ಮಗಳನ್ನು ಕೊಂದು ರಾತ್ರೋರಾತ್ರಿ ಸುಟ್ಟು ಹಾಕಿದ ತಂದೆ-ತಾಯಿ

ತಂದೆ ಮತ್ತು ಮಲ ತಾಯಿ ಸೇರಿಕೊಂಡು 17 ವರ್ಷದ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದ ಪುರಿ ಜಿಲ್ಲೆಯ ಗೋಪ್​ ಪ್ರದೇಶದಲ್ಲಿ ನಿನ್ನೆ (ಜ.9) ರಾತ್ರಿ ನಡೆದಿದೆ. ಸಾಕ್ಷಿಯನ್ನು ನಾಶ ಮಾಡಲು ಮಗಳ ಶವವನ್ನು ಸುಟ್ಟು ಹಾಕಿರುವುದಾಗಿ ವರದಿಯಾಗಿದೆ.ಮೃತಳನ್ನು ಸೊನಾಲಿ ಮೊಹರಾಣ ಎಂದು ಗುರುತಿಸಲಾಗಿದೆ. ಹಿರಿಯ ಸಹೋದರಿ ರಂಜಿತಾ ಮೊಹರಾಣ ನೀಡಿದ ದೂರಿನ ಆಧಾರದ ಮೇಲೆ ಗೋಪ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದುರ್ಗಾಚರಣ ಮೊಹರಾಣ ಎಂಬುವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.ವರದಿಗಳ ಪ್ರಕಾರ 2018 ರಲ್ಲಿ ಮೊದಲ ಪತ್ನಿ ಮೃತಪಟ್ಟ ಬಳಿಕ ದುರ್ಗಾಚರಣ್ 2020 ರಲ್ಲಿ ಮಮತಾ ಓಜಾ ಅವರನ್ನು ಎರಡನೇ ವಿವಾಹವಾದರು. ಮೃತ ಸೊನಾಲಿ ಮೊದಲ ಪತ್ನಿಯ ಮಗಳು. ಎರಡನೇ ಮದುವೆಯ ಬಳಿಕ ಆಕೆಯ ತಂದೆ, ಮಲತಾಯಿ ಮತ್ತು ಆಕೆಯ ಸಹೋದರ ಜೀವನ್ ಓಜಾ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಸಹೋದರಿ ರಂಜಿತಾ ಆರೋಪಿಸಿದ್ದಾರೆ.ಸೋನಾಲಿ ಸಾವಿನ ಬಗ್ಗೆ ಮಾಹಿತಿ ಪಡೆದ ರಂಜಿತಾ, ಗೋಪ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ತನ್ನ ತಂಗಿಯನ್ನು ಕೊಲ್ಲುವಲ್ಲಿ ದುರ್ಗಾಚರಣ್, ಮಮತಾ ಮತ್ತು ಜೀವನ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಕಳೆದ ರಾತ್ರಿಯೇ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲು ಗ್ರಾಮದ ಸ್ಮಶಾಣದಲ್ಲಿ ಮೃತದೇಹವನ್ನು ಸುಟ್ಟು, ಚಿತಾಭಸ್ಮವನ್ನು ಬಚ್ಚಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 172 ಹೊಸ ಪ್ರಕರಣಗಳು ಪತ್ತೆ,

Tue Jan 10 , 2023
ಭಾರತದಲ್ಲಿ ಕೊರೋನಾ ಇಳಿಕೆ ಪ್ರಕರಣ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 172 ಹೊಸ ಪ್ರಕರಣ ಪತ್ತೆಯಾಗಿದೆ. ನವದೆಹಲಿ: ಭಾರತದಲ್ಲಿ ಕೊರೋನಾ ಇಳಿಕೆ ಪ್ರಕರಣ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 172 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,80,266ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,722ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,319ಕ್ಕೆ […]

Advertisement

Wordpress Social Share Plugin powered by Ultimatelysocial