ʼಸೌಂದರ್ಯʼ ಕೆಡಿಸುವ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್ ಬೈ

 

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ ಬಹು ಮುಖ್ಯ ಕಾರಣವಾಗುತ್ತದೆ. ತಲೆಹೊಟ್ಟಿನ ಕಾರಣ ಕೆಲವೊಮ್ಮೆ ಮುಜುಗರಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ತಲೆಹೊಟ್ಟಿಗೆ ಮನೆಯಲ್ಲಿರುವ ವಸ್ತು ಬಳಸಿ ಮದ್ದು ತಯಾರಿಸಬಹುದು.

ಮೆಂತ್ಯ : ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ಎರಡು ಚಮಚ ಮೆಂತ್ಯೆ ಕಾಳನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಎದ್ದ ನಂತ್ರ ಇದನ್ನು ಮಿಕ್ಸಿ ಮಾಡಿ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿದ್ರೆ ತಲೆಹೊಟ್ಟು ಕಡಿಮೆಯಾಗಲಿದೆ. ವಾರಕ್ಕೆ 2-3 ಬಾರಿ ಈ ಕೆಲಸ ಮಾಡಬೇಕಾಗುತ್ತದೆ.

ಒಳ್ಳೆಯ ಮೊಸರಿನಲ್ಲಿ ತಲೆ ಹೊಟ್ಟು ನಿವಾರಿಸುವ ಶಕ್ತಿ ಇದೆ. ಮೊಸರನ್ನು ತಲೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.

ಬೀಟರೋಟ್ ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿ ಬಿಸಿನೀರಿನಲ್ಲಿ ಬೇಯಿಸಿ. ನಂತ್ರ ಆ ನೀರಿನಿಂದ ತಲೆಯ ಬುಡವನ್ನು ಮಸಾಜ್ ಮಾಡಿ. ರಾತ್ರಿ ತಲೆಗೆ ಮಸಾಜ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಿ. ಪದೇ ಪದೇ ಇದನ್ನು ಬಳಸಿದ್ರೆ ಬೇಗ ತಲೆಹೊಟ್ಟು ಕಡಿಮೆಯಾಗಲಿದೆ.

ಒಂದು ಚಮಚ ಕಡಲೇ ಹಿಟ್ಟಿಗೆ ಮೊಸರು ಸೇರಿಸಿ ಮಿಕ್ಸ್ ಮಾಡಿ. ಅದನ್ನು ತಲೆಗೆ ಹಚ್ಚಿಕೊಂಡು 10 ನಿಮಿಷ ಬಿಡಿ. ನಂತ್ರ ತಲೆ ಸ್ನಾನ ಮಾಡಿ.

ಅಲೋವೇರಾ ಜೆಲ್ ತಲೆಗೆ ಹಚ್ಚಿಕೊಂಡು ಕೆಲ ಸಮಯ ನಂತ್ರ ತಲೆ ಸ್ನಾನ ಮಾಡಿ. ತಲೆ ಹೊಟ್ಟು ಕಡಿಮೆಯಾಗುವ ಜೊತೆಗೆ ಹೊಳಪು ಬರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಂರು ಸುಪ್ರೀಂಕೋರ್ಟ್ ಆದೇಶ ಪಾಲಿಸದಿದ್ದರೆ ಹಿಂದೂ ಸಮಾಜದಿಂದ ಪೂರ್ಣ ಬಹಿಷ್ಕಾರ :

Mon May 9 , 2022
  ಮೈಸೂರು : ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿಚಾರದಲ್ಲಿ ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು. ಇಲ್ಲವಾದರೆ ಹಿಂದೂ ಸಮಾಜದಿಂದ ಪೂರ್ಣ ಬಹಿಷ್ಕಾರ ಹಾಕಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಜಾನ್ ನಿಂದ ವಿದ್ಯಾರ್ಥಿಗಳು, ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಮಸೀದಿ ಮೇಲಿನ ಮೈಕ್ ತೆರವಿಗೆ ನೀಡಿದ್ದ ಗಡುವು ಮುಗಿದಿದೆ. ಗಡುವು ಮುಗಿದರೂ ರಾಜ್ಯ ಸರ್ಕಾರ ಮೈಕ್ ತೆರವುಗೊಳಿಸಿಲ್ಲ. ಅಜಾನ್ ನಿಲ್ಲಿಸಲು ಸರ್ಕಾರ ಯಾವುದೇ […]

Advertisement

Wordpress Social Share Plugin powered by Ultimatelysocial