BGMI:ಗೇಮಿಂಗ್‌ ಪ್ರಿಯರಿಗೆ ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾದಿಂದ ಬಿಗ್‌ ಶಾಕ್‌;

ಭಾರತದಲ್ಲಿ ಪಬ್‌ಜಿ ಗೇಮ್‌ಗೆ ಬದಲಿಯಾಗಿ ಹೊಸ ಸ್ವರೂಪದಲ್ಲಿ ಎಂಟ್ರಿ ನೀಡಿದ್ದ ಬ್ಯಾಟಲ್‌ ಗ್ರೌಂಡ್‌ ಮೊಬೈಲ್ ಇಂಡಿಯಾ ಶಾಕಿಂಗ್‌ ನ್ಯೂಸ್‌ ಅನ್ನು ನೀಡಿದೆ. ಈಗಾಗಲೇ ಪಬ್‌ಜಿ ಪ್ರಿಯರನ್ನು ತನ್ನತ್ತ ಸೆಳೆದುಕೊಂಡಿರುವ ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ.

ಆದರೆ ಇದೀಗ ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ ಭಾರತದಲ್ಲಿ 1,42,766 ಖಾತೆಗಳನ್ನು ಬ್ಯಾನ್‌ ಮಾಡಿದೆ. ನಕಲಿ ಹೆಸರಿನಲ್ಲಿ ಅಕೌಂಟ್‌ಗಳನ್ನು ತೆರೆದಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ.

ಬ್ಯಾಟಲ್‌ಗ್ರೌಂಡ್‌;
ಹೌದು, ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾ ಭಾರತದಲ್ಲಿ 1,42,766 ಖಾತೆಗಳನ್ನು ಬ್ಯಾನ್‌ ಮಾಡಿದೆ. ಡೆವಲಪರ್‌ಗಳು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾದ ನಕಲಿ ಹೆಸರುಗಳ ಖಾತೆಗಳ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ನಕಲಿ ಖಾತೆಗಳ ನಿಷೇದ ಕ್ರಮ ಡಿಸೆಂಬರ್ 6 ರಿಂದ ಡಿಸೆಂಬರ್ 12 ರ ಅವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಅದರಂತೆ ಇಲ್ಲಿಯವರೆಗೆ 142,766 ಖಾತೆಗಳನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ. ಹಾಗಾದ್ರೆ ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ ಭಾರತದಲ್ಲಿ ಖಾತೆಗಳನ್ನು ಬ್ಯಾನ್‌ ಮಾಡಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

 

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ;

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ನಿಮಗೆ ಉತ್ತಮವಾದ ಗೇಮಿಂಗ್ ಅನುಭವ ನೀಡಲು ಹೊಸ ಕ್ರಮಗಳಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಕಲಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ 1,42,766 ಖಾತೆಗಳನ್ನು ಬ್ಯಾನ್‌ ಮಾಡಿದೆ. ಅಲ್ಲದೆ ಕಾನೂನುಬಾಹಿರ ಕಾರ್ಯಕ್ರಮಗಳ ಬಳಕೆಯನ್ನು ನಿರ್ಮೂಲನೆ ಮಾಡುವುದಕ್ಕಾಗಿ ಹೊಸ ನಿರ್ಬಂಧಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದು ಗೇಮಿಂಗ್‌ ಕಂಪನಿಯು ಹೇಳಿದೆ.

 

ಬ್ಯಾಟಲ್‌ಗ್ರೌಂಡ್ಸ್;

ಇನ್ನು ಈ ತಿಂಗಳ ಆರಂಭದಲ್ಲಿ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ನವೆಂಬರ್ 17 ರಿಂದ ನವೆಂಬರ್ 23 ರ ಅವಧಿಯಲ್ಲಿ 1,57,728 ಖಾತೆಗಳನ್ನು ಶಾಶ್ವತವಾಗಿ ಬ್ಯಾನ್‌ಮಾಡಿರುವುದಾಗಿ ಹೇಳಿದೆ. ಅಲ್ಲದೆ ಈ ಅವಧಿಯಲ್ಲಿ ಯಾವೆಲ್ಲಾ ಖಾತೆಗಳನ್ನು ಬ್ಯಾನ್‌ ಮಾಡಲಾಗಿದೆ.ಆ ನಕಲಿ ಖಾತೆಗಳ ಅಡ್ಡಹೆಸರುಗಳ ಪಟ್ಟಿಯನ್ನು ಸಹ ಹಂಚಿಕೊಂಡಿದ್ದಾರೆ. ಹಾಗಂತೆ ಬ್ಯಾಟಲ್‌ ಗ್ರೌಂಡ್‌ ಮೊಬೈಲ್‌ ಇಂಡಿಯಾ ನಿಮ್ಮ ಖಾತೆಯನ್ನು ಏಕಾಏಕಿ ಬ್ಯಾನ್‌ ಮಾಡುವುದಿಲ್ಲ. ಬದಲಿಗೆ ನಿಮ್ಮ ಖಾತೆಯನ್ನು ಬ್ಯಾನ್‌ ಮಾಡುವ ಮೊದಲು ನಿಮಗೆ ಆಲರ್ಟ್‌ ಮೆಸೇಜ್‌ ಅನ್ನು ನೀಡಲಿದೆ. ಅನುಮಾನಸ್ಪಾದವಾಗಿರುವ ಪ್ರಶ್ನಾರ್ಹ ಡೇಟಾವನ್ನು ಅಳಿಸಲು ಅಥವಾ ರಿಪೇರಿ ಮಾಡಲು ಆಟಗಾರಿನಿಗೆ ಆಯ್ಕೆ ನೀಡಲಿದೆ. ಆದರೆ ಗೇಮರ್‌ ಯಾವುದೇ ಡೇಟಾವನ್ನು ಡಿಲೀಟ್‌ ಮಾಡದೇ ಹೋದರೆ ಅವರ ಖಾತೆಯನ್ನು ಡಿಲೀಟ್‌ ಮಾಡಲಿದೆ.

 

ಅಪ್ಲಿಕೇಶನ್‌;

ಇದಲ್ಲದೆ ಈ ತಿಂಗಳ ಆರಂಭದಲ್ಲಿ, BGMI ಸಹ PUBG ಮೊಬೈಲ್ ನಾರ್ಮ್ಡಿಕ್ ನಕ್ಷೆಯನ್ನು ಬಳಸಿದ ಆಟಗಾರರ ಹೆಸರು ಘೋಷಣೆ ಮಾಡಿತ್ತು. ಲಿವಿಕ್ (ಹಳೆ ಅಪ್ಲಿಕೇಶನ್‌) ಬ್ಯಾಟಲ್‌ ಗ್ರೌಂಡ್ಸ್‌ ಮೊಬೈಲ್ ಇಂಡಿಯಾ (“ಹೊಸ ಅಪ್ಲಿಕೇಶನ್”) ಹಿಂದಿನ ಅಪ್ಲಿಕೇಶನ್ ಖಾತೆಯಿಂದ ಕೆಲವು ಡೇಟಾವನ್ನು ಹೊಸ ಅಪ್ಲಿಕೇಶನ್‌ಗೆ ವರ್ಗಾಯಿಸುತ್ತದೆ. ಈ ಡೇಟಾ ವರ್ಗಾವಣೆ ಇದೇ ತಿಂಗಳು ಅಂದರೆ ಡಿಸೆಂಬರ್ 31 ರವರೆಗೆ ಲಭ್ಯವಿರುತ್ತದೆ.

 

ಬ್ಯಾಟಲ್‌ಗ್ರೌಂಡ್‌ ಮೊಬೈಲ್‌ ಇಂಡಿಯಾವನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ 1: ಮೊದಲಿಗೆ ಗೂಗಲ್‌ಪ್ಲೇ ಸ್ಟೋರ್‌ನಲ್ಲಿ ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಸರ್ಚ್‌ ಮಾಡಿ.
ಹಂತ 2: ನಂತರ ಗೂಗಲ್ ಪ್ಲೇ ಆಯ್ಕೆಯಲ್ಲಿ “ಡೌನ್‌ಲೋಡ್” ಬಟನ್ ಟ್ಯಾಪ್ ಮಾಡಬೇಕು.
ಹಂತ 3: ಬಳಕೆದಾರರನ್ನು ಗೂಗಲ್‌ಪ್ಲೇ ಸ್ಟೋರ್‌ನಲ್ಲಿನ ಗೇಮ್‌ಪೇಜ್‌ಗೆ ಮರುನಿರ್ದೇಶಿಸಲಾಗುತ್ತದೆ.
ಹಂತ 4: “ಇನ್‌ಸ್ಟಾಲ್‌” ಬಟನ್ ಟ್ಯಾಪ್ ಮಾಡಿ. ಗೇಮ್‌ ಅನ್ನು ಆಟೋಮ್ಯಾಟಿಕ್‌ ಡೌನ್‌ಲೋಡ್ ಮಾಡಲಾಗುತ್ತದೆ ಮತ್ತು ಇನ್‌ಸ್ಟಾಲ್‌ ಮಾಡಲಾಗುತ್ತದೆ.
ಹಂತ 5: ಡೌನ್‌ಲೋಡ್ ಪೂರ್ಣಗೊಂಡ ನಂತರ, ಗೇಮ್‌ಅನ್ನು ತೆರೆಯಿರಿ. ಹೆಚ್‌ಡಿ ಮತ್ತು ಲೋ-ಸ್ಪೆಕ್‌ನಿಂದ ಆದ್ಯತೆಯ ಸಂಪನ್ಮೂಲ ಪ್ಯಾಕ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ಆಟಗಾರರು ಹೊಂದಿರುತ್ತಾರೆ.
ಹಂತ 6: ಡೌನ್‌ಲೋಡ್ ಪೂರ್ಣಗೊಂಡ ನಂತರ, ಬಳಕೆದಾರರು ಲಾಗ್ ಇನ್ ಆಗಬಹುದು ಮತ್ತು ಆಟವನ್ನು ಎಂಜಾಯ್‌ ಮಾಡಬಹುದಾಗಿದೆ.

ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬ್ಯಾಟಲ್‌ ಗ್ರೌಂಡ್‌ ಮೊಬೈಲ್ ಇಂಡಿಯಾದ ಗಾತ್ರ 721 ಎಂಬಿ ಇದೆ. ಆದ್ದರಿಂದ, ಗೇಮ್‌ ಅನ್ನು ಡೌನ್‌ಲೋಡ್‌ ಮಾಡುವ ಮೊದಲು ನಿಮ್ಮ ಡಿವೈಸ್‌ನಲ್ಲಿ ಗೇಮ್‌ಗೆ ಬೇಕಾದ ಸ್ಪೇಸ್‌ ಅನ್ನು ಉಳಿಸಿಕೊಳ್ಳುವುದು ಅವಶ್ಯಕವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜನವರಿ 3 ರವರೆಗೆ ವಾಯುವ್ಯ ಭಾರತದಲ್ಲಿ ಶೀತದ ಅಲೆಗಳು ಆವರಿಸುವ ಸಾಧ್ಯತೆಯಿದ...........

Fri Dec 31 , 2021
  ಜನವರಿ 3 ರವರೆಗೆ ವಾಯುವ್ಯ ಭಾರತದಲ್ಲಿ ಶೀತದ ಅಲೆಗಳು ಆವರಿಸುವ ಸಾಧ್ಯತೆಯಿದೆ ಎಂದು IMD ಹೇಳಿದೆ ದೆಹಲಿ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳು ಮತ್ತು ರಾಜಸ್ಥಾನಗಳು ಮುಂದಿನ ನಾಲ್ಕು ದಿನಗಳಲ್ಲಿ ಚಳಿಯ ಅಲೆಯನ್ನು ಅನುಭವಿಸಲಿವೆ ಎಂದು IMD ಗುರುವಾರ ಹೇಳಿದ್ದಾರೆ ವಾಯುವ್ಯ ಭಾರತದ ಕೆಲವು ಭಾಗಗಳು ಭಾರತ ಹವಾಮಾನ ಇಲಾಖೆಯ IMD ನಂತೆ ಹೊಸ ವರ್ಷವನ್ನು ಆಚರಿಸುತ್ತಿವೆ ಶುಕ್ರವಾರ ಡಿಸೆಂಬರ್ 31 ರಿಂದ ಸೋಮವಾರ […]

Advertisement

Wordpress Social Share Plugin powered by Ultimatelysocial