ಕೆ. ಎಸ್. ನಾಗಭೂಷಣಂ ಪದರಂಗ ಪಿತಾಮಹ

 

 

ಕೊಳತೂರು ಸೋಮಸುಂದರಯ್ಯ ನಾಗಭೂಷಣಂ ಕನ್ನಡದ ಪತ್ರಿಕೋದ್ಯಮದಲ್ಲಿ ‘ನಾಭೂ’ ಎಂದೇ ಚಿರಪರಿಚಿತರಾದವರು. ಸುದ್ದಿಯ ಅಂತರಂಗ ಹಿಡಿಯುವ ಡೆಸ್ಕ್ ಪತ್ರಿಕೋದ್ಯಮದಲ್ಲಿ ಅವರದು ಎತ್ತಿದ ಕೈ. ಅವರು ಕೊಟ್ಟ ಶೀರ್ಷಿಕೆಗಳನ್ನು ಪತ್ರಿಕಾರಂಗದಲ್ಲಿ ಈಗಲೂ ನೆನಪಿಸಿಕೊಳ್ಳುವವರಿದ್ದಾರೆ ಎಂದರೆ ಅದು ಹೊಗಳಿಕೆಯ ಮಾತಲ್ಲ. ನಾಗಭೂಷಣ ಪತ್ರಿಕೋದ್ಯಮದ ಶಬ್ಧಬ್ರಹ್ಮ ಎಂಬ ಖ್ಯಾತಿ ಪಡೆದಿದ್ದರು, ಏಕೆಂದರೆ ಪ್ರಜಾವಾಣಿಯಲ್ಲಿ ಬರುವ ಪದರಂಗದ (ಈಗ ಪದಬಂಧವೆಂದು ಪ್ರಚಲಿತ) ಕರ್ತೃ ಇವರೇ. ಪ್ರಜಾವಾಣಿಯಲ್ಲಿ ಪದಬಂಧವನ್ನು ಪ್ರಾರಂಭಿಸಿ ಅದನ್ನು ತಮ್ಮುಸಿರಿರುವವರೆಗೂ ಸತತ 48 ವರ್ಷಗಳ ಕಾಲ ನಿರ್ವಹಿಸಿಕೊಂಡು ಬಂದಿದ್ದರು. ಪ್ರಜಾವಾಣಿಯಲ್ಲಿ ಸುದ್ದಿ ಸಂಪಾದಕರಾಗಿ 1991ರಲ್ಲಿ ನಿವೃತ್ತಿಪಡೆದರೂ ತಮ್ಮ ಭಾಷಾ ಕೆಲಸವನ್ನು 2016ರವರೆಗೆ ಮುಂದುವರೆಸಿದ್ದರು.ಕೆ. ಎಸ್. ನಾಗಭೂಷಣಂ ಮೂಲತಃ ಕೋಲಾರ ಜಿಲ್ಲೆಯ ಕೊಳತೂರಿನವರು. ಇವರು 1933ರ ಮಾರ್ಚ್ 2 ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜನಿಸಿದರು. ತಂದೆ ಸೋಮಸುಂದರಯ್ಯ. ತಾಯಿ ಪಾರ್ವತಮ್ಮ. ಈ ದಂಪತಿಗಳ ಒಂಭತ್ತು ಮಕ್ಕಳಲ್ಲಿ ಇವರು ಎರಡನೆಯವರು.ಕಾಲೇಜಿನ ದಿನಗಳಿಂದಲೇ ನಾಗಭೂಷಣಂ ಅವರಿಗೆ ಕನ್ನಡದ ನಂಟು. ಕಾಲೇಜು ವಿದ್ಯಾರ್ಥಿಯಾಗಿದ್ದಲೇ ನಾಟಕಗಳನ್ನು ಬರೆದಿದ್ದು ಇವು ನಂತರ ಆಕಾಶವಾಣಿಯಲ್ಲಿ ಬಾನುಲಿ ನಾಟಕಗಳಾಗಿ ಪ್ರಸಾರವಾಗಿದ್ದವು. ಬಿ.ಎಸ್ಸಿ ಪದವಿ ಓದುತ್ತಿದ್ದಾಗ ಸೆಂಟ್ರಲ್ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಜಿ.ಪಿ.ರಾಜತ್ನಂ ಅವರ ಮಾರ್ಗದರ್ಶನದಲ್ಲಿ ಹಿರಿಯ ಸಾಹಿತಿಗಳನ್ನು ಗೌರವಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದರು. ವಿಸೀ, ಅನಕೃ, ಅಡಿಗರು ಹೀಗೆ ಅನೇಕ ಸಾಹಿತಿಗಳ ಒಡನಾಟದ ಅವಕಾಶ ದೊರಕಿತು. ಹೀಗೆ ಅವರ ಒಲವು ಕನ್ನಡ ಸಾಹಿತ್ಯದ ಕಡೆಗೆ ವಾಲಿತು. ಇವರ ಬರವಣಿಗೆ ಶೈಲಿಯನ್ನು ಮೆಚ್ಚಿಕೊಂಡ ರಾಜರತ್ನಂ ಸ್ವತಃ ಪತ್ರಬರೆದು, “ನಿನ್ನ ಕನ್ನಡದ ಒಲವು ನನಗೆ ಮೆಚ್ಚುಗೆಯಾಗಿದೆ, ನೀನು ಇದೇ ಕ್ಷೇತ್ರದಲ್ಲಿ ಮುಂದುವರಿ, ಕನ್ನಡಕ್ಕಾಗಿದುಡಿ” ಎಂದಿದ್ದರು. ವಿಜ್ಞಾನದ ವಿದ್ಯಾರ್ಥಿಯಾದರೂ ಮುಂದೆ ಕನ್ನಡದ ಕೆಲಸಮಾಡುವುದೆಂದು ನಿರ್ಧರಿಸಿದ್ದರು.ಕಾಲೇಜು ಮುಗಿಸುತ್ತಿದ್ದಂತೆ ನಾಭೂ ಅವರಿಗೆ ಮುಂಬೈನಲ್ಲಿ ಆಲ್ ಇಂಡಿಯಾ ಲೋಕಲ್ ಸೆಲ್ಫ್ ಗವರ್ನಮೆಂಟ್ ಪ್ರಕಟಿತ ಸ್ಥಾನಿಕ ಸ್ವರಾಜ್ಯದ ಕನ್ನಡ ಸಂಪಾದಕರಾಗಿ ಕೆಲಸಕ್ಕೆ ಆಹ್ವಾನ ಬಂತು. ಈ ಕೆಲಸವನ್ನು ನಿರ್ವಹಿಸುವುದರ ಜೊತೆಯಲ್ಲಿ ಲಿಂಟಾಸ್ ಕಂಪನಿಯಲ್ಲಿ ಕನ್ನಡದ ಜಾಹೀರಾತುಗಳನ್ನು ಬರೆಯುವ ಅವಕಾಶ ಸಿಕ್ಕಿತು. ಎರಡು ವರ್ಷಗಳ ಕಾಲ ಲಿಂಟಾಸ್ ಕಂಪನಿಯಲ್ಲಿ ಮೂಡಿಬಂದ ಕನ್ನಡದ ಜಾಹೀರಾತುಗಳಿಗೆ ಅತ್ಯಾಕರ್ಷಕ, ವಿಭಿನ್ನ ಶೈಲಿಯ ಶೀರ್ಷಿಕೆಗಳನ್ನು ನೀಡಿದ್ದರು. ಅವರ ಪದಗಳ ಬಳಕೆ, ಪ್ರಾಸ, ಮತ್ತು ವಿವಿಧಾರ್ಥಗಳ ಜಾಹೀರಾತುಗಳು ಬಹಳ ಹೆಸರು ಪಡೆದವು. ಅವರನ್ನು ಅತ್ಯಂತ ಸೃಜಾನತ್ಮಕ ಬರಹಗಾರರೆಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂಬೈನಲ್ಲಿದ್ದಾಗ ಇವರು ಏಕಕಾಲದಲ್ಲಿ ವಿವಿಧ ಪತ್ರಿಕೆಗಳ ಜವಾಬ್ದಾರಿ ಹೊತ್ತಿದ್ದರು. ರೇಸಿಂಗ್ ನ್ಯೂಸ್ನ ಸಹಸಂಪಾದಕರಾಗಿ, ಜೆಡಬ್ಲ್ಯೂಟಿ ಕನ್ನಡ ಬರಹಗಾರರಾಗಿಯೂ ಕೆಲಸ ನಿರ್ವಹಿಸಿದ್ದರು.ತಾಯಿಯ ಅನಾರೋಗ್ಯದ ಕಾರಣ ಬೆಂಗಳೂರಿಗೆ ಬಂದ ನಾಭೂ ಅವರು ಕಾರ್ಯನಿರತ ಪತ್ರಕರ್ತರಾಗಿ ಬಿ.ಎನ್.ಗುಪ್ತರ ಜನಪ್ರಗತಿಯಲ್ಲಿ ವೃತ್ತಿ ಆರಂಭಿಸಿದರು. ಅಲ್ಲಿಂದ ತಾಯಿನಾಡು ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿದರು. ಇವರ ಪ್ರತಿಭೆಯನ್ನು ಮೆಚ್ಚಿ ಯುನಿವರ್ಸಲ್ ಪ್ರೆಸ್ ಸರ್ವೀಸ್ನಲ್ಲಿ ಕನ್ನಡ ಮುಖ್ಯಸ್ಥರಾಗಿ ಆಹ್ವಾನ ಬಂದಿತು. ಕೆಲ ಕಾಲ ಇಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಲ ತೀರದ ಭಾರ್ಗವ ಸಿನಿಮಾ ನೋಡಿ ಪ್ರೇಕ್ಷಕರು ಕೊಟ್ಟ ರೇಟಿಂಗ್.

Fri Mar 3 , 2023
  ಶುಕ್ರವಾರ ಬಂತು ಅಂದ್ರೆ ಸಿನಿಮಾ ಪ್ರೀಯರಿಗೆ ಚಿತ್ರಗಳ ಹಬ್ಬ ಆರಂಭವಾಗುತ್ತೆ. ಇಂದು ಕೂಡ ಐದಕ್ಕಿಂತ ಹೆಚ್ಚು ಚಿತ್ರಗಳು ರಾಜ್ಯಾದ್ಯಂತ ತೆರೆಕಂಡಿವೆ ಅದರಲ್ಲಿ ಕಡಲ ತೀರದ ಭಾರ್ಗವ ಚಿತ್ರವೂ ಒಂದು .ಕಡಲ ತೀರದ ಭಾರ್ಗವ ಹೆಸರಿಗೆ ತಕ್ಕಂತೆಯೇ ಚಿತ್ರದ ದೃಶ್ಯಗಳು ಟ್ರಾವೆಲ್‌ ಮಾಡುತ್ತೆ , ಇನ್ನೂ ಚಿತ್ರದಲ್ಲಿ ನಾಯಕನ ಪಾತ್ರ ಹಾಗೂ ಸೇಹ್ನಿತನ ಪಾತ್ರ , ನಾಯಕಿ ಪಾತ್ರಧಾರಿಗಳ ಸುತ್ತ ಈ ಕಥೆ ಆವರಿಸಿದೆ. ನಮ್ಮ ಮನಸ್ಸು ನಮ್ಮ ಹಿಡಿತಕ್ಕೆ […]

Advertisement

Wordpress Social Share Plugin powered by Ultimatelysocial