ದಳಪತಿ ಸಿನಿಮಾದಲ್ಲಿ ನಟಿಸಲ್ಲ ರಕ್ಷಿತ್‌ ಶೆಟ್ಟಿ:

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ದಳಪತಿ ವಿಜಯ್‌ ಅವರ 67ನೇ ಸಿನಿಮಾದಲ್ಲಿ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ನಟಿಸುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಸದ್ಯ ತಾನು ಈ ಸಿನಿಮಾದಲ್ಲಿ ಇದ್ದೇನೋ ಇಲ್ವೋ ಎನ್ನುವುದನ್ನು ಸ್ವತಃ ರಕ್ಷಿತ್‌ ಶೆಟ್ಟಿ ಅವರೇ ಟ್ವೀಟ್‌ ಮಾಡಿದ್ದಾರೆ.

ʼಕಿರಿಕ್‌ ಪಾರ್ಟಿʼ ನಟ ರಕ್ಷಿತ್‌ ಶೆಟ್ಟಿ ತಮ್ಮ ಮುಂಬರುವ ಸಿನಿಮಾದ ಲೈನ್‌ ಅಪ್‌ ಹಾಗೂ ನಟಿಸಲಿರುವ ಮುಂಬರುವ ಸಿನಿಮಾಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

ಹೇಮಂತ್‌ ರಾವ್‌ ಅವರ ʼಸಪ್ತ ಸಾಗರದಾಚೆ ಎಲ್ಲೊʼ, ರಕ್ಷಿತ್‌ ಶೆಟ್ಟಿಯೇ ನಿರ್ದೇಶನ ಮಾಡಲಿರುವ ʼರಿಚರ್ಡ್ ಆಂಟನಿʼ, ರಕ್ಷಿತ್‌ ಶೆಟ್ಟಿ ಅವರ ಡ್ರೀಮ್‌ ಪ್ರಾಜೆಕ್ಟ್ ʼಪುಣ್ಯಕೋಟಿ ಭಾಗ-1, ಭಾಗ -2, ʼಮೀಡ್‌ ವೇ ಟು ಮೋಕ್ಷʼ ಚಿತ್ರಗಳಿಗಾಗಿ ಶ್ರಮ ಪಡುತ್ತಿದ್ದೇನೆ. ʼಕಿರಿಕ್‌ ಪಾರ್ಟಿ -2ʼ ಸಿನಿಮಾಕ್ಕಾಗಿ ಡಿಫ್ರೆಂಟ್‌ ಆಗಿ ಯೋಜನೆಯನ್ನು ಹಾಕಿಕೊಂಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಓದುವ ಕೆಲ ವಿಚಾರಗಳು ನಿಜವಾಗಿರಲ್ಲ ಎಂದು ಹೇಳಿ ಯಾವುದೇ ಇತರ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವುದನ್ನು ರಕ್ಷಿತ್‌ ಶೆಟ್ಟಿ ಈ ಮೂಲಕ ಸ್ಪಷ್ಟಪಡಿಸಿದ್ದಾರೆ.

ʼ777 ಚಾರ್ಲಿ” ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಕ್ರಾಂತಿಯಲ್ಲಿ ಆಂಟಿಬಯೋಟಿಕ್.

Mon Jan 30 , 2023
ಸಿನಿಮಾ ಶೈಲಿಯಲ್ಲೇ ಕಿರುಚಿತ್ರಗಳೂ ಗುಣಮಟ್ಟದಲ್ಲಿ,  ಅದ್ದೂರಿಯಾಗಿ ನಿರ್ಮಾಣವಾಗುತ್ತಿವೆ. ನೋಡುಗರ ಸಂಖ್ಯೆಯೂ ದ್ವಿಗುಣವಾಗಿದೆ. ಸಿನಿಮಾಗೆ ಕಡಿಮೆ ಇಲ್ಲದೆ “ಆಂಟಿಬಯೋಟಿಕ್” ಕಿರುಚಿತ್ರ   ಸದ್ದು ಮಾಡುತ್ತಿದೆ.  ಸಂಕ್ರಾಂತಿಗೆ  ಬಿಡುಗಡೆಯಾಗಿದ್ದು ಸಾಕಷ್ಟು  ಕಿರುಚಿತ್ರ  ನಿರ್ದೇಶಿಸಿರುವ ದೀಪ್ತಿರಾಜ್  ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೈಕಾಲಾಜಿಕಲ್  ಥ್ರಿಲ್ಲರ್ ಶೈಲಿಯ ಕಥಾಹಂದರವುಳ್ಳ ಕಿರುಚಿತ್ರದಲ್ಲಿ  ವ್ಯವಸ್ಥೆಯ ಬಗ್ಗೆ ಒಬ್ಬ ವ್ಯಕ್ತಿಗೆ ಇರಬಹುದಾದ  ದೃಷ್ಟಿಕೋನ ಹೇಳಲಾಗಿದೆ.  ಹಾಸನ ಮೂಲದ ಚಿದಾನಂದ್ ಹಾಗೂ ಖುಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಉಳಿದ ಪಾತ್ರಗಳಲ್ಲಿ ವೈರಲ್ ಶೇಖರ್, ಸಚಿನ್, […]

Advertisement

Wordpress Social Share Plugin powered by Ultimatelysocial