ಆರೋಗ್ಯಕ್ಕೆ ಉತ್ತಮ ʼಕ್ಯಾಪ್ಸಿಕಂʼ

ಕ್ಯಾಪ್ಸಿಕಂನಿಂದ ಬೋಂಡಾ, ಕರಿ ತಯಾರಿಸಬಹುದು ಎಂದು ಸರಳವಾಗಿ ಹೇಳುತ್ತೇವೆ. ಆದರೆ ಅದರಿಂದ ದೇಹದ ಮೇಲಾಗುವ, ಆರೋಗ್ಯದ ಪ್ರಯೋಜನಗಳ ಬಗ್ಗೆ ನಮಗೆ ತಿಳಿದಿಲ್ಲ.ಹೃದಯದ ಆರೋಗ್ಯಕ್ಕೆ ಅಗತ್ಯವಿರುವ ಲೈಕೋಪಿನ್ ಎಂಬ ಹೋರಾಡುವ ಗುಣವುಳ್ಳ ಪೋಷಕಾಂಶ ಕ್ಯಾಪ್ಸಿಕಮ್ನಲ್ಲಿದೆ.ವಿಟಮಿನ್ ಬಿ6 ಇದರಲ್ಲಿದ್ದು, ದೇಹದಲ್ಲಿರುವ ಹೋಮೋಸಿಸ್ಟೈನ್ ಮಟ್ಟವನ್ನು ತಗ್ಗಿಸುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ.ತೂಕ ಇಳಿಸುವವರ ಪಟ್ಟಿಯಲ್ಲಿ ನೀವಿದ್ದರೆ ಕ್ಯಾಪ್ಸಿಕಮ್ ಸೇವಿಸಿ. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ.ನೋವು ನಿವಾರಕವಾಗಿಯೂ ಕೆಲಸ ಮಾಡುವ ಇದು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದರಲ್ಲಿ ದಿನದ ಆವಶ್ಯಕತೆಗೆ ಬೇಕಾಗಿರುವುದಕ್ಕಿಂತಲೂ 3 ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್ ಸಿ ಇದೆ. ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯನ್ನೂ ಕೆಂಪು ಕ್ಯಾಪ್ಸಿಕಮ್ ನಿವಾರಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ

Fri Feb 25 , 2022
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಶುಕ್ರವಾರ ಉಕ್ರೇನ್ ಮಿಲಿಟರಿ ಶರಣಾದರೆ ಮಾಸ್ಕೋ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿದರು, ಆಕ್ರಮಣಕಾರಿ ಪಡೆಗಳು ದೇಶವನ್ನು “ದಬ್ಬಾಳಿಕೆಯಿಂದ” ಮುಕ್ತಗೊಳಿಸಲು ನೋಡುತ್ತಿವೆ ಎಂದು ಅವರು ಒತ್ತಾಯಿಸಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ “ಉಕ್ರೇನ್ ಅನ್ನು ಸಶಸ್ತ್ರೀಕರಣಗೊಳಿಸಲು ಮತ್ತು ಡಿ-ನಾಜಿಫೈ ಮಾಡಲು ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿದರು, ಇದರಿಂದಾಗಿ ದಬ್ಬಾಳಿಕೆಯಿಂದ ಮುಕ್ತರಾದ ಉಕ್ರೇನಿಯನ್ನರು ತಮ್ಮ ಭವಿಷ್ಯವನ್ನು ಮುಕ್ತವಾಗಿ ನಿರ್ಧರಿಸಬಹುದು” ಎಂದು ಮಾಸ್ಕೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಲಾವ್ರೊವ್ […]

Advertisement

Wordpress Social Share Plugin powered by Ultimatelysocial