ಡಿಫೆನ್ಸ್‌ ಅಕಾಡೆಮಿ ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಅಧಿಸೂಚನೆ ಪ್ರಕಟ

ಕೇಂದ್ರ ಲೋಕಸೇವಾ ಆಯೋಗವು 2023ನೇ ಸಾಲಿನ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಮತ್ತು ನೇವಿ ಅಕಾಡೆಮಿ ಕೋರ್ಸ್‌ಗಳ ಟರ್ಮ್‌ 1 ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿದೆ. ಎನ್‌ಡಿಎ, ಎನ್‌ಎ ಕೋರ್ಸ್‌ಗಳಿಗೆ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು, ನಿಗದಿತ ಕೊನೆ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.
ಎನ್‌ಡಿಎ (ಮಿಲಿಟರಿ) : 370
ನೌಕಾ ಅಕಾಡೆಮಿ: 25
ದ್ವಿತೀಯ ಪಿಯುಸಿ (10+2) ವಿದ್ಯಾರ್ಹತೆಯನ್ನು ಸ್ಕೂಲ್‌ ಎಜುಕೇಷನ್‌ ಬೋರ್ಡ್‌ ಅಥವಾ ಯಾವುದೇ ರಾಜ್ಯ ಶಿಕ್ಷಣ ಇಲಾಖೆ ಅಥವಾ ವಿಶ್ವವಿದ್ಯಾಲಯ ನಡೆಸುವ ತತ್ಸಮಾನ ಪರೀಕ್ಷೆಯಲ್ಲಿ ಪಾಸ್‌ ಆಗಿರಬೇಕು.
ದ್ವಿತೀಯ ಪಿಯುಸಿ (10+2) ವಿದ್ಯಾರ್ಹತೆಯನ್ನು ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಾಸ್‌ ಮಾಡಿರಬೇಕು.
ಎನ್‌ಡಿಎ, ಎನ್‌ಎ 1, 2023 ಪರೀಕ್ಷೆಗೆ ಅರ್ಜಿ ಸ್ವೀಕಾರ ಆರಂಭ ದಿನಾಂಕ: 22-12-2022
ಎನ್‌ಡಿಎ, ಎನ್‌ಎ 1, 2023 ಪರೀಕ್ಷೆ ಅರ್ಜಿಗೆ ಕೊನೆ ದಿನಾಂಕ: 10-01-2023 ಸಂಜೆ 6 ಗಂಟೆವರೆಗೆ.
ಕ್ಯಾಶ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 09-01-2023 ರ ಬ್ಯಾಂಕ್‌ ಕಾರ್ಯ ವೇಳೆ.
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 10-01-2023 ಸಂಜೆ 6 ಗಂಟೆವರೆಗೆ.
ಅಪ್ಲಿಕೇಶನ್‌ ವಿತ್‌ಡ್ರಾ ಮಾಡಿಕೊಳ್ಳಲು ಕೊನೆ ದಿನಾಂಕ: 2023 ರ ಜನವರಿ 18-24 ರ ಸಂಜೆ 6 ಗಂಟೆವರೆಗೆ.ಎನ್‌ಡಿಎ, ಎನ್‌ಎ 1, 2023 ಪರೀಕ್ಷೆ ದಿನಾಂಕ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.ವಿಶೇಷ ಸೂಚನೆ :ಈ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಕೇವಲ ಅವಿವಾಹಿತರು ಮಾತ್ರ ಅರ್ಹರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಿಷಭ್ ಪಂತ್ ಚೇತರಿಕೆ ಬಗ್ಗೆ ಪ್ರಮುಖ ಮಾಹಿತಿ

Sun Jan 1 , 2023
ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅವರ ಇತ್ತೀಚಿನ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸಾಕಷ್ಟು ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ತಕ್ಷಣಕ್ಕೆ ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಯೋಜನೆಯಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಕಳೆದ ಶುಕ್ರವಾರ ಡಿಸೆಂಬರ್ 30ರ ಮುಂಜಾನೆ ರಿಷಭ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿತ್ತು. ಕುಟುಂಬಸ್ಥರಿಗೆ ಅರ್ಪ್ರೈಸ್ ನೀಡುವ ಹಿನ್ನೆಲೆಯಲ್ಲಿ ಬೆಳಗಿನ ಜಾವ […]

Advertisement

Wordpress Social Share Plugin powered by Ultimatelysocial