ದೆಹಲಿಯ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್

 

ಭಾನುವಾರ ಮುಂಜಾನೆ ದೆಹಲಿಯ ಸುಲ್ತಾನಪುರಿಯಲ್ಲಿ ಸಂಭವಿಸಿದ ಕಾರು-ಸ್ಕೂಟಿ ಅಪಘಾತಕ್ಕೆ (Accident in Delhi) ಇದೀಗ ಹೊಸ ತಿರುವೊಂದು ಸಿಕ್ಕಿದೆ. ಅಪಘಾತದಲ್ಲಿ ಮೃತಳಾದ ಯುವತಿಯ ಜತೆಯಲ್ಲಿ ಮತ್ತೊಬ್ಬ ಯುವತಿ ಸ್ಕೂಟಿಯಲ್ಲಿ ಇದ್ದಿದ್ದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.ಮೃತಳಾದ ಯುವತಿ ಹಾಗೂ ಆಕೆಯ ಸ್ನೇಹಿತೆ ಶನಿವಾರ ರಾತ್ರಿ ಹೋಟೆಲ್ ಒಂದರಲ್ಲಿ ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆಂದು ತೆರಳಿದ್ದರು. ಅಲ್ಲಿಂದ ಭಾನುವಾರ ಮುಂಜಾನೆ ಇಬ್ಬರೂ ಒಟ್ಟಿಗೆ ಸ್ಕೂಟಿಯಲ್ಲಿ ಬಂದಿದ್ದಾರೆ. ಆಗ ಈ ಅಪಘಾತ ಸಂಭವಿಸಿದೆ. ಒಬ್ಬ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಕೆ ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನೊಬ್ಬ ಯುವತಿಯ ಕಾಲು ಕಾರಿನ ಚಕ್ರಕ್ಕೆ ಸಿಲುಕಿಕೊಂಡ ಹಿನ್ನೆಲೆ ಆಕೆಯನ್ನು ಕಾರು ಎಳೆದುಕೊಂಡು ಹೋಗಿದೆ ಎಂದಿದ್ದಾರೆ ಪೊಲೀಸರು.ಸ್ಕೂಟಿಯಲ್ಲಿದ್ದ ಯುವತಿ ಹಾಗೂ ಪಾರ್ಟಿಯಲ್ಲಿದ್ದ ಅವರ ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣದ (Accident in Delhi) ತನಿಖೆ ನಡೆಸಿ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.ಇದೇ ವೇಳೆ ಮೃತ ಯುವತಿಯ ಕುಟುಂಬದವರು ಅಪಘಾತದ  ಬಗ್ಗೆ ಹಲವಾರು ಅನುಮಾನಗಳನ್ನು ಹೊರಹಾಕಿದ್ದಾರೆ. ಯುವತಿಯ ಶವ ರಸ್ತೆಗೆ ಬಿದ್ದಾಗ ಆಕೆಯ ದೇಹದ ಮೇಲೆ ಒಂದು ಚೂರೂ ಬಟ್ಟೆ ಇರಲಿಲ್ಲ. ಅಪಘಾತವಾಗಿದ್ದೇ ಆದರೆ ಬಟ್ಟೆ ಎಲ್ಲಿಗೆ ಹೋಯಿತು? ಎಂದು ಅವರು ಪ್ರಶ್ನಿಸಿದ್ದಾರೆ. ಇದರ ಹಿಂದೆ ಬೇರೆಯವರ ಕೈವಾಡವಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.ಇಲ್ಲಿನ ವೀರಾಪೂರ ಓಣಿಯ ಕರಿಯಮ್ಮ ದೇವಸ್ಥಾನದಲ್ಲಿ ಸಿಲಿಂಡರ್‌ ಸ್ಫೋಟಗೊಂಡು (Cylinder Blast) ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುವತಿಯ ಭೀಕರ ಅಪಘಾತ ಸಾವಿನ ಕೇಸ್

Tue Jan 3 , 2023
  ದೆಹಲಿಯಲ್ಲಿ 20 ವರ್ಷದ ಯುವತಿಯ ಭೀಕರ ಅಪಘಾತ ಸಾವಿನ ಕೇಸ್ ಮತ್ತೊಂದು ಹೊಸ ಬೆಳವಣಿಗೆ ಹೊರಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ ಸ್ಕೂಟಿಯಲ್ಲಿದ್ದ ಇಬ್ಬರು ಹುಡುಗಿಯರು ಕಂಜಾವಾಲಾ ಸುತ್ತಮುತ್ತಲಿನ ಹೋಟೆಲ್‌ಗಳಿಗೆ ಹೋಗಿದ್ದರು. ಹೋಟೆಲ್‌ನಲ್ಲಿ ಅವರೊಂದಿಗೆ ಇತರ ಹುಡುಗರೂ ಇದ್ದರು, ಹುಡುಗಿಯರು ಹೋಟೆಲ್‌ನಲ್ಲಿ ಜಗಳವಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ತರಾತುರಿಯಲ್ಲಿ ಹುಡುಗಿಯರು ಹೋಟೆಲ್ ನಿಂದ ಹೊರಹೋಗಿದ್ದಾರೆ.ಹುಡುಗಿಯರಿಬ್ಬರೂ ಜಗಳವಾಡುತ್ತಿದ್ದರು. ಜಗಳ ಮಾಡಬೇಡಿ ಎಂದು ಮ್ಯಾನೇಜರ್ ಹೇಳಿದಾಗ ಕೆಳಗಡೆ ಇಳಿದು ಜಗಳ ಆರಂಭಿಸಿದ ಬಳಿಕ […]

Advertisement

Wordpress Social Share Plugin powered by Ultimatelysocial