ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

 ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

37 ವರ್ಷದ ನಟಿ ತನ್ನ ಮುಂದಿನ ಚಿತ್ರ ಪಠಾನ್‌ಗಾಗಿ ಟ್ರೆಂಡ್​ನಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಬೇಷರಮ್ ರಂಗ್ ಹಾಡಿನಲ್ಲಿ ನಟಿ ಧರಿಸಿದ್ದ ಕೇಸರಿ ಬಿಕಿನಿ ವಿವಾದವಾಗಿತ್ತು.ದೀಪಿಕಾ ಪಡುಕೋಣೆ ಇಂದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಚಿತ್ರವೊಂದಕ್ಕೆ ಸುಮಾರು 15 ರಿಂದ 30 ಕೋಟಿ ಚಾರ್ಜ್ ಮಾಡುತ್ತಾರೆ ದೀಪಿಕಾ. ನಟಿಯ ಒಟ್ಟು ಆಸ್ತಿ ಸುಮಾರು 314 ಕೋಟಿ ಎಂದು ಹೇಳಲಾಗಿದೆ.ವರದಿಗಳ ಪ್ರಕಾರ ದೀಪಿಕಾ ಪಡುಕೋಣೆ ದುಬಾರಿ ವಾಚ್‌ಗಳನ್ನು ಇಷ್ಟಪಡುತ್ತಾರೆ. ಅವರ ವಾಚ್​ ಕಲೆಕ್ಷನ್​ನಲ್ಲಿ ಟಿಸ್ಸಾಟ್ ಕ್ಲಾಸಿಕ್ ಪ್ರಿನ್ಸ್ ಡೈಮಂಡ್ ರೋಸ್ ಗೋಲ್ಡ್ ವಾಚ್ ಇದೆ, ಇದರ ಬೆಲೆ ಸುಮಾರು 8 ಲಕ್ಷ ರೂ. ದೀಪಿಕಾ ಅವರ ಕಾರು ಕಲೆಕ್ಷನ್ ಕೂಡ ಆಕರ್ಷಕವಾಗಿದೆ. ಅವರು ಮರ್ಸಿಡಿಸ್ ಕಾರು ಮತ್ತು 4 BHK ಐಷಾರಾಮಿ ಮನೆಯನ್ನು ಹೊಂದಿದ್ದಾರೆ.ಓಂ ಶಾಂತಿ ಓಂ ನಟಿ ತನ್ನ ಪತಿಯೊಂದಿಗೆ ವರ್ಲಿಯ ಬ್ಯೂ ಮಾಂಡೆ ಟವರ್ಸ್‌ನಲ್ಲಿರುವ ಐಷಾರಾಮಿ 4 BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇಂಡಿಯಾ ಟುಡೇ ಪ್ರಕಾರ, ದೀಪಿಕಾ ಈ ಮನೆಗೆ ಸುಮಾರು 16 ಕೋಟಿ ರೂ. ಮತ್ತೊಂದೆಡೆ, ದೀಪಿಕಾ ಅವರ Mercedes Maybach S500 ಬೆಲೆ ಸುಮಾರು 1.5 ಕೋಟಿ ಎಂದು ಹೇಳಲಾಗಿದೆ.ದೀಪಿಕಾ ಮತ್ತು ರಣವೀರ್ ಬಾಲಿವುಡ್ ಇಂಡಸ್ಟ್ರಿಯ ಪವರ್ ಜೋಡಿಗಳಲ್ಲಿ ಒಬ್ಬರು. ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಪ್ರೀತಿ ತೋರಿಸುವುದನ್ನು ಕಾಣಬಹುದು.ದೀಪಿಕಾ ಪಡುಕೋಣೆ ಕೊನೆಯದಾಗಿ 2022 ರ ಸಿನಿಮಾ ಗೆಹರಾಯಿಯಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಹೆಚ್ಚು ಯಶಸ್ಸು ಕಾಣಲಿಲ್ಲ. ಆದರೆ ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಯಿತು. ಅವರು ಶೀಘ್ರದಲ್ಲೇ ಪಠಾನ್ ಚಿತ್ರದ ಮೂಲಕ ಶಾರುಖ್ ಖಾನ್ ಜೊತೆಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.ದೀಪಿಕಾ ಪಡುಕೋಣೆ ಕರ್ನಾಟಕದವರು, ಅದರಲ್ಲೂ ಕರಾವಳಿಯವರು ಎನ್ನುವುದು ವಿಶೇಷ. ಅವರ ಮೊದಲ ಸಿನಿಮಾ ಕೂಡಾ ಕನ್ನಡದಲ್ಲಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಿನಿಮಾ 'ಪಠಾಣ್' ಜನವರಿ 25ಕ್ಕೆ!

Thu Jan 5 , 2023
ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ನೋಡುವುದಕ್ಕೆ ಅದೆಷ್ಟೋ ಮಂದಿ ಫ್ಯಾನ್ಸ್ ಕಾದು ಕೂತಿದ್ದಾರೆ. ಇನ್ನೊಂದು ಕಡೆ ಸಿನಿಮಾ ವಿವಾದಕ್ಕೂ ಸಿಕ್ಕಿಕೊಂಡು ವಿಲವಿಲ ಅಂತ ಒದ್ದಾಡುತ್ತಿದೆ. ಇತ್ತೀಚೆಗೆ ‘ಪಠಾಣ್’ ಸಿನಿಮಾದ “ಬೇಷರಂ ರಂಗ್.. ” ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಹಾಡು ಅಶ್ಲೀಲವಾಗಿದೆ ಎಂದು ಕಿಡಿಕಾರಿದ್ದರು. ಅಲ್ಲದೆ ಸೆನ್ಸಾರ್ ಬೋರ್ಡ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇನ್ನೇನು […]

Advertisement

Wordpress Social Share Plugin powered by Ultimatelysocial