ದೇಹಕ್ಕೆ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತವೆ!!!!

ಅಣಬೆಗಳನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತದೆ. ಇವು ಪೊಟ್ಯಾಷಿಯಂ ಹಾಗೂ ವಿಟಮಿನ್ ಡಿ ಅತ್ಯುತ್ತಮ ಮೂಲವಾಗಿದೆ. ಅಣಬೆಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೇ ಅಣಬೆಗಳು ಕ್ಯಾನ್ಸರ್ ಇನ್ನಿತರ ಮಾರಕ ಖಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ, ಅಣಬೆಗಳು ಅಧಿಕ ಪ್ರಮಾಣದಲ್ಲಿ ವಿಟಮಿನ್ ಡಿ ಯನ್ನು ಹೊಂದಿರುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಡಿ ದೊರೆಯುತ್ತದೆ. ಅಣಬೆಗಳು ಆಂಟಿ ಆಕ್ಸಿಡೆಂಟ್ ಹೊಂದಿರುವುದರಿಂದ ಅವು ದೇಹವನ್ನು ಕ್ಯಾನ್ಸರ್, ಹೃದ್ರೋಗ ಮುಂತಾದ ಖಾಯಿಲೆಯಿಂದ ರಕ್ಷಿಸುತ್ತದೆ.

ಅಣಬೆ ಸೇವನೆಯಿಂದ ದೇಹಕ್ಕೆ ಕಬ್ಬಿಣ ಅಂಶ ದೊರೆತು ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ. ಅಣಬೆಯು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುವಂತೆ ಮಾಡುತ್ತದೆ, ಅಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಣಬೆಯಲ್ಲಿ ವಿಟಮಿನ್ ಬಿ ಇರುವುದರಿಂದ ದೇಹಕ್ಕೆ ಶಕ್ತಿ ಕೊಡುತ್ತದೆ. ಅಲ್ಲದೇ ದೇಹದ ಅಂಗಾಂಗಗಳು ಆಕ್ಟೀವ್ ಆಗಿ ಕೆಲಸ ಮಾಡುವಂತೆ ಮಾಡುತ್ತದೆ. ಬಿಳಿ ಅಣಬೆಗಳು ಕ್ಯಾಲ್ಶಿಯಂ ಹೊಂದಿರುವುದರಿಂದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಾ ಬಂದರೆ ಮೂಳೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಬಿಳಿ ಅಣಬೆಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ನಿಯಂತ್ರಿಸುತ್ತ̧ದೆ̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

PUBG ಮೊಬೈಲ್ ಲೈಟ್ 0.23.0 ಆವೃತ್ತಿ ಬಿಡುಗಡೆ ದಿನಾಂಕ, ಜನವರಿ 2022 ಅಪ್ಡೇಟ್;

Wed Jan 12 , 2022
PUBG ಮೊಬೈಲ್ ಲೈಟ್ ಉತ್ತಮ ಬ್ಯಾಟಲ್ ರಾಯಲ್ ಆಟವಾಗಿದ್ದು, ಇದು PUBG ಮೊಬೈಲ್‌ನ ಲೈಟ್ ಆವೃತ್ತಿಯಾಗಿದೆ ಮತ್ತು ಈ ಆಟವನ್ನು ಕಡಿಮೆ RAM ಹೊಂದಿರುವ ಯಾವುದೇ ಸಾಧನದಲ್ಲಿ ಆಡಬಹುದು. PUBG ಮೊಬೈಲ್ ಲೈಟ್ ಡೆವಲಪರ್‌ಗಳು ಹೊಸ ಪ್ರೀಮಿಯಂ ಐಟಂಗಳು, ಬಟ್ಟೆಗಳು, ಗನ್ ಸ್ಕಿನ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಟಗಾರರಿಗಾಗಿ ಹೊಸ ನವೀಕರಣಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ಆಟಕ್ಕೆ ಸೇರಿಸುತ್ತಲೇ ಇರುತ್ತಾರೆ. PUBG ಮೊಬೈಲ್ ಲೈಟ್ ಇತ್ತೀಚೆಗೆ ಹೊಸ ಅಪ್‌ಡೇಟ್ 0. […]

Advertisement

Wordpress Social Share Plugin powered by Ultimatelysocial