“ಬುದ್ದ” ನಾಗಿ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು.

“ಬುದ್ದ” ನಾಗಿ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು.  ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಗಿದೆ ಚಿತ್ರದ ಫಸ್ಟ್ ಲುಕ್

ವತ೯ನ್ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ನಿರ್ಮಿಸುತ್ತಿರುವ, ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮಹೇಶ್ ಬಾಬು ಹಾಗೂ ವಿದ್ಯಾರಾಜ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ “ಬುದ್ದ” ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್ ಲುಕ್ ಕನ್ನಡ ಜನತೆಯ ಮೆಚ್ಚುಗೆಯನ್ನು ಗಳಿಸಿದೆ .

ಎಂಜಿನಿಯರಿಂಗ್ ವ್ಯಾಸಂಗ ಮಾಡಿ, ಅಭಿನಯದ ಬಗ್ಗೆ ತರಭೇತಿ ಪಡೆದಿರುವ ಮಹೇಶ್ ಬಾಬು ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಜನೆಯಿದೆ. “ಬುದ್ದ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಎಲ್ಲಾ ಚಿತ್ರದಲ್ಲಿ ಕಳೆದು ಹೋದವರನ್ನು ನಾಯಕ ಹುಡುಕಿ ಕೊಡುತ್ತಾನೆ. ಈ ಚಿತ್ರದ ಕಥೆಯಲ್ಲಿ ನಾಯಕನೆ ಕಳೆದು ಹೋಗುತ್ತಾನೆ. ಮುಂದೇನು? ಎಂಬುದೆ ಕುತೂಹಲ.
ಎಂದು ಚಿತ್ರದ ಕಥೆಯ ತಿರುಳನ್ನು ಹೇಳಿರುವ ನಾಯಕ ಮಹೇಶ್ ಬಾಬು, ಇದೊಂದು ಕೌಟುಂಬಿಕ ಚಿತ್ರ ಎನ್ನುತ್ತಾರೆ.

ಚಿತದಲ್ಲಿ ಐದು ಹಾಡುಗಳಿದೆ. ಒಂದು ಹಾಡನ್ನು ಡಾ||ವಿ.ನಾಗೇಂದ್ರ ಪ್ರಸಾದ್, ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆಯತ್ತಿದ್ದಾರೆ.
ರಾಘವೇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗ ಶೆಟ್ಟಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಮಹೇಶ್ ಬಾಬು, ವಿದ್ಯಾರಾಜ್, ರಾಮಕೃಷ್ಣ (ತಮಿಳು), ತಬಲನಾಣಿ, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರು ಈ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಸಹ ಎರಡನೇ ಹಂತದಲ್ಲಿ ನಟಿಸುವ ಸಾಧ್ಯತೆಯಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮೇನಹಳ್ಳಿ ಜಗನ್ನಾಥ್ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರಶಂಸೆ- ಬದುಕಿಗೆ ಆಪ್ತವೆನಿಸುವ ‘ಹೊಂದಿಸಿ ಬರೆಯಿರಿ’ ಎಲ್ಲೆಡೆ ಹೌಸ್ ಫುಲ್

Tue Feb 14 , 2023
ರಾಮೇನಹಳ್ಳಿ ಜಗನ್ನಾಥ್ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರಶಂಸೆ- ಬದುಕಿಗೆ ಆಪ್ತವೆನಿಸುವ ‘ಹೊಂದಿಸಿ ಬರೆಯಿರಿ’ ಎಲ್ಲೆಡೆ ಹೌಸ್ ಫುಲ್ ಬದುಕಿನ ವಾಸ್ತವತೆ, ಬದುಕನ್ನು ಸ್ವೀಕರಿಸುವ ರೀತಿ, ಸಂಬಂಧಗಳ ಬೆಲೆ, ಗುರಿ, ಉದ್ದೇಶ, ಬದುಕಿನ ಹೊಂದಾಣಿಕೆಯ ಸುತ್ತ ಕಾಡುವ ಕಥೆಗಳ ಪೋಣಿಸಿ ‘ಹೊಂದಿಸಿ ಬರೆಯಿರಿ’ ಸಿನಿಮಾ ಪ್ರೇಕ್ಷಕರೆದುರು ಬಂದಿದೆ. ಸಿನಿಮಾ ತಂಡ ಚಿತ್ರದ ತುಣುಕು, ಮೂಲಕ ಹಾಡುಗಳ ಮೂಲಕ ಭರವಸೆ ಹುಟ್ಟಿಸಿದಂತೆ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ‘ಹೊಂದಿಸಿ ಬರೆಯಿರಿ’ ಮೂಲಕ ರಾಮೇನಹಳ್ಳಿ […]

Advertisement

Wordpress Social Share Plugin powered by Ultimatelysocial