ದೀಪಿಕಾ ಪಡುಕೋಣೆ ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ

ಕನ್ನಡದ ಸಿನಿಮಾಗಳಲ್ಲಿ ಅಂದಿನ ಪ್ರಸಿದ್ಧ ಅಭಿನೇತ್ರಿಯರಾದ ಪಂಡರೀಬಾಯಿ, ಲೀಲಾವತಿ, ಬಿ. ಸರೋಜಾದೇವಿ, ಭಾರತಿ, ಜಯಂತಿ ಅಂತಹ ಪ್ರತಿಭೆಗಳು ಕನ್ನಡದಲ್ಲಿ ಪ್ರಖ್ಯಾತರಾಗಿದ್ದಷ್ಟೇ ಇತರ ಭಾಷೆಗಳಲ್ಲಿ ಕೂಡಾ ನಟಿಸಿ ಅಲ್ಲಿಯೂ ಪ್ರಖ್ಯಾತಿ ಪಡೆದಿದ್ದವರು. ಕಲ್ಪನ, ಆರತಿ, ಮಂಜುಳ ಹೆಚ್ಚು ಕಾಣಿಸಿಕೊಂಡದ್ದು ಕನ್ನಡದಲ್ಲೇ. ನಂತರದಲ್ಲಿ ಕನ್ನಡ ಚಿತ್ರಗಳ ಸಂಖ್ಯೆಗಳೂ ಬೆಳೆದು ಹಳೆಯ ನಟಿಯರು ಸಂಸಾರ ಹಿಡಿದು, ಹೊಸಬರು ಕಡಿಮೆಯಾಗಿ ಕನ್ನಡದಲ್ಲಿ ಇತರ ಭಾಷೆಯ ನಟಿಯರು ಮೂಡಿದ್ದೇ ಹೆಚ್ಚು. ದಿವಂಗತ ಸೌಂದರ್ಯ ಅಂತಹವರು ಬೇರೆ ಭಾಷೆಯಲ್ಲಿ ಹೆಚ್ಚು ಯಶಸ್ವಿಯಾಗಿ ಆ ಭಾಷೆಗಳಲ್ಲಿ ಮೂಡಿದ್ದೇ ಹೆಚ್ಚು.ಇತ್ತೀಚಿನ ತಲೆಮಾರಿನಲ್ಲಿ ಕರ್ನಾಟಕದ ಕೆಲವು ಬೆಡಗಿಯರು ಭಾರತೀಯ ಚಿತ್ರರಂಗದ ಪ್ರಧಾನ ಕೇಂದ್ರವಾದ ಹಿಂದೀ ಚಿತ್ರರಂಗದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ. ಇಂತಹವರಲ್ಲಿಪ್ರಮುಖ ಹೆಸರು ದೀಪಿಕಾ ಪಡುಕೋಣೆ ಅಂದೊಡನೆ ಬ್ಯಾಡ್ಮಿಂಟನ್ ಆಟದಲ್ಲಿ ನಮ್ಮ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಅಂತರಾರಾಷ್ಟ್ರೀಯ ಖ್ಯಾತಿ ತಂದ ಪ್ರಕಾಶ್ ಪಡುಕೋಣೆ ನೆನಪಿಗೆ ಬರುತ್ತಾರೆ. ಅವರು ಅಂತರರಾಷ್ಟ್ರೀಯ ಖ್ಯಾತಿ ಪಡೆದುದಲ್ಲದೆ, ಬರೀ ಗೋಲಿ, ಕ್ರಿಕೆಟ್ ಬ್ಯಾಟು, ಹಾಕಿ ಕೋಲು ಇತ್ಯಾದಿ ಹಿಡಿಯುತ್ತಿದ್ದ ಜನರಿಗೆ “ನಾವೂ ಬ್ಯಾಡ್ಮಿಂಟನ್ ಆಡುತ್ತೇವೆ” ಎಂಬ ಆಶಯ ಹತ್ತಿಸಿದವರು. ನಮ್ಮ ದೀಪಿಕ ಪ್ರಕಾಶ್ ಪಡುಕೋಣೆ ಅವರ ಮಗಳೇ. ವಿದೇಶದಲ್ಲಿ ಹುಟ್ಟಿ ಬೆಂಗಳೂರಿನ ಸೋಫಿಯಾ, ಮೌಂಟ್ ಕಾರ್ಮೆಲ್ ಅಂಥಹ ಇಂಗ್ಲಿಷ್ ಶಾಲೆಯಲ್ಲಿ ಹೆಚ್ಚು ಬಾಳಿದ್ದರೂ, ಕನ್ನಡವನ್ನು ಇಂದಿನ ಯುವ ಕನ್ನಡ ಕಲಾವಿದರಿಗೆ ಹೋಲಿಸಿದಲ್ಲಿ ಚೆನ್ನಾಗಿಯೇ ಮಾತನಾಡುತ್ತಾಳೆ.
ಉಪೇಂದ್ರರೊಡನೆ ನಾಯಕಿಯಾಗಿ ಕನ್ನಡದಲ್ಲಿ ಮೊದಲು ‘ಐಶ್ವರ್ಯ’ ಚಿತ್ರದಲ್ಲಿ ನಟಿಸಿದ ಈ ಹುಡುಗಿ ದೀಪಿಕಾ ಮುಂದೆ ಪ್ರಖ್ಯಾತ ಶಾರುಕ್ ಖಾನ್ ಜೊತೆ ‘ಓಂ ಶಾಂತಿ ಓಂ’ ಚಿತ್ರದಲ್ಲಿ ನಟಿಸಿ ಜಯಭೇರಿ ಭಾರಿಸಿದಳು. ಈ ನಗು ಮೊಗದ ಹುಡುಗಿ ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲಂ ಫೇರ್ ನೀಡಿದ ಎರಡು ಪ್ರಮುಖ ಪ್ರಶಸ್ತಿಗಳೂ ಸೇರಿದಂತೆ ಬಹುತೇಕ ಪ್ರತಿಷ್ಟಿತ ಮಾಧ್ಯಮ ಪ್ರಶಸ್ತಿಗಳನ್ನು ಈ ಪಾತ್ರಕ್ಕಾಗಿ ಪಡೆದಳು. ಆ ನಂತರದಲ್ಲಿ ನಿರಂತರ ಬೇಡಿಕೆಯಲ್ಲಿದ್ದು, ಹಿಂದಿ ಚಿತ್ರರಂಗದ ಬಹುತೇಕ ಪ್ರಸ್ತುತ ನಟರ ಜೊತೆ ಅಭಿನಯಿಸಿರುವ ದೀಪಿಕ, ಅಲ್ಲೊಂದು ಇಲ್ಲೊಂದು ಯಶಸ್ಸು ಎನ್ನುವ ಚಿತ್ರರಂಗದ ದಿನನಿತ್ಯದ ಪರಿಯಂತೆ ಆಗಾಗ ಯಶಸ್ಸು ಕಾಣುತ್ತಾ ನಿರಂತರ ಬೇಡಿಕೆಯೊಂದಿಗೆ ಕಾರ್ಯನಿರತವಾಗಿರುವುದು ಕಂಡು ಬರುತ್ತಿದೆ. ‘ಓಂ ಶಾಂತಿ ಓಂ’ ನಂತರದಲ್ಲಿ ಆಕೆಯ ಗೆದ್ದ ಚಿತ್ರಗಳಾದ ’ಲವ್ ಆಜ್ ಕಲ್’, ‘ಹೌಸ್ ಫುಲ್’, ‘ಕಾಕ್ ಟೈಲ್’, ‘ಗೋಲಿಯೋನ್ ಕಿ ರಾಸಲೀಲಾ ರಾಮ-ಲೀಲಾ’, ‘ಪೀಕು’, ‘ಪದ್ಮಾವತ್’ ಮುಂತಾದ ಚಿತ್ರಗಳನ್ನು ಇಲ್ಲಿ ನೆನೆಯಬಹುದು. ದಕ್ಷಿಣದ ಪ್ರಖ್ಯಾತ ನಾಯಕ ರಜನೀಕಾಂತ್ ಜೊತೆ ಸೇರಿದಂತೆ ಹಲವಾರು ಪ್ರಖ್ಯಾತ ನಿರ್ದೇಶಕರು ಮತ್ತು ನಾಯಕರ ಜೊತೆಯಲ್ಲಿ ಆಕೆಯ ಚಿತ್ರಗಳು ಮೂಡಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫ್ಲಿಪ್​ ಕಾರ್ಟ್​ಗೆ ಭಾರಿ ದಂಡ...

Thu Jan 5 , 2023
ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್​ಕಾರ್ಟ್​ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ 42 ಸಾವಿರ ರೂಪಾಯಿಗಳನ್ನು ದಂಡದ ರೂಪದಲ್ಲಿ ಗ್ರಾಹಕರಿಗೆ ನೀಡುವಂತೆ ವೇದಿಕೆ ಆದೇಶಿಸಿದೆ.ಮೊಬೈಲ್​​​ ಫೋನ್​ಗೆಂದು ಗ್ರಾಹಕರು ನೀಡಿದ್ದ 12,499 ರೂ.ವನ್ನು ವಾರ್ಷಿಕ ಶೇಕಡಾ 12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು. ಇದರ ಜೊತೆಗೆ 20 ಸಾವಿರ ರೂ. ಪರಿಹಾರ ಹಾಗೂ ಕೋರ್ಟ್​ ವೆಚ್ಚದ ರೂಪದಲ್ಲಿ 10 […]

Advertisement

Wordpress Social Share Plugin powered by Ultimatelysocial