ರಾಮೇನಹಳ್ಳಿ ಜಗನ್ನಾಥ್ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರಶಂಸೆ- ಬದುಕಿಗೆ ಆಪ್ತವೆನಿಸುವ ‘ಹೊಂದಿಸಿ ಬರೆಯಿರಿ’ ಎಲ್ಲೆಡೆ ಹೌಸ್ ಫುಲ್

ರಾಮೇನಹಳ್ಳಿ ಜಗನ್ನಾಥ್ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರಶಂಸೆ- ಬದುಕಿಗೆ ಆಪ್ತವೆನಿಸುವ ‘ಹೊಂದಿಸಿ ಬರೆಯಿರಿ’ ಎಲ್ಲೆಡೆ ಹೌಸ್ ಫುಲ್

ಬದುಕಿನ ವಾಸ್ತವತೆ, ಬದುಕನ್ನು ಸ್ವೀಕರಿಸುವ ರೀತಿ, ಸಂಬಂಧಗಳ ಬೆಲೆ, ಗುರಿ, ಉದ್ದೇಶ, ಬದುಕಿನ ಹೊಂದಾಣಿಕೆಯ ಸುತ್ತ ಕಾಡುವ ಕಥೆಗಳ ಪೋಣಿಸಿ ‘ಹೊಂದಿಸಿ ಬರೆಯಿರಿ’ ಸಿನಿಮಾ ಪ್ರೇಕ್ಷಕರೆದುರು ಬಂದಿದೆ. ಸಿನಿಮಾ ತಂಡ ಚಿತ್ರದ ತುಣುಕು, ಮೂಲಕ ಹಾಡುಗಳ ಮೂಲಕ ಭರವಸೆ ಹುಟ್ಟಿಸಿದಂತೆ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.

‘ಹೊಂದಿಸಿ ಬರೆಯಿರಿ’ ಮೂಲಕ ರಾಮೇನಹಳ್ಳಿ ಜಗನ್ನಾಥ್ ತಮ್ಮ ಚೊಚ್ಚಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಕಾಲೇಜು ಹಂತದ ಸ್ನೇಹಿತರ ಬದುಕಿನಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ಬದುಕಿನ ಪಾಠ ಹೇಳಿದ್ದಾರೆ. ಭಾವನೆಗಳ ಜರ್ನಿ ಜೊತೆಗೆ ಒಂದಿಷ್ಟು ಪ್ರೀತಿ, ಸ್ನೇಹ, ತ್ಯಾಗ, ಹರಟೆ ಎಲ್ಲವೂ ಚಿತ್ರದಲ್ಲಿದೆ. ತೆರೆ ಮೇಲೆ ಸಿನಿಮಾ ನೋಡಿದವರ ಮನದಲ್ಲಿ ಹೌದಲ್ಲವಾ ಎಂಬ ಭಾವ ಮೂಡಿಸಿ ಹೊಸ ಅನುಭವ ನೀಡುವ ಹೊಂದಿಸಿ ಬರೆಯಿರಿ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ ಸಿಕ್ಕಿದೆ. ಸಿನಿಮಾವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಪ್ರೇಮಿಗಳ ದಿನಕ್ಕೆ ಒಂದು ಅರ್ಥಪೂರ್ಣ ಸಿನಿಮಾ ಈ ಚಿತ್ರ ಎಂದರೆ ತಪ್ಪಾಗೋದಿಲ್ಲ.

ಕಲರ್ ಫುಲ್ ತಾರಾಗಣ ಹೊಂದಿಸಿ ಬರೆಯಿರಿ ಚಿತ್ರದ ಮೈನ್ ಅಟ್ರ್ಯಾಕ್ಷನ್. ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ ಮಹಾದೇವ್ ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ ಎಲ್ಲರೂ ತಮ್ಮ ಪಾತ್ರಗಳ ಮೂಲಕ ಕಾಡುತ್ತಾರೆ. ಹಾಡು, ಸಂಗೀತ, ಕಾಡುವ ಕಥೆ, ಸಿನಿಮಾ ಬಗ್ಗೆ ಕೇಳಿ ಬರ್ತಿರುವ ಉತ್ತಮ ವಿಮರ್ಶೆ ಎಲ್ಲವೂ ಸಿನಿಮಾದ ಮೇಲೆ ದಿನದಿಂದ ದಿನಕ್ಕೆ ಹೆಚ್ಚು ಪ್ರೇಕ್ಷಕರು ಮನ ಸೋಲುವಂತೆ ಮಾಡಿದೆ.

ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೋ ಕೋಸ್ಟ ಸಂಗೀತ ನಿರ್ದೇಶನ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಾಣಕ್ಯ ಪ್ರಕಾರ ಈ ಗುಣಗಳಿರುವ ವ್ಯಕ್ತಿ.

Tue Feb 14 , 2023
ಪ್ರತಿಯೊಬ್ಬರಿಗೂ ಸಮಾಜದಲ್ಲಿ ಉನ್ನತ ಅಥವಾ ಗೌರವಯುವ ಸ್ಥಾನಕ್ಕೆ ತಲುಪಬೇಕೆಂದು ಖಂಡಿತ ಆಸೆ ಇರುತ್ತದೆ. ಆದ್ರೆ ಎಲ್ಲರಿಂದಲೂ ಇದು ಸಾಧ್ಯವಾಗುವುದಿಲ್ಲ. ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಅದೃಷ್ಟಶಾಲಿಗಳಾಗಿರ್ತಾರೆ ಅಂತವರಿಗೆ ಮಾತ್ರ ಗೌರವಯುತ ಸ್ಥಾನ ಒಲಿಯುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದ್ರೆ ಇದು ನಿಜವಲ್ಲ. ಒರ್ವ ಸಾಮಾನ್ಯ ವ್ಯಕ್ತಿಯು ಕೂಡ ಸಮಾಜದಲ್ಲಿ ಉನ್ನತ ಸ್ಥಾನ ತಲುಪಬಹುದು. ಆಚಾರ್ಯ ಚಾಣಕ್ಯರು ಇದಕ್ಕಾಗಿ ಕೆಲವೊಂದು ಸೂತ್ರಗಳನ್ನು ಹೇಳಿದ್ದಾರೆ. ಇದನ್ನು ಪಾಲಿಸಿದ್ರೆ ನೀವು ಕೂಡ ಸಮಾಜದಲ್ಲಿ […]

Advertisement

Wordpress Social Share Plugin powered by Ultimatelysocial