ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೋಮವಾರ ತಡರಾತ್ರಿ ಕೊಲೆ ಬೆದರಿಕೆ ಬಂದಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೋಮವಾರ ತಡರಾತ್ರಿ ಕೊಲೆ ಬೆದರಿಕೆ ಬಂದಿದೆ. ಆರೋಪಿಗಳು ಸೋಮವಾರ ಮಧ್ಯರಾತ್ರಿ 12.05ಕ್ಕೆ ಪಿಸಿಆರ್ ಕರೆ ಮಾಡಿ ಅರವಿಂದ್ ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಕರೆ ಬಂದ ನಂತರ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಗುರುತಿಸಿದ್ದಾರೆ.

ಕೆಲವೇ ಸಮಯದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಕರೆ ಮಾಡಿದ ವ್ಯಕ್ತಿ 38 ವರ್ಷದ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆರೋಪಿ ದೆಹಲಿಯ ಗುಲಾಬಿ ಬಾಗ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಕಾರಣಕ್ಕಾಗಿ ಪೊಲೀಸರು ಅವನನ್ನು ಬಂಧಿಸಲಿಲ್ಲ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈ ರೀತಿ ಬೆದರಿಕೆ ಕರೆ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವಾರು ಬಾರಿ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಮಾತ್ರವಲ್ಲದೆ ಕೇಜ್ರಿವಾಲ್ ಅವರಿಗೆ ಕಳೆದ ಬಾರಿ ಮಾನಸಿಕ ಅಸ್ವಸ್ಥನಿಂದಲೇ ಬೆದರಿಕೆ ಕರೆ, ಮೇಲ್ ಬಂದಿರುವುದು ಇಲ್ಲಿ ನೆನಪಿಸಿಕೊಳ್ಳಬಹುದು. ಇದು ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿದೆ.

ಈ ಹಿಂದೆ 2019ರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಮತ್ತು ಅವಹೇಳನಕಾರಿ ಇಮೇಲ್‌ಗಳನ್ನು ಕಳುಹಿಸಲಾಗಿತ್ತು. ಈ ವೇಳೆ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆರೋಪಿಯು ರಾಜಸ್ಥಾನದ ಅಜ್ಮೀರ್ ಮೂಲದವನು ಎಂದು ಹೇಳಲಾಗಿತ್ತು. ಆದರೆ ಆತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿತ್ತು. ಈತ ಈ ಹಿಂದೆ ಹಲವಾರು ಜನರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿತ್ತು. ಈ ಆರೋಪಿ ಸಿಎಂ ಕೇಜ್ರಿವಾಲ್ ಅವರ ಇಮೇಲ್ ವಿಳಾಸವನ್ನು ಪಡೆದು ಬೆದರಿಕೆ ಮೇಲ್ ಕಳುಹಿಸಿದ್ದನು. ಈ ಮೊದಲು ಆತ ಹಲವಾರು ಜನರಿಗೆ ಮೇಲ್ ಮಾಡಿದ್ದನು ಎಂದು ತನಿಖೆಯಿಂದ ತಿಳಿದುಬಂದಿತ್ತು. ಈಗ ಆ ವ್ಯಕ್ತಿಯ ಲ್ಯಾಪ್‌ಟಾಪ್ ವಶಪಡಿಸಿಕೊಂಡು, ಅವರಿಗೆ ವೈದ್ಯಕೀಯ ತಪಾಸಣೆಗೆ ಸೂಚಿಸಲಾಗಿತ್ತು.

2019ರ ಸೆಪ್ಟೆಂಬರ್ ತಿಂಗಳಲ್ಲಿ ಕೇಜ್ರಿವಾಲ್ ಎರಡು ಬೆದರಿಕೆ ಮತ್ತು ಅವಹೇಳನಕಾರಿ ಇಮೇಲ್ ಸಂದೇಶಗಳು ಬಂದಿದ್ದವು, ನಂತರ ಮುಖ್ಯ ಕಾರ್ಯದರ್ಶಿ ಅಜಯ್ ಚಗಟಿ ಅವರು ಪೋಲಿಸ್ ರ ಬಳಿ ದೂರು ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇನ್ನೂ 2021ರ ದೀಪಾವಳಿಯಂದು ಪಟಾಕಿ ನಿಷೇಧ ಮಾಡಿದ್ದಕ್ಕಾಗಿ ನವೆಂಬರ್ 4 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಹಿಂದೂ ಶೇರ್ ಬಾಯ್‌ ಎಂದು ಜನಪ್ರಿಯವಾಗಿರುವ ಬಲಪಂಥೀಯ ಯೂಟ್ಯೂಬರ್ ಸುರೇಶ್ ರಜಪೂತ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿಂದಿಸಿ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈತ ವಿವಾದಾತ್ಮಕ ಧಾರ್ಮಿಕ ಗುರು ಯತಿ ನರಸಿಂಗಾನಂದ ಅವರ ಹಿಂಬಾಲಕ ಎಂದು ದಿ ವೈರ್‌ ತನ್ನ ವರದಿಯಲ್ಲಿ ಹೇಳಿದೆ.

“ಪಾಕಿಸ್ತಾನದ ಎದುರು ಭಾರತ ಸೋತಾಗ ದೆಹಲಿಯಲ್ಲಿ ಪಟಾಕಿಗಳನ್ನು ಸುಡಲಾಯಿತು. ಆಗ ನಿಮ್ಮಗೆ ಯಾವುದೆ ಸಮಸ್ಯೆ ಇರಲಿಲ್ಲ. ನಿಮ್ಮ ಗಮನ ದೀಪಾವಳಿ ಮತ್ತು ಹೋಳಿಯ ಸಮಯದಲ್ಲಷ್ಟೇ ಬರುತ್ತದೆ. ಕೇಜ್ರಿವಾಲ್‌ ನಿಮ್ಮನ್ನು ಶೂಟ್ ಮಾಡಲಾಗುವುದು” ಎಂದು ಬೆದರಿಕೆ ಹಾಕಿದ್ದನು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು.

Tue Jan 31 , 2023
ಪಾಲ್ಘರ್ (ಮಹಾರಾಷ್ಟ್ರ): ಪಾಲ್ಘರ್ ಜಿಲ್ಲೆಯ ದಹಾನು ಪ್ರದೇಶದಲ್ಲಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಐಷಾರಾಮಿ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳ್ಗಗೆ ನಡೆದಿದೆ. ಕಾರು ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪಾಲ್ಘರ್ ಪೊಲೀಸರು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. […]

Advertisement

Wordpress Social Share Plugin powered by Ultimatelysocial