ಬಿಬಿಸಿ ನ್ಯೂಸ್ ನಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಇವರ ಬಗ್ಗೆ ಮುಸಲ್ಮಾನರಿಂದ ದ್ವೇಷಪೂರಿತ ಸರಣಿ.

ನವದೆಹಲಿ – ಬ್ರಿಟನ್ನಿನ ಸಂಸದ ಲಾರ್ಡ್ ರಾಮಿ ರೇಂಜರ್ ಇವರು ಗುಜರಾತನ ೨೦೦೨ ರಲ್ಲಿ ನಡೆದ ಗಲಭೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಇವರ ವಿರುದ್ಧ ನಿರ್ಮಿಸಿದ ಸರಣಿಯ ಕುರಿತು ‘ಬಿಬಿಸಿ ನ್ಯೂಸ್’ ಈ ವಾರ್ತಾ ವಾಹಿನಿಯನ್ನು ಕಟುವಾಗಿ ಟೀಕಿಸಿದ್ದಾರೆ. ಸಂಸದ ರಾಮಿ ಇವರು, ‘ಬಿಬಿಸಿ ನ್ಯೂಸ್’ ಭಾರತದ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ ತಂದಿದೆ ಮತ್ತು ಪ್ರಜಾಪ್ರಭುತ್ವದ ಪದ್ಧತಿಯಿಂದ ಆಯ್ಕೆಯಾಗಿರುವ ಭಾರತದ ಪ್ರಧಾನಿ ಹಾಗೂ ಭಾರತೀಯ ಪೋಲಿಸ್, ನ್ಯಾಯಾಂಗ ಇವುಗಳ ಬಗ್ಗೆ ಅಪಕೀರ್ತಿ ಮಾಡಿದೆ. ನಾವು ಈ ದಂಗೆಯಲ್ಲಿ ಜನರ ಹತ್ಯೆ ಮಾಡಿದವರನ್ನು ನಿಂದಿಸುತ್ತೇವೆ, ಆದರೆ ನೀವು ಪಕ್ಷಪಾತದಿಂದ ಪ್ರಸಾರ ಮಾದುತ್ತಿರುವ ಪತ್ರಿಕೋದ್ಯಮದ ನಿಂದನೆ ಕೂಡ ಮಾಡುತ್ತೇವೆ.

‘ಬಿಬಿಸಿ ನ್ಯೂಸ್’ ‘ಇಂಡಿಯಾ : ದ ಮೋದಿ ಕ್ವೆಶ್ಚನ್’ ಈ ಶೀರ್ಷಿಕೆಯ ಅಡಿಯಲ್ಲಿ ಎರಡು ಭಾಗದಲ್ಲಿ ಸರಣಿಯನ್ನು ನಿರ್ಮಿಸಿದೆ. ಇದರಲ್ಲಿ ಪ್ರಧಾನಿ ಮೋದಿ ಮತ್ತು ಭಾರತದಲ್ಲಿನ ಮುಸಲ್ಮಾನ್ ಇವರಲ್ಲಿನ ಒತ್ತಡದ ಬಗ್ಗೆ ಹೇಳಲಾಗಿದೆ. ಹಾಗೂ ಗುಜರಾತನಲ್ಲಿ ೨೦೦೨ ರ ದಂಗೆಯಲ್ಲಿ ಪ್ರಧಾನಿ ಮೋದಿ ಇವರ ತಥಾ ಕಥಿತ ಪಾತ್ರ ಮತ್ತು ದಂಗೆಯಲ್ಲಿ ಹತರಾಗಿರುವ ನೂರಾರು ಜನರ ಬಗ್ಗೆ ಆರೋಪಿಸಲಾಗಿದೆ. ಹಾಗೂ ಮೋದಿ ಸರಕಾರವು ದೇಶದ ಮುಸಲ್ಮಾನರ ಜನಸಂಖ್ಯೆಯ ಕುರಿತು ಪಾತ್ರ, ತಥಾ ಕಥಿತ ವಿವಾದಿತ ನೀತಿ, ಕಾಶ್ಮೀರಕ್ಕೆ ಸಿಕ್ಕಿರುವ ವಿಶೇಷ ಅಧಿಕಾರ ರದ್ದುಪಡಿಸುವುದು ಮತ್ತು ಸಮಾನ ನಾಗರಿಕ ಕಾನೂನು ಈ ರೀತಿಯ ಪ್ರಶ್ನೆ ಕೇಳಲಾಗಿದೆ. ದೇಶದಲ್ಲಿ ಮುಸಲ್ಮಾನರ ಮೇಲೆ ಹಿಂದೂಗಳಿಂದ ದಾಳಿ ನಡೆಯುತ್ತದೆ, ಎಂದು ಸಹ ಹೇಳಲಾಗಿದೆ. ಭಾರತೀಯರನ್ನು ಕೂಡ ಟೀಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ‘ಬಿಬಿಸಿ ನ್ಯೂಸ್’ ಬಗ್ಗೆ ಟೀಕೆ

‘ಬಿಬಿಸಿ ನ್ಯೂಸ್’ ೧೯೪೩ರ ಬಂಗಾಲದಲ್ಲಿನ ಬರಗಾಲದ ಕ್ಷಾಮದ ಸರಣಿಯನ್ನು ನಿರ್ಮಿಸಬೇಕು !

ಪ್ರಧಾನಿ ಮೋದಿ ಅವರ ಕುರಿತು ತಯಾರಿಸಿರುವ ಸರಣಿಯಿಂದ ಸಾಮಾಜಿಕ ಜಾಲತಾಣದಲ್ಲಿ ‘ಬಿಬಿಸಿ ನ್ಯೂಸ್’ ಅನ್ನು ಟೀಕಿಸಲಾಗುತ್ತಿದೆ. ಕೆಲವು ಜನರು, ‘೧೯೪೩’ ರಲ್ಲಿ ಬಂಗಾಲದಲ್ಲಿ ತಲೆದೋರಿರುವ ಕ್ಷಾಮದಿಂದ ೩೦ ಲಕ್ಷ ಜನರು ಹಸಿವಿನಿಂದ ಸಾವನ್ನಪ್ಪಿದ್ದಾರೆ. ಬಿಬಿಸಿಯು ಈ ಬಗ್ಗೆ ಸರಣಿ ನಿರ್ಮಿಸಬೇಕು.’ ಬ್ರಿಟನಿನ ಅಂದಿನ ಪ್ರಧಾನಿ ವಿಸ್ಟನ್ ಚರ್ಚಿಲ್ ಇವರು ಎರಡನೇ ಮಹಾಯುದ್ಧದಲ್ಲಿನ ಸೈನಿಕರಿಗಾಗಿ ಭಾರತದಿಂದ ಆಹಾರ ಪದಾರ್ಥ ಕೊಂಡೊಯ್ದಿರುವುದರಿಂದ ಬಂಗಾಲದಲ್ಲಿನ ಜನರು ಹಸಿವಿಗೆ ಬಲಿಯಾಗಿದ್ದರು ಎಂದು ಹೇಳಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಮಸೇತುಗೆ 'ರಾಷ್ಟ್ರೀಯ ಸ್ಮಾರಕ' ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ.

Fri Jan 20 , 2023
  ನವ ದೆಹಲಿ – ರಾಮಸೇತುಗೆ ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತದೆ, ಎಂದು ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಪ್ರಸ್ತುತಪಡಿಸಿದೆ. ಭಾಜಪದ ನಾಯಕ ಡಾ. ಸುಬ್ರಹ್ಮಣ್ಯಮ ಸ್ವಾಮಿ ಇವರ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ‘ಸರಕಾರಕ್ಕೆ ರಾಮಸೇತುಗೆ ಸಂಬಂಧಪಟ್ಟ ಹೆಚ್ಚುವರಿ ಸಾಕ್ಷಿ ನೀಡಬೇಕು’, ಎಂದು ಆದೇಶ ನೀಡಿದೆ. ಡಾ. ಸುಬ್ರಹ್ಮಣ್ಯಮ ಸ್ವಾಮಿ ಇವರು, ೨೦೧೭ ರಲ್ಲಿ ಸಂಬಂಧಿತ ಕೇಂದ್ರ ಸಚಿವರು ಇದರ […]

Advertisement

Wordpress Social Share Plugin powered by Ultimatelysocial