ಮರಳಿನಲ್ಲಿ ವರ್ಣರಂಜಿತ ಸ್ವಾಮಿ ವಿವೇಕಾನಂದ ಕಲಾಕೃತಿ.

ಧಾರವಾಡ, ಜನವರಿ 23: ವಿಶ್ವ ಸಂತ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ಅರಳಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದೊಡ್ಡನಾಯಕನಕೊಪ್ಪದಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿ ಅದಕ್ಕೆ ಬಣ್ಣ ಕೂಡ ಲೇಪನ ಮಾಡಿದ್ದಾರೆ.

ದೊಡ್ಡನಾಯಕನಕೊಪ್ಪದ ಜನ ಈ ಮರಳು ಕಲಾಕೃತಿಗೆ ಮನಸೋತಿದ್ದು, ತಂಡೋಪಾದಿಯಲ್ಲಿ ಬಂದು ಮರಳಿನಲ್ಲಿ ಮಾಡಿದ ಸ್ವಾಮಿ ವಿವೇಕಾನಂದರ ಕಲಾಕೃತಿ ನಮನ ಸಲ್ಲಿಸಿದ್ದಾರೆ. ಸದ್ಯ ಮರಳಿನಲ್ಲಿ ಅರಳಿ ನಿಂತ ಸ್ವಾಮಿ ವಿವೇಕಾನಂದರ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದ್ದು, ದೊಡ್ಡನಾಯಕನಕೊಪ್ಪದ ಸುತ್ತಮುತ್ತಲಿನ ಜನರು ಈ ಕಲಾಕೃತಿಯನ್ನು ನೋಡಲು ಆಗಮಿಸುತ್ತಿದ್ದಾರೆ.

ವಿಶ್ವ ಸಂತ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹೋಟೆಲ್ ಒಡೆಯರ ಸಂಘದ ವತಿಯಿಂದ ಅವರ ಕುಟುಂಬಸ್ಥರಿಗಾಗಿ ವಿವಿಧ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.

ಹೋಟೆಲ್ ಒಡೆಯರ ಸಂಘದ ಕುಟುಂಬದ ಸದಸ್ಯರಿಗಾಗಿಯೇ ಆಯೋಜನೆಗೊಂಡಿದ್ದ ಈ ಕ್ರೀಡಾಕೂಟದಲ್ಲಿ 100 ಮೀಟರ್ ಓಟ, ರಿಂಗ್ ಎಸೆತ, ಗುಂಡು ಎಸೆತ ಸೇರಿದಂತೆ ಇತ್ಯಾದಿ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. ಈ ಕ್ರೀಡಾಕೂಟದಲ್ಲಿ ಹೋಟೆಲ್ ಒಡೆಯರ ಸಂಘದ ಸದಸ್ಯರು ಉತ್ಸಾಹದಿಂದಲೇ ಪಾಲ್ಗೊಂಡು ಎಲ್ಲರ ಗಮನಸೆಳೆದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಾಲಿವುಡ್ ಜನಪ್ರಿಯ ಯುವ ನಟ 'ಸುಧೀರ್ ವರ್ಮ' ಆತ್ಮಹತ್ಯೆ.

Mon Jan 23 , 2023
ಕೆಎನ್‌ಎನ್ಡಿಜಿಟಲ್ ಡೆಸ್ಕ್ : ಟಾಲಿವುಡ್ ಯುವ ನಟ ಸುಧೀರ್ ವರ್ಮ ವೈಯಕ್ತಿಕ ಸಮಸ್ಯೆಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ. ಈ ಘಟನೆ ಸೋಮವಾರ ವಿಶಾಖಪಟ್ಟಣದಲ್ಲಿ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಂದ್ಹಾಗೆ, 2013ರಲ್ಲಿ ಕಿಶೋರ್ ತಿರುಮಲ ನಿರ್ದೇಶನದ ಸೆಕೆಂಡ್ ಹ್ಯಾಂಡ್ ಸಿನಿಮಾ ಸುಧೀರ್ ವರ್ಮಾಗೆ ನಾಯಕನಾಗಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸಂತೋಷ್ ಎಂಬ ಛಾಯಾಗ್ರಾಹಕನ ಪಾತ್ರವನ್ನ ಸುಧೀರ್ ವರ್ಮಾ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್ಗೆ ಪ್ರವೇಶಿಸಿದರು. ನಂತ್ರ […]

Advertisement

Wordpress Social Share Plugin powered by Ultimatelysocial