ಬಿಡುಗಡೆಗೂ ಮುನ್ನ ಡೀಲರ್ ಬಳಿ ತಲುಪಿದ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್!

ಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯಂತ ಜನಪ್ರಿಯ ಸಿಟಿ ಸೆಡಾನ್ ಕಾರಿಗೆ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಈ ಹೊಸ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮುನ್ನ ಈ ಫೇಸ್‌ಲಿಫ್ಟೆಡ್ ಹೋಂಡಾ ಸಿಟಿ ಕಾರು ಅಧಿಕೃತ ಹೋಂಡಾ ಅಧಿಕೃತ ಡೀಲರ್ ಔಟ್‌ಲೆಟ್‌ಗಳಲ್ಲಿ ಕಾಣಿಸಿಕೊಂಡಿದೆ, ಇದು ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನ ಟಾಪ್-ಸ್ಪೆಕ್ ರೂಪಾಂತರವಾಗಿದೆ. ಚಿತ್ರಗಳಲ್ಲಿ, ನಾವು ಹೊಸ ಅಬ್ಸಿಡಿಯನ್ ಬ್ಲೂ ಪೇಂಟ್ ಶೇಡ್‌ನಲ್ಲಿ ಫೇಸ್‌ಲಿಫ್ಟೆಡ್ ಹೋಂಡಾ ಸಿಟಿಯನ್ನು ನೋಡಬಹುದು, ಇದು ಪ್ರಸ್ತುತ ಲಭ್ಯವಿರುವ ಪ್ರಿ-ಫೇಸ್‌ಲಿಫ್ಟ್ ಮಾಡೆಲ್‌ನಲ್ಲಿ ನೀಡಲಾಗಿಲ್ಲ. ಹೊಸ ನವೀಕರಣಗಳೊಂದಿಗೆ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಹೊಸ ಹೋಂಡಾ ಸಿಟಿಯ ಹೊರಭಾಗವು ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳೊಂದಿಗೆ ಸ್ವಲ್ಪಮಟ್ಟಿಗೆ ನವೀಕರಿಸಿದೆ. ಈ ಕಾರಿನ ಮುಂಭಾಗದಲ್ಲಿ, ಫೇಸ್‌ಲಿಫ್ಟೆಡ್ ಸಿಟಿಯು ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾದ ಗ್ರಿಲ್ ಅನ್ನು ಪಡೆಯುತ್ತದೆ, ಇದು ಅಗ್ರೇಸಿವ್ ಆಗಿ ಕಾಣುತ್ತದೆ ಮತ್ತು ಹನಿಕಾಂಬ್ ವಿನ್ಯಾಸವನ್ನು ಪಡೆಯುತ್ತದೆ. ಈ ಹೊಸ ಕಾರು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಗ್ರಿಲ್ ವಿಭಾಗಕ್ಕೆ ಸ್ಲಿಮ್ಮರ್ ಕ್ರೋಮ್ ಬಾರ್ ಅನ್ನು ಒಳಗೊಂಡಿದೆ.

ಈ ಹೊಸ ಕಾರು ಅಗ್ರೇಸಿವ್ ಶೈಲಿಯ ಹೆಡ್‌ಲ್ಯಾಂಪ್‌ಗಳ ಸುತ್ತ ಗ್ರಿಲ್ ಅನ್ನು ಹೊಂದಿದೆ. ಗ್ರಿಲ್ ಈಗ ಹೆಚ್ಚಿನ ರೂಪಾಂತರಗಳಲ್ಲಿ ಹನಿಕಾಂಬ್ ಮಾದರಿಯನ್ನು ಹೊಂದಿದೆ. ಈ ಹೊಸ ಕಾರಿನ ಲೋ ವೆರಿಯೆಂಟ್ ಗಳು, ಲಂಬವಾದ ಸ್ಲ್ಯಾಟ್‌ಗಳನ್ನು ಹೊಂದಿವೆ. ಈ ಹೊಸ ಕಾರಿನ ಸೈಡ್ ಪ್ರೊಫೈಲ್ ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತದೆ. ಈ ಹೊಸ ಕಾರಿನಲ್ಲಿ ವೈರ್‌ಲೆಸ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಸೀಟ್‌ಗಳಂತಹ ಹೊಸ ಫೀಚರ್ಸ್ ಗಳನ್ನು ಪಡೆದುಕೊಂದಿವೆ.

ಹೋಂಡಾ ಕಂಪನಿಯು ಸಿಟಿ ಸೆಡಾನ್‌ನ ವೇರಿಯಂಟ್ ಲೈನ್-ಅಪ್ ಅನ್ನು ಮತ್ತೆ ಪರಿಚಯಿಸಬಹುದು. ಇದಲ್ಲದೆ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಪರಿಷ್ಕೃತ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ. ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನ ಹೈಬ್ರಿಡ್ ಪವರ್‌ಟ್ರೇನ್ ಹೊಂದಿರುವ ಮಾದರಿಯು ಟಾಪ್-ಸ್ಪೆಕ್ ZX ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

ಹೋಂಡಾ ಸಿಟಿ ಹೈಬ್ರಿಡ್‌ ಮಾದರಿಯನ್ನು ಹೊಸ ಕೈಗೆಟುಕುವ ರೂಪಾಂತರವನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ, ಇದು ಪೆಟ್ರೋಲ್ ಮತ್ತು ಬಲವಾದ ಹೈಬ್ರಿಡ್ ರೂಪಾಂತರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹೊಸ ಹೋಂಡಾ ಸಿಟಿ ಸೆಡಾನ್ ಅನ್ನು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುವುದಿಲ್ಲ. ವರದಿಗಳ ಪ್ರಕಾರ, ಪ್ರಸ್ತುತ 1.5 ಲೀಟರ್ ಎಂಜಿನ್ ಮುಂಬರುವ ರಿಯಲ್ ಡ್ರೈವಿಂಗ್ ಎಮಿಷನ್ಸ್ (RDE) ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುವುದಿಲ್ಲ.

ಪ್ರಸ್ತುತ ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು E20 (20 ಪ್ರತಿಶತ ಎಥೆನಾಲ್ ಮಿಶ್ರಣ) ಅನುಸರಣೆಯೊಂದಿಗೆ RDE ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುತ್ತದೆ. ಈ ಹೊಸ ಹೋಂಡಾ ಸಿಟಿ ಕಾರಿನಲ್ಲಿ 1.5 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ 145 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು ಹೋಂಡಾದ e:HEV ಹೈಬ್ರಿಡ್ ತಂತ್ರಜ್ಞಾನದ ಮಾದರಿಯಲ್ಲಿ 1.5 ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 126 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ನಾಳೆ ಈ ಕಾರು ಭಾರತೀಯ ಮಾರುಕಟ್ತೆಯನ್ನು ಪ್ರವೇಶಿಸಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಸಿ ಅವರೆ ಕಾಳು ಉಸುಳಿ ಮಾಡುವ ವಿಧಾನ.

Wed Mar 1 , 2023
  ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಒಣಮೆಣಸಿನಕಾಯಿ, ಶುಂಠಿ, ಕರಿಬೇವು, ಈರುಳ್ಳಿ, ಹಾಕಿ ಹುರಿಯಿರಿ. ನಂತರ ಅವರೆಕಾಳು, ತೆಂಗಿನ ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು, ನೀರು ಹಾಕಿ ಮೂರು ವಿಷಲ್ ಆಗುವವರೆಗೆ ಬೇಯಿಸಿ. ನಂತರ ತೆಗೆದು ಪ್ಯಾನ್‌ಗೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಹಸಿ ಅವರೆಕಾಳು ಉಸುಳಿ ತಿನ್ನಲು ರೆಡಿ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial