷ್ಟಾಧ್ಯಕ್ಷರೇ, ಇಷ್ಟೆಲ್ಲಾ ಆದರೂ ಯಾವ ನೈತಿಕತೆಯಿಂದ ಬಿಜೆಪಿ ಮೇಲೆ ಆರೋಪಿಸುತ್ತೀರಿ? ಎಂದು ಬಿಜೆಪಿ ಲೇವಡಿ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2 ಬಾರಿ ಆಸ್ಕರ್ ವಿಜೇತ ಹಾಲಿವುಡ್‌ ನಟನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!

Fri May 27 , 2022
  ವರದಿಗಳ ಪ್ರಕಾರ ಹಾಲಿವುಡ್​ನ ಖ್ಯಾತ ನಟ ಕೆವಿನ್ ಸ್ಪೇಸಿ ವಿರುದ್ಧ ಬ್ರಿಟನ್​ನ ಕ್ರೌನ್ ಪ್ರೊಟೆಕ್ಷನ್ ಸರ್ವಿಸಸ್ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದೆ. ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೆವಿನ್ ಮೇಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ತನಿಖೆ ನಡೆಸಿ ಆರೋಪಗಳನ್ನು ಅಧಿಕೃತಗೊಳಿಸಲಾಗಿದೆ. ರಾಯಿಟರ್ಸ್ ತನ್ನ ವರದಿಯಲ್ಲಿ ತಿಳಿಸಿರುವಂತೆ, ಬುಧವಾರ ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸೇವೆಯು ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ಕು […]

Advertisement

Wordpress Social Share Plugin powered by Ultimatelysocial