20 ವರ್ಷಗಳ ಹಿಂದೆ ತೆರೆ ಕಂಡ ‘ಮೆಜೆಸ್ಟಿಕ್’ ಸಿನಿಮಾದಲ್ಲಿ ನಟಿಸಿದ್ದರು.

ಚಾಲೆಂಜಿಂಗ್ ಸ್ಟಾರ್ ಅವರು ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸರಿಯಾಗಿ ಫೆ.8ರಂದು 20 ವರ್ಷಗಳಾದುವು. ಮೊದ ಲ ಬಾರಿ ನಾಯಕನಾಗಿ ಅವರು 20 ವರ್ಷಗಳ ಹಿಂದೆ ತೆರೆ ಕಂಡ ‘ಮೆಜೆಸ್ಟಿಕ್’ ಸಿನಿಮಾದಲ್ಲಿ ನಟಿಸಿದ್ದರು. ಅದಾಗಿ ಎಷ್ಟೋ ಹಿಟ್ ಸಿನಿಮಾಗಳನ್ನು ನೀಡಿದ್ದರೂ ದರ್ಶನ್ ಅವರಿಗೆ ‘ಮೆಜೆಸ್ಟಿಕ್’ ಸಿನಿಮಾ ತುಂಬಾನೇ ಸ್ಪೆಷಲ್.ಮೊದಲ ಸಿನಿಮಾ ಎನ್ನುವ ಪ್ರೀತಿ ಒಂದೆಡೆ ಯಾದರೆ ಆ ಸಿನಿಮಾದಂತೆ ತಮ್ಮ ಇನ್ನೊಂದು ಸಿನಿಮಾ ಬರದು ಎನ್ನುವುದು ದರ್ಶನ್ ಅಭಿಪ್ರಾಯ. ಚಿತ್ರರಂಗದಲ್ಲಿ ಒಬ್ಬ ನಟನ ಸಿನಿಮಾ ಮತ್ತೆಹಲವಾರು ವರ್ಷಗಳ ಬಳಿಕ ರೀ-ರಿಲೀಸ್ ಆಗಬೇಕು ಎಂದರೆ ಆತ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿರಬೇಕು ಎನ್ನುವ ಮಾತಿದೆ. ಅದರಂತೆ ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ಅಗಲಿದಾಗ ಅವರ ಅದೆಷ್ಟೋ ಸಿನಿಮಾಗಳನ್ನು ಹಲವಾರು ಥಿಯೇ ಟರುಗಳಲ್ಲಿ ಉಚಿತವಾಗಿ ರೀ ರಿಲೀಸ್ ಮಾಡಲಾಗಿತ್ತು. ಅದರಂತೆ ಮೊನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಚಾಲೆಂ ಜಿಂಗ್ ಸ್ಟಾರ್ ದರ್ಶನ್ರವರ ಅಭಿಮಾನಿಗಳ ಒತ್ತಾಯದ ಮೇರೆಗೆ ದಾಸನ ಮೊದಲ ಸಿನಿಮಾ ಮೆಜೆಸ್ಟಿಕ್ ಅನ್ನು ಎಲ್ಲಾ ಥಿಯೇಟರ್ಗಳಲ್ಲಿ ರೀ-ರಿಲೀಸ್ ಮಾಡಲಾಗಿದೆ.ದಾಸ ಮುಟ್ಟಿದ್ದೆಲ್ಲ ಚಿನ್ನ ಎಂಬ ಮಾತಿನಂತೆ ದರ್ಶನ್ ಮಾಡಿದ ಸಿನಿಮಾಗಳೆಲ್ಲಾ ಒಂದರಮೇಲೊಂದರಂತೆ ಹ್ಯಾಟ್ರಿಕ್ ಹೊಡೆದವು ಬಾಕ್ಸಾಫೀಸ್ ನಲ್ಲಿ ದೂಳೆಬ್ಬಿಸಿದವು. ಹೀಗೆ ಮೆಜೆಸ್ಟಿಕ್ ಸಿನಿಮಾದ ಮೂಲಕ ಕೋಟ್ಯಂತರ ಅಭಿಮಾನಿ ಬಳಗವನ್ನು ಸಂಪಾದಿಸಿ ದರ್ಶನ್ ಫೆಬ್ರವರಿ 16ನೇ ತಾರೀಖಿನಂದು ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಂಡರು. ಅದರಂತೆ ಈ ಅಭಿಮಾನಿಗಳಿಗಾಗಿ ದಚ್ಚು ಅಭಿನಯದ ಮೊದಲ ಸಿನಿಮಾ ಮೆಜೆಸ್ಟಿಕ್, ಎಲ್ಲ ಥಿಯೇಟರ್ನಲ್ಲೂ ರಿಲೀಸ್ ಮಾಡಲಾಗಿತ್ತು.ಬರೋಬ್ಬರಿ 20 ವರ್ಷಗಳ ಬಳಿಕ ರೀ-ರಿಲೀಸ್ ಆದ ಸಿನಿಮಾ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಹೌದು ಬರೋಬ್ಬರಿ ಎರಡು ಕೋಟಿಗೂ ಅಧಿಕ ಹಣವನ್ನು ತನ್ನ ಗಲ್ಲಾಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ದರ್ಶನ್ ಮತ್ತೊಮ್ಮೆ ಬಾಕ್ಸಾಫೀಸ್ ಸುಲ್ತಾನ್ ಎಂಬುದನ್ನು ಫ್ರೂ ಮಾಡಿಬಿಟ್ಟಿದ್ದಾರೆ. ಜೊತೆಗೆ ಇದರಿಂದ ಬಂದಂತಹ ಹಣದಲ್ಲಿ ಬಡವರಿಗೆ ಸಹಾಯವಾಗುವಂತಹ ಕೆಲಸವನ್ನು ಮಾಡುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಯುಪಿ ಚುನಾವಣೆ: ಇಟಾವಾದಲ್ಲಿ ಸಮಾಜವಾದಿ ಪಕ್ಷ ಎಲ್ಲಾ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.

Sun Feb 20 , 2022
  ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಆರಂಭವಾಗುತ್ತಿದ್ದಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಅವರು ಇಟಾವಾ ಮತ್ತು ಮಣಿಪುರಿಯ ಕರ್ಹಾಲ್‌ನ ಎಲ್ಲಾ ಮೂರು ಸ್ಥಾನಗಳನ್ನು ಸಮಾಜವಾದಿ ಪಕ್ಷ ಗೆಲ್ಲಲಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯ ಮೂರನೇ ಹಂತದ ಚುನಾವಣೆಯು ಇಟಾವಾ ಮತ್ತು ಮಣಿಪುರಿಯನ್ನು ಒಳಗೊಳ್ಳುತ್ತದೆ, ಇದು 2017 ರವರೆಗೆ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿತ್ತು, ಪಕ್ಷವು ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ […]

Advertisement

Wordpress Social Share Plugin powered by Ultimatelysocial