ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

Badava Rascal First Half Review: ಈಗಾಗಲೇ ರಿಲೀಸ್​ ಆಗಿದ್ದ ಟ್ರೇಲರ್​ನಿಂದ ಜನರಿಗೆ ‘ಬಡವ ರಾಸ್ಕಲ್​’ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಹಾಗಾದರೆ ಹೇಗಿದೆ ‘ಬಡವ ರಾಸ್ಕಲ್​’ ಮೊದಲಾರ್ಧ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.ಧನಂಜಯ (Dhananjay) ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar)​ ನಟನೆಯ ‘ಬಡವ ರಾಸ್ಕಲ್​’ (Badava Rascal)ಇಂದು (ಡಿಸೆಂಬರ್​ 24) ತೆರೆಗೆ ಬಂದಿದೆ.

ಕ್ರಿಸ್​ಮಸ್​ ಪ್ರಯುಕ್ತ ಈ ಸಿನಿಮಾ ರಿಲೀಸ್​ ಆಗಿದೆ. ಇದೇ ಮೊದಲ ಬಾರಿಗೆ ಆಟೋ ಡ್ರೈವರ್​ ಆಗಿ ಧನಂಜಯ ಕಾಣಿಸಿಕೊಂಡಿದ್ದಾರೆ. ‘ಟಗರು’, ‘ಪುಷ್ಪ’ ಚಿತ್ರಗಳ ವಿಲನ್​ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದ ಅವರು ಈಗ ಹೀರೋ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈಗಾಗಲೇ ರಿಲೀಸ್​ ಆಗಿದ್ದ ಟ್ರೇಲರ್​ನಿಂದ ಜನರಿಗೆ ‘ಬಡವ ರಾಸ್ಕಲ್​’ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಹಾಗಾದರೆ ಈ ನಿರೀಕ್ಷೆಯನ್ನು ತಲುಪೋಕೆ ಈ ಚಿತ್ರದಿಂದ ಸಾಧ್ಯವಾಯಿತೇ? ಹೇಗಿದೆ ‘ಬಡವ ರಾಸ್ಕಲ್​’ ಮೊದಲಾರ್ಧ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಡಾಲಿ ಧನಂಜಯ ಅವರು ಮಿಡ್ಲ್​ ಕ್ಲಾಸ್​ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಅವರು ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.
  2. ‘ಬಡವ ರಾಸ್ಕಲ್​’ ಮೊದಲಾರ್ಧದಲ್ಲಿ ಫ್ರೆಂಡ್​ಶಿಪ್​ ಕಥೆ ಹೈಲೈಟ್​ ಆಗಿದೆ. ಟ್ರೇಲರ್​ನಲ್ಲಿ ನಿರೀಕ್ಷೆ ಮೂಡಿಸಿದ ರೀತಿಯಲ್ಲೇ ಗೆಳೆತನದ ಕಥೆ ಮೂಡಿಬಂದಿದೆ.
  3. ಪೂರ್ತಿ ಮೊದಲಾರ್ಧದಲ್ಲಿ ಪಂಚಿಂಗ್​ ಡೈಲಾಗ್​ಗಳು ಗಮನ ಸೆಳೆಯುತ್ತವೆ. ಸಂಭಾಷಣೆಗಳು ಪ್ರೇಕ್ಷಕರಿಗೆ ​ಮನರಂಜನೆ ನೀಡುತ್ತವೆ.
  4. ಈ ಸಿನಿಮಾದಲ್ಲಿ ಪೋಷಕ ನಟ ನಾಗಭೂಷಣ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಸಿಕ್ಕಿದೆ. ಬಹುತೇಕ ದೃಶ್ಯಗಳಲ್ಲಿ ಅವರು ಮಿಂಚಿದ್ದಾರೆ.
  5. ರಂಗಾಯಣ ರಘು ಮತ್ತು ತಾರಾ ಅನುರಾಧ ಅವರು ಕಥಾನಾಯಕನ ತಂದೆ-ತಾಯಿ ಆಗಿ ಮನಸೆಳೆಯುವ ಅಭಿನಯ ನೀಡಿದ್ದಾರೆ. ಅವರ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ನಿಖಿಲ್ ಕುಮಾರಸ್ವಾಮಿ ನಟನೆಯ ''ರೈಡರ್''ಸಿನಿಮಾ ರಿಲೀಸ್

Fri Dec 24 , 2021
ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅದ್ಧೂರಿಯಾಗಿ ರೈಡರ್ ಸಿನಿಮಾ ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಅಭಿನಯದ ಸಿನಿಮಾ ಇದಾಗಿದೆ. ಬೆಂಗಳೂರಿನ ಆನಂದರಾವ್ ವೃತ್ತದಿಂದ ಅನುಪಮ ಚಿತ್ರಮಂದಿರಕ್ಕೆ ಮೆರವಣಿಗೆ ಮೂಲಕ ನಿಖಿಲ್ ಹೋಗಲಿದ್ದಾರೆ. ಅಲ್ಲದೇ ಆನಂದ್ ರಾವ್ ವೃತ್ತದಲ್ಲಿರುವ ಭವಹರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಚಿತ್ರಮಂದಿರಕ್ಕೆ ಬರಲಿದ್ದು, ಅನುಪಮ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ನಿಖಿಲ್ ಚಿತ್ರ ನೋಡಲಿದ್ದಾರೆ. ನಂತರ ಮಧ್ಯಾಹ್ನದ ನಂತರ ಬೆಂಗಳೂರಿನ ಚಿತ್ರಮಂದಿರಗಳಿಗೆ […]

Advertisement

Wordpress Social Share Plugin powered by Ultimatelysocial