ಯಾವ ಹಣ್ಣುಗಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.? ಯಾವ ಹಣ್ಣುಗಳನ್ನು ತಿನ್ನಬಾರದು..?

ಯಾವ ಹಣ್ಣುಗಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.? ಯಾವ ಹಣ್ಣುಗಳನ್ನು ತಿನ್ನಬಾರದು..?

ತುಂಬಾ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಅಥವಾ ಕಾಫಿ, ಜೊತೆಗೆ ತಿಂಡಿ ಬೇಕಾಗುತ್ತದೆ. ಆದ್ರೆ ಡಯಟ್ ಮಾಡುವವರು, ಆರೋಗ್ಯದ ಬಗ್ಗೆ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರು ಬೆಳಿಗ್ಗೆ ಎದ್ದ ತಕ್ಷಣ ಹಣ್ಣು ತಿನ್ನುತ್ತಾರೆ. ಇಲ್ಲವಾದಲ್ಲಿ, ಜ್ಯೂಸ್ ಕುಡಿಯುತ್ತಾರೆ.

ಹಾಗಾಗಿ ಇಂದು ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಯಾವ ಹಣ್ಣುಗಳನ್ನು ತಿನ್ನಬಹುದು. ಮತ್ತು ಯಾವ ಹಣ್ಣುಗಳನ್ನು ತಿನ್ನಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.

ಮೊದಲನೇಯದಾಗಿ ಯಾವ ಹಣ್ಣನ್ನು ತಿನ್ನಬೇಕು ಅಂತಾ ತಿಳಿಯೋಣ ಬನ್ನಿ. ಕಿತ್ತಳೆ, ಸೇಬು, ಪಪ್ಪಾಯಿ, ದಾಳಿಂಬೆ ಈ ಹಣ್ಣುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಇದನ್ನು ತಿನ್ನುವುದರಿಂದ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಗರ್ಭಣಿಯರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ, ಕಿತ್ತಳೆ ತಿಂದರೆ, ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಇನ್ನು ಸೇಬು ಹಣ್ಣಿನ ಸೇವನೆಯಿಂದ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ಮಲಬದ್ಧತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮತ್ತು ಅದರಿಂದ ಆರೋಗ್ಯ ಅಭಿವೃದ್ಧಿಯಾಗುತ್ತದೆ.

ಇನ್ನು ಬೆಳಿಗ್ಗೆ ತಿನ್ನಬಾರದ ಹಣ್ಣುಗಳು ಅಂದ್ರೆ, ಬಾಳೆ ಹಣ್ಣು, ದ್ರಾಕ್ಷಿ ಹಣ್ಣು, ಪೇರಲೆ ಹಣ್ಣು, ಮಾವಿನ ಹಣ್ಣು. ಈ ಹಣ್ಣುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಮಾವಿನ ಹಣ್ಣನ್ನು ಹೊಟ್ಟೆ ತುಂಬಿದ ಮೇಲೆ ತಿನ್ನುತ್ತಾರೆ. ಅದಕ್ಕೂ ಮೊದಲೇ ತಿಂದರೆ, ಹೊಟ್ಟೆಯಲ್ಲಿ ಏರುಪೇರಾಗುತ್ತದೆ. ದ್ರಾಕ್ಷಿ ಹಣ್ಣು, ಪೇರಲೆ ಹಣ್ಣು ಮತ್ತು ಬಾಳೆ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ಶೀತವಾಗುತ್ತದೆ. ತಲೆ ನೋವು ಬರುವ ಸಾಧ್ಯತೆ ಇದೆ. ಹಾಗಾಗಿ ಇವೆರಡು ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಯಸ್ಸು 30 ದಾಟಿದ ಬಳಿಕ ನೀವು ಸೇವಿಸಲೇಬೇಕು ಈ ಆಹಾರ ಪದಾರ್ಥ

Wed Dec 22 , 2021
ಮೂವತ್ತು ವರ್ಷ ದಾಟಿತು ಅಂದಕೂಡಲೇ ದೇಹ ದುರ್ಬಲವಾಗುತ್ತಾ ಬರುತ್ತದೆ. ಹೀಗಾಗಿ ಮೂವತ್ತರ ಬಳಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಕಿತ್ತಳೆ, ದ್ರಾಕ್ಷಿ ಹಾಗೂ ಲಿಂಬುವನ್ನು ಸೇವಿಸಬೇಕು. ಸಿಟ್ರಸ್​ ಹೆಚ್ಚಿರುವ ಹಣ್ಣುಗಳಲ್ಲಿ ಆಯಂಟಿ ಆಕ್ಸಿಡಂಟ್​ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial