ಡಿ-ಗ್ಲಾಮ್ ಪಾತ್ರದಿಂದ ಸಖತ್ ಬೋಲ್ಡ್​ ಪಾತ್ರದವರೆಗೆ; ವಿದ್ಯಾ ಬಾಲನ್ ಅಭಿನಯಕ್ಕಿಲ್ಲ ಸರಿಸಾಟಿ!

ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ಸಹಜ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಅಪರೂಪದ ಪ್ರತಿಭೆ.

ಇಂದು 43ನೇ ವಸಂತಕ್ಕೆ ಕಾಲಿರಿಸಿದ ಅವರು, ಈಗಲೂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ನಟಿ. ಡಿ-ಗ್ಲಾಮ್ ಪಾತ್ರದಿಂದ ಸಖತ್ ಬೋಲ್ಡ್ ಪಾತ್ರದವರೆಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ನಟಿ ವಿದ್ಯಾ ಬಾಲನ್. ಅಲ್ಲದೇ ಸ್ಟಾರ್ ನಟರ ಚಿತ್ರಗಳೇ ನೆಲಕಚ್ಚುತ್ತಿರುವಾಗ ಸಖತ್ ಅಪ್ಡೇಟ್ ಆಗಿರುವ ವಿದ್ಯಾ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಬಣ್ಣ ಹಚ್ಚಿ ಗೆಲ್ಲುತ್ತಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದದ ‘ಶೆರ್ನಿ’ ಇದಕ್ಕೆ ಉತ್ತಮ ಉದಾಹರಣೆ. ಅಮೆಜಾನ್ ಪ್ರೈಮ್​ನಲ್ಲಿ ತೆರೆಕಂಡ ಈ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೇ ಹಲವು ಪ್ರಶಸ್ತಿಗಳೂ ಲಭಿಸಿದವು. ಬಂಗಾಳಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿದ್ಯಾ ಬಾಲನ್​ಗೆ ‘ಪರಿಣೀತ’ ಚಿತ್ರದ ಲಲಿತಾ ರಾಯ್ ಪಾತ್ರ ಅಪಾರ ಖ್ಯಾತಿ ತಂದುಕೊಟ್ಟಿತ್ತು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ವಿದ್ಯಾ ಬಾಲನ್ ಅದ್ಭುತ ಅಭಿನಯವನ್ನು ಕಟ್ಟಿಕೊಡುವ ಚಿತ್ರಗಳ ಪಟ್ಟಿ ಇಲ್ಲಿದೆ.

ದಿ ಡರ್ಟಿ ಪಿಚ್ಚರ್:

ಸಿಲ್ಕ್ ಸ್ಮಿತಾ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ವಿದ್ಯಾ ಬಾಲನ್ ಅಭಿನಯ ಹಾಗೂ ಸ್ಮಿತಾ ಪಾತ್ರಕ್ಕೆ ಜೀವ ತುಂಬಿದ ರೀತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಅತ್ಯಂತ ಬೋಲ್ಡ್ ಪಾತ್ರವನ್ನು ವಿದ್ಯಾ ಬಾಲನ್ ಬಹಳ ನಾಜೂಕಾಗಿ ನಿರ್ವಹಿಸಿದ್ದರು. ಈ ಚಿತ್ರದಲ್ಲಿನ ನಟನೆ ವಿದ್ಯಾ ಬಾಲನ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿತು. ನಂತರ ಅವರಿಗೆ ನಾಯಕಿ ಪ್ರಧಾನ ಪಾತ್ರಗಳು ಅರಸಿಕೊಂಡು ಬರತೊಡಗಿದವು.

ತುಮ್ಹಾರಿ ಸುಲು:

ಗೃಹಿಣಿಯಾಗಿ ‘ತುಮ್ಹಾರಿ ಸುಲು’ ಚಿತ್ರದಲ್ಲಿ ವಿದ್ಯಾ ಬಣ್ಣ ಹಚ್ಚಿದ್ದರು. ಆರ್​ಜೆಯಾಗಿ ಕೆಲಸ ಸಿಕ್ಕಿದಾಗ ಬದುಕು ಹೇಗೆ ಬದಲಾಗುತ್ತದೆ ಎನ್ನುವುದನ್ನು ಚಿತ್ರ ಕಟ್ಟಿಕೊಟ್ಟಿತ್ತು.

ಬೇಗಮ್ ಜಾನ್:

ಭಾರತ ವಿಭಜನೆಯ ಸಂದರ್ಭದಲ್ಲಿ ವೇಶ್ಯಾ ಗೃಹವನ್ನು ನಡೆಸುತ್ತಿದ್ದ ಮಹಿಳೆಯೊಬ್ಬಳ ಕತೆಯನ್ನು ‘ಬೇಗಮ್ ಜಾನ್’ ಒಳಗೊಂಡಿದೆ. ಯಾರಿಂದಲೂ ಅನುಕರಿಸಲಾಗದಂತಹ ಪಾತ್ರ ಪೋಷಣೆಯನ್ನು ವಿದ್ಯಾ ಆ ಚಿತ್ರದಲ್ಲಿ ನಡೆಸಿದ್ದರು. ಇದೇ ಕಾರಣಕ್ಕೆ ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದರು.

ಶಕುಂತಲಾ ದೇವಿ:

ಖ್ಯಾತ ಗಣಿತ ಶಾಸ್ತ್ರಜ್ಞೆ ಶಕುಂತಲಾ ದೇವಿ ಜೀವನವನ್ನು ಆಧರಿಸಿದ ಅದೇ ಹೆಸರಿನ ಚಿತ್ರದಲ್ಲಿ ವಿದ್ಯಾರದ್ದು ಸಂಪೂರ್ಣ ‘ಔಟ್ ಆಫ್​ ದಿ ಬಾಕ್ಸ್’ ನಟನೆ. ಶಕುಂತಲಾ ದೇವಿ ಅವರ ವ್ಯಕ್ತಿತ್ವ, ವೈಯಕ್ತಿಕ ಜೀವನ ಮೊದಲಾದವುಗಳನ್ನು ಕಟ್ಟಿಕೊಟ್ಟ ಈ ಚಿತ್ರದಲ್ಲಿ ವಿದ್ಯಾ ಅವರ ಮ್ಯಾನರಿಸಂ ಮೆಚ್ಚುಗೆ ಪಡೆದಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'83' ವರ್ಲ್ಡ್ ಕಪ್ ಗೆದ್ದಷ್ಟು ರೋಚಕವಾಗಿಲ್ಲ ಚಿತ್ರದ ಕಲೆಕ್ಷನ್;

Mon Jan 3 , 2022
ಇದೇ ಶುಕ್ರವಾರ ಬಿಡುಗಡೆ ಆದ ಬಹುನಿರೀಕ್ಷಿತ ’83’ ಚಿತ್ರ ವಿಮರ್ಶಕರಿಂದ ಮೆಚ್ಚುಗೆಯ ಮಾತುಗಳನ್ನು ಪಡೆಯುತ್ತಿದೆ. ಕಬೀರ್ ಖಾನ್ ನಿರ್ದೇಶನದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿರುವ ’83’ ಚಿತ್ರವು ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ನಲ್ಲಿ 1983 ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಹಿನ್ನಲೆಯನ್ನು ಕಥಾವಸ್ತುವಾಗಿ ಹೊಂದಿದೆ. ಹಿಂದೆ ಬಿಡುಗಡೆಯಾಗಿದ್ದ ಸುಶಾಂತ್ ಸಿಂಗ್ ರಾಜಪೂತ್ ಅಭಿನಯದ ‘ಧೋನಿ’ ಚಿತ್ರ ಮಹೇಂದ್ರ […]

Advertisement

Wordpress Social Share Plugin powered by Ultimatelysocial