ಡಿಂಗ್ರಿ ನಾಗರಾಜ್ ಅಶ್ಲೀಲ ವಿಡಿಯೋ ಕಳಿಸ್ತಾರೆ ಎಂದ ನಟಿ ರಾಣಿ

ಚಿತ್ರರಂಗದಲ್ಲಿ ಕಿರುಕುಳ ಆರೋಪ, ಕೆಟ್ಟ ನಡವಳಿಕೆ, ಅಶ್ಲೀಲ ವಿಡಿಯೋ ಲೀಕ್, ಅಶ್ಲೀಲ ಫೋಟೊ ಕೇಳುವುದು ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವಕಾಶಕ್ಕೆ ಲೈಂಗಿಕ ಫೇವರ್ ಕೇಳುವುದು ಅಥವಾ ಅಧಿಕಾರ ದುರ್ಬಳಕೆ ಮಾಡಿಕೊಂಡು ಇತರರನ್ನು ಬಳಸಿಕೊಳ್ಳುವಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಈಗ ಸ್ಯಾಂಡಲ್​ವುಡ್​ನಲ್ಲಿ  ಅಂಥಹ ಆರೋಪದ ಘಟನೆಯೊಂದು ವರದಿಯಾಗಿದೆ. ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮಿಂಚಿದ್ದ ಡಿಂಗ್ರಿ ರಾಜ್ ವಿರುದ್ಧ ಆರೋಪ ಒಂದು ಕೇಳಿ ಬಂದಿದೆ. ಅವರು ನನಗೆ ಅಶ್ಲೀಲ ವಿಡಿಯೋ  ಕಳುಹಿಸಿದ್ದಾರೆ ಎಂದು ನಟಿ ರಾಣಿ ಆರೋಪಿಸಿದ್ದಾರೆ.ರವಿ ಶಿಕಾರಿಪುರ ಸೇರಿ ಹಲವರು ನೊಂದಿದ್ದಾರೆ. ಸಂಘದಲ್ಲಿ ಆಗುವ ವಿಚಾರಗಳಿಗೆ ಡಿಂಗ್ರಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಆಡುಗೊಡಿ ಶ್ರೀನಿವಾಸ್ ಅವರು ಸರಿಯಾಗಿ ಉತ್ತರಿಸುವುದಿಲ್ಲ. ನಾವು ಏನು ಪ್ರಶ್ನೆ ಮಾಡಿದರೂ ಅವರಿಗೆ ಬೇಕಾದಂತೆ ಉತ್ತರಿಸುತ್ತಾರೆ, ಪ್ರತಿ ವಿಚಾರದಲ್ಲಿ ಕಮಿಟಿ ಒಳಗೆ ಮುಚ್ಚುಮರೆ ಮಾಡುತ್ತಾರೆ. ಏಕವಚನದಲ್ಲಿ ಮಾತನಾಡುತ್ತಾರೆ. ಮಹಿಳೆಯರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ ಎಂದಿದ್ದಾರೆ.ನಾನು ಪೋಷಕರ ಕಲಾವಿದರ ಸಂಘದ ವಿರುದ್ಧ ಮಾತನಾಡುತ್ತಿಲ್ಲ. ಡಿಂಗ್ರಿ ನಾಗರಾಜ್ ಹಾಗೂ ಆಡುಗೊಡಿ ಶ್ರೀನಿವಾಸ್ ವಿರುದ್ಧ ನನ್ನ ಆರೋಪ. ನನ್ನನ್ನು ಹೇಗೆ ಡಿಸ್ಮಿಸ್ ಮಾಡಿದ್ದಾರೋ ಹಾಗೆಯೇ ಲೆಕ್ಕಪತ್ರದ ಬಗ್ಗೆ ಕೇಳಿದಾಗ ಅವರನ್ನೂ ಡಿಸ್ಮಿಸ್ ಮಾಡಿದ್ದಾರೆ. ಕಮಿಟಿಯಲ್ಲಿ 17 ಜನ ಪದಾಧಿಕಾರಿಗಳಿದ್ದಾರೆ. ಯಾವುದೇ ವಿಚಾರ ಚರ್ಚೆ ಮಾಡುವಾಗ ಎಲ್ಲರ ಜೊತೆ ಚರ್ಚೆ ಮಾಡಬೇಕು. ಆದರೆ ಇಲ್ಲಿ ಅವರಿಬ್ಬರೇ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ. ಏಕವಚನದಲ್ಲಿ ಮಾತನಾಡುತ್ತಾರೆ. ಅವರ ನಿರ್ಧಾರ ಪ್ರಶ್ನಿಸಿದರೆ ಇಷ್ಟವಿದ್ದರೆ ಇರು, ಇಲ್ಲವಾದರೆ ಹೋಗಿ ಎಂದು ಏಕವಚನದಲ್ಲಿ ಮಾತನಾಡಿ ನಿಂದಿಸುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸುಕೃತ ನಾಗ್-ಶೈನ್ ಶೆಟ್ಟಿ ಮದುವೆ ಫಿಕ್ಸ್?

Thu Dec 29 , 2022
ಕಿರುತೆರೆ ಹಾಗೂ ಬೆಳ್ಳಿ ತೆರೆಯ ಬಹಳಷ್ಟು ಸೆಲೆಬ್ರಿಟಿಗಳು  ಮದುವೆ   ಯೋಚನೆ ಮಾಡುತ್ತಿದ್ದಾರೆ. ಬಾಲಿವುಡ್​ನಿಂದ  ಸೌತ್ ಇಂಡಸ್ಟ್ರಿ  ತನಕ ಸಿನಿಮಾ ಹಾಗೂ ಕಿರುತೆರೆಯ ಬಹಜಳಷ್ಟು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವಾಗ ಕನ್ನಡ ಕಿರುತೆರೆ ಜೋಡಿಯೊಂದು ಸಪ್ತಪದಿ ತುಳಿಯಲು ಸಿದ್ಧವಾಗಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಕನ್ನಡ ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ ಶೈನ್ ಶೆಟ್ಟಿ ಯುವತಿಯರ ಹಾಟ್ ಫೇವರೇಟ್ ಎಂದು ಬೇರೆ ಹೇಳುವ ಅಗತ್ಯವಿಲ್ಲ. ಎಲ್ಲಾ ಕಡೆ ಫೇಮಸ್ ಆಗಿರೋ […]

Advertisement

Wordpress Social Share Plugin powered by Ultimatelysocial