ಬೇಸಿಗೆ ಆರಂಭವಾಯಿತೆಂದರೆ ಎಲ್ಲರೂ ಹೆಚ್ಚಾಗಿ ಜ್ಯೂಸ್ ಮೊರೆ ಹೊಗುತ್ತಾರೆ.

ಆರೋಗ್ಯದಲ್ಲಿ ಏರುಪೇರಾದರೂ ವೈದ್ಯರು ಜ್ಯೂಸ್ ಬಳಕೆ ಮಾಡಲು ಸಲಹೆ ನೀಡುತ್ತಾರೆ. ಎಲ್ಲ ಜ್ಯೂಸ್ ತರಹ ಕಬ್ಬಿನ ಹಾಲು ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು. ಕಬ್ಬಿನ ಹಾಲಿನಲ್ಲಿ ಐರನ್, ಕ್ಯಾಲ್ಸಿಯಮ್, ಪೊಟಾಶಿಯಂ, ಮ್ಯಾಗ್ನೀಶಿಯಮ್ ಮುಂತಾದ ಗುಣಗಳಿವೆ.ಪ್ರತಿದಿನ ಒಂದು ಲೋಟ ಕಬ್ಬಿನ ಜ್ಯೂಸ್ ಅನ್ನು ಕುಡಿಯುವುದರಿಂದ ಮೂಳೆಗಳು ಬಲಿಷ್ಠವಾಗುತ್ತದೆ ಮತ್ತು ಕಾಮಾಲೆಯಂತಹ ರೋಗ ಕೂಡ ಬಹುಬೇಗ ಗುಣವಾಗುತ್ತದೆ. ಕಬ್ಬಿನ ರಸ ಕುಡಿಯುವುದರಿಂದ ಉಂಟಾಗುವ ಪ್ರಯೋಜನಗಳು ಇಲ್ಲಿವೆ.ತಜ್ಞರ ಪ್ರಕಾರ ಕಾಮಾಲೆ ಖಾಯಿಲೆಯಿಂದ ಬಳಲುತ್ತಿರುವವರು ಕಬ್ಬಿನ ರಸವನ್ನು ಕುಡಿಯುವದರಿಂದ ಕಾಮಾಲೆ ಶೀಘ್ರದಲ್ಲಿ ಗುಣವಾಗುತ್ತದೆ. ಕಬ್ಬಿನಲ್ಲಿ ಐರನ್, ಕ್ಯಾಲ್ಸಿಯಮ್, ಪೊಟಾಶಿಯಂ, ಮ್ಯಾಗ್ನೀಶಿಯಮ್ ಮತ್ತು ಎಂಟಿ ಕ್ಯಾನ್ಸರ್ ಗುಣವಿರುತ್ತದೆ. ಇದರಿಂದ ದೇಹಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಸಿಗುತ್ತದೆ. ಕಬ್ಬಿನ ಜ್ಯೂಸ್ ನಿಂದ ಕ್ಯಾನ್ಸರ್ ನಂತಹ ಗಂಭೀರ ಖಾಯಿಲೆಯಿಂದ ಕೂಡ ಮುಕ್ತಿ ಹೊಂದಬಹುದು.ಕಬ್ಬಿನ ರಸವು ಅತ್ಯಂತ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಅಂಶವನ್ನು ಹೊಂದಿರುವುದರಿಂದ ಮಧುಮೇಹ ರೋಗಿಗಳು ಯಾವುದೇ ಭಯವಿಲ್ಲದೇ ಕಬ್ಬಿನ ರಸವನ್ನು ಸೇವಿಸಬಹುದು. ಪ್ರತಿದಿನ ಕಬ್ಬಿನ ಜ್ಯೂಸ್ ಅನ್ನು ಕುಡಿಯುವದರಿಂದ ಇಮ್ಯುನಿಟಿ ಹೆಚ್ಚುತ್ತದೆ. ಇದರಿಂದ ಶೀತ, ಕೆಮ್ಮು, ಜ್ವರ ಮುಂತಾದ ರೋಗಗಳಿಂದ ದೂರವಿರಬಹುದು.ಕಬ್ಬಿನ ಹಾಲು ಶರೀರದಲ್ಲಿನ ಕೊಬ್ಬಿನ ಅಂಶವನ್ನು ತೆಗೆದುಹಾಕುತ್ತದೆ. ಇದರಿಂದ ಶರೀರದ ತೂಕ ಕಡಿಮೆಯಾಗುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಯ ಸಮಸ್ಯೆಗಳು ಕೂಡ ದೂರವಾಗುತ್ತವೆ. ಮಲಬದ್ಧತೆಯ ಸಮಸ್ಯೆ ಇರುವವರು ಕಬ್ಬಿನ ಜ್ಯೂಸ್ ಕುಡಿಯುವುದು ಒಳ್ಳೆಯದು.ಕಬ್ಬಿನ ಹಾಲು ಆರೋಗ್ಯದ ಜೊತೆ ಸೌಂದರ್ಯವರ್ಧಕವೂ ಆಗಿದೆ. ಕಬ್ಬಿನ ರಸವು ಅಲ್ಪಾ ಹೈಡ್ರಾಕ್ಸಿ ಮತ್ತು ಗ್ಲೈಕೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ರಕ್ತವನ್ನು ಶುದ್ಧಿಮಾಡುವುದರಿಂದ ಚರ್ಮವು ನೈಸರ್ಗಿಕ ಹೊಳಪನ್ನು ಪಡೆಯುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Wed Feb 16 , 2022
‘ಬಪ್ಪಿ ಲಹಿರಿ ಅವರ ಸಂಗೀತವು ಎಲ್ಲವನ್ನೂ ಒಳಗೊಳ್ಳುತ್ತಿದ್ದುದಲ್ಲದೆ, ವೈವಿಧ್ಯಮಯ ಭಾವನೆಗಳನ್ನು ಸುಂದರವಾಗಿ ಪ್ರಕಟಗೊಳಿಸುತ್ತಿತ್ತು. ಅವರ ಸಂಗೀತ ನಿರ್ದೇಶನ, ಗಾಯನವು ತಲೆಮಾರುಗಳನ್ನು ಸೆಳೆದಿತ್ತು. ಅವರ ಲವಲವಿಕೆಯನ್ನು ಎಲ್ಲರೂ ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ನಿಧನದಿಂದ ದುಃಖವಾಗಿದೆ. ಸಂತಾಪಗಳು, ಓಂ ಶಾಂತಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ‘ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನದಿಂದ ಬಹಳ ನೋವಾಗಿದೆ. ಅವರ ನಿಧನದಿಂದ ಭಾರತದ ಸಂಗೀತ ಕ್ಷೇತ್ರದಲ್ಲಿ ದೊಡ್ಡ ನಿರ್ವಾತ ಸೃಷ್ಟಿಯಾಗಿದೆ. ‘ಬಪ್ಪಿ ದಾ’ […]

Advertisement

Wordpress Social Share Plugin powered by Ultimatelysocial