ಬೈಕ್‌ಗಳ ಮುಖಾಮುಖಿ ಡಿಕ್ಕಿ.

 

ವಿಜಯಪುರ: ಅಲ್ಲಿ ನಡೆದಿದ್ದು ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ. ಅಷ್ಟೇ ಆಗಿದ್ದರೆ ಪ್ರಾಣ ಹಾನಿ ಸಂಭವಿಸುತ್ತಿರಲಿಲ್ಲವೇನೋ.. ಆದರೆ, ಅಪಘಾತದ (Road accident) ವೇಳೆ ಬೈಕ್‌ನಿಂದ ಎಗರಿಬಿದ್ದ ಯವಕ ಪಕ್ಕದಲ್ಲೇ ಸಾಗುತ್ತಿದ್ದ ಲಾರಿಯ ಚಕ್ರದ ಅಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಘಟನೆ ನಡೆದಿರುವುದು ವಿಜಯಪುರ ನಗರದ ಮಾರುತಿ ಕಾಲೋನಿಯಲ್ಲಿ. ವಿಠಲ್ ದುಂಡಪ್ಪ ಉಕ್ಕಲಿ ಮೃತಪಟ್ಟಿರುವ ದುರ್ದೈವಿ. ವಿಠಲ್‌ ದುಂಡಪ್ಪ ಉಕ್ಕಲಿ ಅವರು ರಸ್ತೆಯ ಒಂದು ಬದಿಯಲ್ಲಿ ಸಾಗುತ್ತಿದ್ದರು. ಆಗ ಎದುರು ಭಾಗದಿಂದ ಒಂದು ಬೈಕ್‌ ಬಂತು. ಎರಡೂ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡವು. ಆಗ ವಿಠಲ್‌ ದುಂಡಪ್ಪ ಅವರು ಹಾರಿಬಿದ್ದರು. ಅಷ್ಟು ಹೊತ್ತಿಗೆ ಹಿಂಬದಿಯಿಂದ ಬಂದ ಒಂದು ಲಾರಿಯ ಚಕ್ರದ ಅಡಿಗೆ ಬಿದ್ದು ಪ್ರಾಣ ಕಳೆದುಕೊಂಡರು.

ಅಪಘಾತದ ಈ ದೃಶ್ಯ ಪಕ್ಕದ ಅಂಗಡಿಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಮಹಿಳೆ ಶವಪತ್ತೆ
ವಿಜಯಪುರ ನಗರದ ಆರ್‌ಟಿಓ ಕಚೇರಿ ಬಳಿ ಸುಮಾರು 45-50 ವಯಸ್ಸಿನ ಮಹಿಳೆ ಶವ ಪತ್ತೆಯಾಗಿದೆ. ಇವರು ಯಾರು, ಇದು ಕೊಲೆಯೋ ಅಥವಾ ಸಹಜ ಸಾವೋ ಎನ್ನುವುದು ಪೊಲೀಸ್‌ ತನಿಖೆ ಬಳಿಕ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Fabulous Asian Young girls

Tue Jan 17 , 2023
Beautiful Asian Girls Girls from Asia have long history of simply being the object of ardent desire by Western men. It is because they have a exceptional beauty that sets them apart from other counterparts. A whole lot of gorgeous Cookware ladies have made their way to the spot light, […]

Advertisement

Wordpress Social Share Plugin powered by Ultimatelysocial